ಯೋಜನೆಗಳು ಸೂಕ್ತ ಕುರಿಗಾರರಿಗೆ ತಲುಪಲಿ : ಚಿಂಚಲಿ
Let the projects reach the right shepherds: Chinchali
ಕೊಪ್ಪಳ 03 : ಸರಕಾರದ ಯೋಜನೆಗಳು ಸೂಕ್ತ ಕುರಿಗಾರರಿಗೆ ತಲುಪಲಿ ಎಂದು ಕೊಪ್ಪಳ ಯಲಬುರ್ಗಾ ತಾಲೂಕು ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಹನುಮಂತಪ್ಪ ಚಿಂಚಲಿ ಹೇಳಿದರು.ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಸರಿಯಾದ ಕುರಿಗಾರರಿಗೆ ಯೋಜನೆಗಳು ತಲುಪುತ್ತಿಲ್ಲ, ಯೋಜನೆಗಳು ಸೂಕ್ತ ಕುರಿಗಾರರಿಗೆ ತಲುಪಬೇಕು, ಕುರಿ ಅಭಿವೃದ್ಧಿ ನಿಗಮದಡಿ ಬರುವ ಯಾವುದೇ ಯೋಜನೆಗಳನ್ನು ಕುರಿ ಸಹಕಾರ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿರುವ ಪಲಾನುಭವಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರ ಮೂಲಕ ಅನುಷ್ಠಾನಗೊಳಿಸುತ್ತಿತ್ತು ಇತ್ತೀಚೆಗೆ ಸರಕಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆದೇಶ ಮಾರ್ಾಡು ಮಾಡಿ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿಯನ್ನು ಮಾಡುವಂತೆ ಹಾಗೂ ಸಹಕಾರ ಸಂಘಗಳಲ್ಲಿ ಸದಸ್ಯರು ಆಗಿರಬೇಕೆಂಬ ನಿಯಮವನ್ನು ಹೊರತುಪಡಿಸಿ ಯೋಜನೆ ಅನುಷ್ಠಾನಗೊಳಿಸುವಂತೆ ಆದೇಶ ಹೊರಡಿಸಿರುತ್ತಾರೆ,
ಇದರಿಂದ ಸಹಕಾರ ಸಂಘಗಳು ಈಗಾಗಲೇ ತುಂಬಾ ನಷ್ಟ ಅನುಭವಿಸುತ್ತಿದ್ದು ಅದರಲ್ಲಿ ಕೂಡ ಹತ್ತಾರು ವರ್ಷಗಳಿಂದ ಸಹಕಾರ ಸಂಘಗಳನ್ನು ಕಷ್ಟಪಟ್ಟು ನಡೆಸಿಕೊಂಡು ಬಂದಿರತಕ್ಕಂತಹ ಸದಸ್ಯರು ಹಾಗೂ ಆಡಳಿತ ಮಂಡಳಿಯವರಿಗೆ ತುಂಬಾ ಅನ್ಯಾಯವಾಗಿರುತ್ತದೆ, ಶಾಸಕರು ಅವರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಯೋಜನೆ ಆಯ್ಕೆ ಮಾಡುವುದರಿಂದ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ನಿಜವಾದ ಫಲಾನುಭವಿಗಳು ವಂಚಿತರಾಗುತ್ತಾರೆ, ಕುರಿ ಅಭಿವೃದ್ಧಿ ನಿಗಮ ಕೊಪ್ಪಳ ಜಿಲ್ಲೆ ಮತ್ತು ಕುರಿ ಅಭಿವೃದ್ಧಿ ನಿಗಮ ರಾಜ್ಯದ 694 ಸಹಕಾರ ಸಂಘಗಳ ಸಂಯೋಜನೆಯೊಂದಿಗೆ ಸದಸ್ಯತ್ವ ಪಡೆದು ಇಲ್ಲಿವರೆಗೂ ಕೂಡ ಕಾರ್ಯನಿರ್ವಹಿಸುತ್ತಿತ್ತು ಸಹಕಾರ ಸಂಘಗಳ ಸದಸ್ಯರನ್ನು ಯೋಜನೆಗೆ ಪರಿಗಣಿಸಲು ಅವಕಾಶ ಇಲ್ಲದಿರುವಾಗ ಕುರಿ ಅಭಿವೃದ್ಧಿ ನಿಗಮ ಮತ್ತು ಕುರಿ ಮಹಾ ಮಂಡಲ ಬೆತ್ತಲೆಯಾಗಿದೆ ಎಂದರು.
ಹಿರಿಯ ಮುಖಂಡ ಗುಡದಪ್ಪ ಬನ್ನಪ್ಪನವರ್ ಮಾತನಾಡಿ ಕುರಿಗಾರ ಸಮಸ್ಯೆಗಳಿಗೆ ಸರಕಾರ ಕೂಡಲೇ ಸ್ಪಂದಿಸಬೇಕು, ಈ ಹೊಸ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದರು.ಗವಿಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್ ಓಜನಹಳ್ಳಿ ಮಾತನಾಡಿ ಸರಕಾರದ ಹೊಸ ಆದೇಶದ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗುವುದರಿಂದ ಇದನ್ನು ಕೂಡಲೇ ವಾಪಸ್ ಪಡಿಬೇಕು ಎಂದು ಸರಕಾರವನ್ನು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷರುಗಳಾದ ಯಮನೂರ್ಪ ದನಕನದೊಡ್ಡಿ, ಜಗದೀಶ್ ವೀರಾಪುರ್, ರಾಘವೇಂದ್ರ ಕಿನ್ನಾಳ, ಯಮನೂರ್ಪ ಹಾಲಹಳ್ಳಿ, ಹನುಮೇಶ ಜಂತ್ಲಿ, ಶಿವಪ್ಪ ಹನುಮನಹಳ್ಳಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 