ಸೇವೆ ಅನುಕರಣೀಯವಾಗಿರಲಿ: ಡಾ. ಸಾವಂತ

ಧಾರವಾಡ 15: ನಮ್ಮ ಮನಸ್ಸು ಪರಿಶುದ್ಧವಾಗಿದ್ದರೆ ನಮ್ಮಿಂದ ಉತ್ತಮ ಕಾರ್ಯಗಳು ನಡೆಯುತ್ತವೆ. ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಉದಾತ್ತ ಕಾರ್ಯಗಳು ನಡೆಯುತ್ತವೆ. ಆಧ್ಯಾತ್ಮಿಕ ಚಿಂತನೆಯು ಮನುಷ್ಯನನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುತ್ತದೆ. ಒಳ್ಳೆಯ ವ್ಯಕ್ತಿಗಳಿಂದ ಮಾತ್ರ ಒಳ್ಳೆಯ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಎಂ.ವಾಯ್. ಸಾವಂತ ಶನಿವಾರ ಇಂದಿಲ್ಲಿ ನುಡಿದರು. 

ಇಲ್ಲಿಯ ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ 'ಎಸ್.ವಿ.ನಾಯ್ಕರಾಣೆ ಕುಟುಂಬದವರು ಇರಿಸಿದ ದತ್ತಿಯನ್ನು ನಂದಾದೀಪವನ್ನು ಬೆಳಗಿಸುವುದರ ಮೂಲಕ ಅವರು ದತ್ತಿ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಅಧಿಕಾರ ಇದ್ದಾಗ್ಗೆ ಜನಮೆಚ್ಚುವಂತೆ ಮನಸ್ಸು ಒಪ್ಪುವಂತೆ, ಜನರು ಸದಾಕಾಲ ನೆನಪಿನಲ್ಲಿಡುವಂತ ಕಾರ್ಯಗಳನ್ನು ಮಾಡಬೇಕು. ನಾವು ಮಾಡಿದ ಸೇವೆಯು ಅನುಕರಣೀಯವಾಗಿರಬೇಕು ಎಂದು ಹೇಳಿದ ಅವರು ಎಸ್.ವ್ಹಿ. ನಾಯ್ಕರಾಣೆಯವರು ತಹಶೀಲ್ದಾರರಾಗಿ, ವಿಶೇಷ ಜಿಲ್ಲಾಧಿಕಾರಿಗಳಾಗಿ ವಿವಿಧ ಕಡೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಕೊಂಡಾಡಿ ಅವರು ಕಾರ್ಯಮಾಡಿದ ಬಹುದೂರದ ಬೇರೆ ಬೇರೆ ಊರುಗಳಿಂದ ಬಂದ ಜನರು ಇಂದಿನ ಸಭೆಯಲ್ಲಿ ಅವರನ್ನು ಗೌರವಿಸಿದ್ದೆ ಸಾಕ್ಷಿ ಎಂದು ಪ್ರಶಂಸೆ ಮಾಡಿದರು. ಪ್ರಾಮಾಣಿಕತೆಗೆ ಸದಾಕಾಲವೂ ಗೌರವ ಮನ್ನಣೆಗಳು ದೊರೆಯುತ್ತವೆ ಎಂದು ಹೇಳಿದರು. 

ದಾನ ಮಾಡುವುದು ಪುಣ್ಯದ ಕೆಲಸ. ನಾವು ಮಾಡಿದ ದಾನದ ಎಷ್ಟೋ ಪಟ್ಟು ಹೆಚ್ಚು ಪ್ರತಿಫಲ ನಮಗೆ ಗೊತ್ತಾಗದಂತೆ ನಮಗೇ ಮರಳಿ ಬರುತ್ತದೆ. ದಾನ ಮಾಡುವ ಗುಣವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಡಾ. ಸಾವಂತ ನುಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆನರಾ ಬ್ಯಾಂಕಿನ ನಿವೃತ್ತ ಎ.ಜಿ.ಎಮ್. ಅಶೋಕ ರಾಣೆ ಮಾತನಾಡಿ, ನಮ್ಮ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಭಾರತದಿಂದ ಮಾರ್ಗದರ್ಶನವನ್ನು ಇಡೀ ಜಗತ್ತೇ ಪಡೆಯುತ್ತಿರುವಾಗ ನಾವು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ವಿಪಯರ್ಾಸ ಎಂದರು. ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ನಮ್ಮ ಶ್ರೇಷ್ಠ ಪರಂಪರೆಯನ್ನು ಇಂದಿನಿಂದಲೇ ತಿಳಿಸಿಕೊಡಬೇಕು. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ, ಅವರಲ್ಲಿ ದೇಶಪ್ರೇಮವನ್ನು ಮೂಡಿಸಿ ಅವರು ಸಮಾಜದ ಶ್ರೇಯಸ್ಸಿಗಾಗಿ ದುಡಿಯಲು ಹಿರಿಯರು ಮಾರ್ಗದರ್ಶನ ಮಾಡುವುದು ಅವಶ್ಯವಾಗಿದೆ ಎಂದರು. 

ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಕೊಂಕಣ-ಮರಾಠಾ ಸಮಾಜದ ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕ ಎಂ.ಎ. ನಾಯ್ಕ ಮತ್ತು ಎಸ್. ಪಿ. ದೇಸಾಯಿಯವರನ್ನು ಸನ್ಮಾನಿಸಲಾಯಿತು.  

ಇಂದು 76 ನೇ ಜನ್ಮದಿನದ ಶುಭಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ಬೇರೆ ಬೇರೆ ಊರುಗಳಿಂದ ಬಂದಂತಹ  ಗಣ್ಯರು ಎಸ್.ವ್ಹಿ. ನಾಯ್ಕರಾಣೆ ಹಾಗೂ ಗೀತಾ ನಾಯ್ಕರಾಣೆಯವರನ್ನು ಸನ್ಮಾನಿಸಿ, ಶುಭ ಹಾರೈಸಿದರು. 

ಭಾವುಕರಾಗಿ ಮಾತನಾಡಿದ ಎಸ್.ವ್ಹಿ. ನಾಯ್ಕರಾಣೆಯವರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ, ತಂದೆ-ತಾಯಿ, ಗುರು-ಹಿರಿಯರು ಹಾಗೂ ಸಮಾಜದ ಮುಖಂಡರ ಮಾರ್ಗದರ್ಶನದಲ್ಲಿ ತಾವು ಸಲ್ಲಿಸಿದ ಸೇವೆಗಾಗಿ ನನಗೆ ತೃಪ್ತಿ ಇದೆ ಎಂದರು. ಸಾಹಿತ್ಯ ಪ್ರಪಂಚಕ್ಕೆ ಕ.ವಿ.ವ. ಸಂಘವು ಸಲ್ಲಿಸಿದ ಸ್ಮರಣೀಯ ಸೇವೆಗಾಗಿ ತಾವು ಈ ಸಂಘದಲ್ಲಿ ತಮ್ಮ ಕುಟಂಬದ ಪರವಾಗಿ ದತ್ತಿ ಇರಿಸಿದ್ದಾಗಿ ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಖ್ಯಾತ ನ್ಯಾಯವಾದಿ ಆನಂದಕುಮಾರ ಮಗದುಮ್ಮ ಮಾತನಾಡಿ, ಎಸ್.ವ್ಹಿ. ನಾಯ್ಕರಾಣೆಯವರು ಯೋಧರಾಗಿ, ಸಾಹಿತಿಯಾಗಿ, ಚಿಂತಕರಾಗಿ, ಪರಿಸರ ಪ್ರೇಮಿಯಾಗಿ, ಮಾನವೀಯ ಅಂತಃಕರಣದ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಒಬ್ಬ ಅನುಕರಣೀಯ ವ್ಯಕ್ತಿಯಾಗಿದ್ದು, ಅವರನ್ನು ನಾವು ಅನುಸರಿಸಬೇಕು. ಈ ಸಮಾಜದಲ್ಲಿ ಇಂಥವರ ಸಂಖ್ಯೆ ಹೆಚ್ಚಾದರೆ, ಉತ್ತಮ ಸಮಾಜ ನಿಮರ್ಾಣ ಕಾರ್ಯ ಸಾಧ್ಯ ಎಂದು ಅವರನ್ನು ಪ್ರಶಂಶಿಸಿ ಶುಭ ಹಾರೈಸಿದರು. 

ಕ.ವಿ.ವ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಹಾಗೂ  ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಣ್ಯರನ್ನೆಲ್ಲಾ ಪರಿಚಯಿಸಿದರು. ಪ್ರೊ. ರಾಜೇಶ ಹೊಂಗಲ್ ನಿರೂಪಿಸಿದರು. ಪ್ರೇಮಾನಂದ ಶಿಂಧೆ ಪ್ರಾಥರ್ಿಸಿದರು. ಕಾ.ಕಾ. ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ವಂದಿಸಿದರು. 

ಶಾಂತೇಶ ಗಾಮನಗಟ್ಟಿ, ಗಣ್ಯರಾದ ವೀರಣ್ಣ ಒಡ್ಡೀನ, ಪ್ರಭು ಹಂಚಿನಾಳ, ಮಹೇಶ ಕುಲಕಣರ್ಿ, ರಾಮಚಂದ್ರ ಧೋಂಗಡೆ, ಚಂದ್ರಶೇಖರ ಅಮೀನಗಡ, ಚನಬಸಪ್ಪ ಅವರಾದಿ, ಮಾತರ್ಾಂಡಪ್ಪ ಕತ್ತಿ ಅವರು ಸೇರಿದಂತೆ ಕೊಂಕಣ-ಮರಾಠಾ ಸಮಾಜದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.