ಸಂತ ಸೇವಾಲಾಲರ ಸಂದೇಶಗಳು ನಾವೆಲ್ಲರೂ ಪಾಲಿಸೋಣ: ತಹಶೀಲ್ದಾರ ಬಿರಾದಾರ
Let us all follow the messages of Saint Sevalal: Tahsildar Biradar
ಲೋಕದರ್ಶನ ವರದಿ
ದೇವರಹಿಪ್ಪರಗಿ 15: ಸಂತ ಶ್ರೀ ಸೇವಾಲಾಲ್ ಮಹಾರಾಜರು ಶಿಕ್ಷಣ,ಸ್ವಾಭಿಮಾನ,ಸಚ್ಚಾರಿತ್ರ್ಯ ಹಾಗೂ ಸತ್ಸಂಗದ ಕುರಿತು ನೀಡಿದ ಸಂದೇಶಗಳು ಸಾರ್ವಕಾಲಿಕ ಸತ್ಯ ಎನಿಸಿಕೊಂಡಿವೆ ಎಂದು ತಹಶೀಲದಾರ ನಿಂಗಣ್ಣ ಬಿರಾದಾರ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ರವಿವಾರ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಶಿಕ್ಷಕ ಅರುಣ ಕೋರವಾರ ಅವರು ಉಪನ್ಯಾಸವನ್ನು ನೀಡುತ್ತಾ ಬಂಜಾರಾ ಸಮಾಜದ ಆರಾಧ್ಯ ದೇವರಾಗಿರುವ ಸೇವಾಲಾಲರಿಗೆ ಪೋರ್ಚುಗೀಸರು ನೀಡುತ್ತಿದ್ದ ಗೌರವ ಹಾಗೂ ಅವರು ನಡೆದು ಬಂದ ದಾರಿಯನ್ನು ವಿವರವಾಗಿ ತಿಳಿಸುವ ಮೂಲಕ ಸಂತ ಸೇವಾಲಾಲರ ಕುರಿತು ಉಪನ್ಯಾಸ ನೀಡಿದರುಶಿರಸ್ತೇದಾರ ಸುರೇಶ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕ ಆಡಳಿತದ ಪರವಾಗಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಂಗಡಿ, ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಜಿ.ಪಿ.ಬಿರಾದಾರ, ಸಮಾಜದ ತಾಲ್ಲೂಕು ಅಧ್ಯಕ್ಷ ಈಶ್ವರ ಚವ್ಹಾಣ, ಕಂದಾಯ ನೀರೀಕ್ಷಕ ಶಿವಶಂಕರ ಜಾಧವ,ಪಿ.ಕೆ.ನಾಯಕ, ಕಾಶಿನಾಥ ಚವ್ಹಾಣ,ಬಾಳು ರಾಠೋಡ, ಸುಭಾಸ ರಾಠೋಡ, ಚನಬಸು ಹೊಸಮನಿ,ಸಂತೋಷ ತಳವಾರ, ರವಿ ಮೆಟಗಾರ, ಸುರೇಶ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 