ಬಾಬಾಸಾಹೇಬರ ಸಿದ್ಧಾಂತದಲ್ಲಿ ನಾವು ನಡೆಯೋಣ: ಶರಣ ಜಮಖಂಡಿ

  ಬಾಬಾಸಾಹೇಬರ ಸಿದ್ಧಾಂತದಲ್ಲಿ ನಾವು ನಡೆಯೋಣ: ಶರಣ ಜಮಖಂಡಿ  Let us walk in the ideology of Babasaheb: Sharan Jamkhandi

ವಿಜಯಪುರ 06 :     ವಿಜಯಪುರ ಜಿಲ್ಲೆ ಹಳೆ ಪ್ರವಾಸ ಮಂದಿರದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಬಬಲೇಶ್ವರ ತಾಲೂಕಾ ಪದಾಧಿಕಾರಿಗಳ ಸಮಾರಂಭ ಜರುಗಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ  ಶರಣ ಜಮಖಂಡಿ ಮಾತನಾಡಿ, ಅಂಬೇಡ್ಕರ್ ರವರು  ಸಮಾನತೆ ದೇಶದಲ್ಲಿ ಎಲ್ಲರಿಗೂ ಸಿಗಬೇಕು. ಸಂವಿಧಾನದ ಉಳುವಿಗಾಗಿ ನಾವು ಸಂಘಟನೆ ಬಲಪಡಿಸೋಣ ಎಂದು ಹೇಳಿದರು. ಬಾಬಾಸಾಹೇಬರ ಸಿದ್ಧಾಂತದಲ್ಲಿ ನಾವು ನಡೆಯೋಣ ಎಂದು ಮಾತನಾಡಿದರು. 

ಜಿಲ್ಲಾಧ್ಯಕ್ಷ ಸುಖದೇವ  ಎಸ್‌. ಕಟ್ಟಿಮನಿ , ಅಧ್ಯಕ್ಷರಾಗಿ ಭಾಗಿಯಾಗಿ ಮಾತನಾಡಿದ ಅವರು, ದೇಶದಲ್ಲಿ ಸಂವೀಧಾನ ಅಪಾಯದಲ್ಲಿದೆ ನಾವೆಲ್ಲರು ಸಂವಿಧಾನವನ್ನು ರಕ್ಷಣೆ ಮಾಡೋಣ ಎಂದು ಹೇಳಿದರು. 

ಜಿಲ್ಲೆಯಲ್ಲಿ ಸಂಘಟನೆಗಳ ಬಲವಾಗಿ ಬೆಳೆಸೋಣ, ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದರು. ಎಲ್ಲರಿಗೂ ಪ್ರಮಾಣ ಪತ್ರ ನೀಡಿದರು. ಬಬಲೇಶ್ವರ ತಾಲೂಕ ಅಧ್ಯಕ್ಷರನ್ನಾಗಿ ಯಮನಪ್ಪ ಹಾದಿಮನಿ ಪ್ರಧಾನ ಕಾರ್ಯದರ್ಶಿ ಮಾರುತಿ ಜಂಬಗಿ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ದೇವಾಪೂರ, ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಅಮೀನಸಾಬ ಮುಲ್ಲಾ, ಪರಶು ಪಾರಣ್ಣವರ, ನಗರ ಘಟಕ ಅಧ್ಯಕ್ಷ ಹುಸೇನ ಬಡೇಗಾರ ಅವರಿಗೆ ಪ್ರಮಾಣ ಪತ್ರ ನೀಡಿದರು. 

ಕಾರ್ಯಕ್ರಮದಲ್ಲಿ ಶರಣ ಜಮಖಂಡಿ, ಸುಖದೇವ ಕಟ್ಟಿಮನಿ, ತಿಪ್ಪಣ್ಣ ಮೇಲಿನಮನಿ, ಕಮಲಾ ಕಾಟಮ್ಮನ್ನಹಳ್ಳಿ , ರಾಘು ಚಲವಾದಿ, ಅಶೋಕ ಕೊಂಡಗೂಳಿ, ಮೋಹನ ಆಲಗೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.