ಅಕ್ಷರ ದಾಸೋಹ ಕಾರ್ಯಕ್ರಮ

ಅಕ್ಷರ ದಾಸೋಹ ಕಾರ್ಯಕ್ರಮ Letter-writing program

ಯರಗಟ್ಟಿ   02: ಸರಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಹಾಯಕರು ಅಡುಗೆ ಕೊಠಡಿಗೆ ತೆರಳುವ ಮುನ್ನ ತಲೆಗೆ ಕ್ಯಾಪ್, ಕೆ?ಗೆ ಎಪ್ರಾನ್ ಧರಿಸಿ ಶುಚಿತ್ವ ಕಾಪಾಡಿಕೊಳ್ಳಿ ಎಂದು ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಹೇಳಿದರು.ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಆವರಣದಲ್ಲಿ ಯರಗಟ್ಟಿ, ಶಿವಾಪೂರ, ಸತ್ತಿಗೇರಿ, ಯರರ್ಝವಿ, ತಲ್ಲೂರು  ಕ್ಲಸ್ಟರ್ ವ್ಯಾಪ್ತಿಯ ಅಡುಗೆ ಸಹಾಯಕರಿಗೆ ಅಕ್ಷ ರ ದಾಸೋಹ ಕಾರ್ಯಕ್ರಮ, ಯರಗಟ್ಟಿ-ಸವದತ್ತಿ ಅಕ್ಷರ ದಾಸೋಹ ಅಧಿಕಾರಿ, ಯರಗಟ್ಟಿ ತಾಲೂಕಿನ ಸಿಆರ್‌ಪಿಗಳ ಸಂಯುಕ್ತ ಆಶ್ರಯದಲ್ಲಿ ಅಡುಗೆ ಸಹಾಯಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಯರಗಟ್ಟಿ ಸವದತ್ತಿ ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಮೈತ್ರಾದೇವಿ ವಸ್ತ್ರದ ಮಾತನಾಡಿ,

ಅಡುಗೆ ಸಿಬ್ಬಂದಿ ಆಹಾರ ಸಂಗ್ರಹ ಕೊಠಡಿ ಮತ್ತು ಅಡುಗೆ ಕೋಣೆಯನ್ನು ಸದಾ ಸ್ವಚ್ಚವಾಗಿಡಬೇಕು, ಅಗತ್ಯಕ್ಕೆ ತಕ್ಕಂತೆ ಪದಾರ್ಥಗಳನ್ನು ಬಳಕೆ ಮಾಡಿಕೊಳ್ಳಬೇಕು ಗ್ಯಾಸ್ ಮತ್ತು ಊಟ ತಯಾರಿಸುವ ಪದಾರ್ಥಗಳನ್ನು ಮಿತವಾಗಿ ಬಳಸಿ      ಎಂದು ಮೈತ್ರಾದೇವಿ ವಸ್ತ್ರದ ಹೇಳಿದರು.ಈ ವೇಳೆ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಸಿ.ಆರ್‌.ಪಿಗಳಾದ ವಸಂತ ಬಡಿಗೇರ, ಎಮ್‌. ಎಮ್‌. ಮಲ್ಲಕನ್ನವರ, ಸೋಮೇಶ ಪೂಜೇರ,   ಜಿ. ಎನ್‌. ಮಲ್ಲಕನ್ನವರ, ಸರಕಾರಿ ನೌಕರರ ಸಂಘದ ಸದಸ್ಯರಾದ, ವಿಜಯ ಮೆಳವಂಕಿ, ಮುಖ್ಯೋಪಾಧ್ಯಾಯ ಎ. ಎ. ಮಕ್ತುಮನ್ನವರ, ಎಸ್‌. ಬಿ. ಮಿಕಲಿ, ಶಿಕ್ಷಕರಾದ ಬಿ. ಎಂ. ಸರದಾರ, ರಮೇಶ ಹುಣಶೀಕಟ್ಟಿ,   ಸಾವಿತ್ರಿ ಗಣಾಚಾರಿ ಸೇರಿದಂತೆ ತಾಲೂಕಿನ ಅಡುಗೆ ಸಹಾಯಕಿಯರು ಇದ್ದರು. ಹಾಗೂ ತರಬೇತಿಯಲ್ಲಿ 120ಕ್ಕೆ ಹೆಚ್ಚು ಅಡುಗೆ ಸಹಾಯಕರು ಭಾಗವಹಿಸಿದ್ದರು.