ಅಕ್ಷರ ಕಲಿಸಿದ ಗುರುಗಳ ಸದಾ ಸ್ಮರಿಸೋಣ: ಸಾತಿಹಾಳ

ಅಕ್ಷರ ಕಲಿಸಿದ ಗುರುಗಳ ಸದಾ ಸ್ಮರಿಸೋಣ: ಸಾತಿಹಾಳ Let us always remember the teachers who taught us letters: Satihala

ದೇವರಹಿಪ್ಪರಗಿ 03 : ಗುರು-ಶಿಷ್ಯರ ಸಂಬಂಧ ಪವಿತ್ರವಾದದ್ದು, 3 ದಶಕಗಳ ಬಳಿಕ ತಮಗೆ ಅಕ್ಷರ ನೀಡಿದ ಶಿಕ್ಷಕರನ್ನು ನೆನೆದು ಗೌರವ ಸಲ್ಲಿಸುತ್ತಿರುವುದು ಮಾದರಿ ಕಾರ್ಯ ಎಂದು ಕೆರೂಟಗಿ ಸ.ಹಿ.ಪ್ರಾ.ಶಾಲೆ ಮುಖ್ಯ ಗುರುಗಳಾದ ಎಸ್‌.ಎಸ್‌.ಸಾತಿಹಾಳ ಹೇಳಿದರು.ತಾಲೂಕಿನ ಬೂದಿಹಾಳ ಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗದ ಗುರುವಂದನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು,ಕಲಿತ ಶಾಲೆ, ಪಾಠ ಹೇಳಿಕೊಟ್ಟ ಗುರುಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ತಮ್ಮ ಬದುಕಿಗೆ ದಾರಿ ತೋರಿದ ಗುರುಗಳ ಋಣ ತೀರಿಸಲು ಒಗ್ಗೂಡಿರುವ ನಿಮ್ಮ ನಡೆ ನಿಜಕ್ಕೂ ಅನುಕರಣೀಯ ಎಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ದೇವೂರ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು, ಗುರು ಮತ್ತು ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಹೇಳಿದರು.

ಸಂದರ್ಭದಲ್ಲಿ ಶಿಕ್ಷಕರಾದ ಜಿ.ಬಿ.ಹೊಕ್ಕುಂಡಿ, ಶೇಖಸಾಬ್ ಪಾನಪರೋಶ, ಎನ್‌.ಎಸ್‌.ಸಜ್ಜನ, ಪಿ.ಸಿ.ತಳಕೇರಿ, ಆರಿ​‍್ಜ.ಬನಸಿ, ಬಿ.ಎಂ.ಕಠಾರೆ, ಶಿವನಗೌಡ ಪಾಟೀಲ, ವಿ.ಎಸ್‌.ಅಗ್ನಿ, ಪಿ.ಎಸ್‌.ಓತಿಹಾಳ, ಎಸ್‌.ಎಸ್‌.ಇನಾಮದಾರ, ಜಿ.ಎ.ಪಾಟೀಲ, ಎಂ.ಎನ್‌.ಮಯೂರ, ಪಿ.ಆಯ್‌.ಕಾಳೆ, ಶಕುಂತಲಾ ಗುಬ್ಬೇವಾಡ ಮಾತನಾಡಿದರು. ಎಸ್ಡಿಎಮ್ಸಿ ಅಧ್ಯಕ್ಷ ಗುರುಬಾಳಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಭೂದಾನಿ ದಿ.ಬಸವಂತ್ರಾಯಗೌಡ ಬಿರಾದಾರ ಹಾಗೂ ಎಸ್ಡಿಎಮ್ಸಿ ಮಾಜಿ ಅಧ್ಯಕ್ಷ ದಿ.ಗುರಣ್ಣ ಸಾವಳಗಿ ಅವರಿಗೆ ಗೌರವ ಸಮರೆ​‍್ಣ ಜರುಗಿತು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಪ್ರಕಾಶ ಪಾಟೀಲ, ಮಹಾದೇವ ಸತ್ಯಪ್ಪಗೋಳ, ಮಹಾಂತೇಶ ಬಿರಾದಾರ, ಭೀರಲಿಂಗ ಪೂಜೇರಿ, ಈರಣ್ಣ ಇಜೇರಿ, ಅನೀಲ ಬಿರಾದಾರ, ಮಂಜುನಾಥ ಸಾವಳಗಿ, ನಾನಾಗೌಡ ಬಿರಾದಾರ, ಶಿವರಾಜ ತಾಳಿಕೋಟಿ, ಸುಧಾಕರ ಬಿರಾದಾರ, ಈರಣ್ಣ ಬಡಿಗೇರ, ಅಂಬರೀಷ್ ಮಸಬಿನಾಳ, ನಾಗೇಶ ದೇವತಗಲ್ ಸೇರಿದಂತೆ ಇತರರು ಇದ್ದರು.