ಇವ ನಮ್ಮವ ಎನ್ನುವ ಶರಣತತ್ವ ವಿಶ್ವಸಂದೇಶವಾಗಲಿ : ಡಾ.ಮಹಾಂತಪ್ರಭು ಶ್ರೀ
Let the principle of surrender that this is ours be a message to the world: Dr. Mahantaprabhu Sri
ಲೋಕದರ್ಶನ ವರದಿ
ಹಾರೂಗೇರಿ 23: 12ನೇ ಶತಮಾನದ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಇವನಾರವ ಎಂದೆನಿಸದೇ ಇವನಮ್ಮವ ಎನ್ನುವ ವಿಶ್ವಭ್ರಾತೃತ್ವವನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ ಎಂದು ಶೇಗುಣಸಿ ವಿರಕ್ತಮಠದ ಪೂಜ್ಯಶ್ರೀ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಮೇ 15ರಿಂದ ಆಧ್ಯಾತ್ಮಿಕ ಪ್ರವಚನಕ್ಕಾಗಿ ಅಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡ ಶ್ರೀಗಳು ಅಸ್ಟ್ರೇಲಿಯಾದ ಮೆಲ್ಬೋರ್ನ, ಸಿಡ್ನಿ, ಬ್ರಿಸ್ಬೇನ್, ಅಡಿಲೇಡ್ ಹಾಗೂ ನ್ಯೂಜಿಲೆಂಡನ ಅಕ್ಲೆಂಡ್ ಮೊದಲಾದ ನಗರಗಳಲ್ಲಿ ಜರುಗಿದ 2026ನೇ ಸಾಲಿನ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
12ನೇ ಶತಮಾನದ ಬಸವಾದಿ ಶಿವಶರಣರು ಆಚರಿಸಿದ ಶಿವಯೋಗ, ಕಾಯಕ, ದಾಸೋಹ, ಪ್ರಜಾಪ್ರಭುತ್ವ ಮತ್ತು ಸಮಾನತೆಯ ಮೌಲ್ಯಗಳನ್ನು ನಾವೆಲ್ಲರೂ ಅರಿತು ಆಚರಿಸಿದಾಗ ವಿಶ್ವವೇ ಸಾಮರಸ್ಯದಿಂದ ಕೂಡಿದ ಕರ್ತಾರನ ಕಮ್ಮಟವಾಗುತ್ತದೆ ಎಂದರು.
ಪ್ರಚಲಿತ ಜಾಗತಿಕ ವಿದ್ಯಮಾನಗಳು ಮನಸ್ಸನ್ನು ವ್ಯಾಕುಲಗೊಳಿಸುತ್ತಿವೆ. 21ನೇ ಶತಮಾನ ಯುದ್ದದ ಶತಮಾನವಾಗದೇ, ದಯವೇ ಧರ್ಮದ ಮೂಲ ಆಶಯವಾಗಬೇಕು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಬೇಕು. ಸರ್ವರೂ ಸಮಾನರು ಎನ್ನುವ ತತ್ವ ನಡೆಯಲ್ಲಿ ಅಳವಡಿಕೊಂಡಾಗ ನಾವು ಪ್ರಜ್ಞಾವಂತರಾಗುತ್ತೇವೆಂದು ಪೂಜ್ಯರು ಹೇಳಿದರು.
ಕರ್ಮಭೂಮಿ ಅಸ್ಟ್ರೇಲಿಯಾದಲ್ಲಿದ್ದುಕೊಂಡು ಜನ್ಮಭೂಮಿಯ ಮಹಾಮಾನವತಾವಾದಿ ಬಸವಣ್ಣನವರ ತತ್ವಾಚರಣೆಗಳನ್ನು ಆಚರಿಸುತ್ತಿರುವ ಅನಿವಾಸಿ ಭಾರತೀಯರ ಮಾತೃದೇಶದ ಸಂಸ್ಕೃತಿಯ ಅಭಿಮಾನ, ಕಾಯಕ ಮತ್ತು ಸಮಾನತೆಯ ತತ್ವವನ್ನು ಅತ್ಯಂತ ಪರಿಣಾಮಕಾರಿಯಾಘಿ ಅನುಷ್ಠಾನಗೊಳಿಸಿರುವುದನ್ನು ಪೂಜ್ಯರು ಶ್ಲಾಘಿಸಿದರು.
ಅಸ್ಟ್ರೇಲಿಯಾ ಶರಣರಾದ ಮೆಲ್ಬೋರ್ನ್ನ ನಾಗರಾಜ ನಾವಲಗಟ್ಟಿ, ಸಿಡ್ನಿಯ ರತ್ನಾ ಹೇಮಂತ, ಬ್ರೀಸ್ಬೇನ್ನ ರೂಪಾ ಹೆಬ್ಬಂಡಿ, ಅಡಿಲೇಡ್ನ ಷಡಕ್ಷರಿ ಅಡವಯ್ಯನಮಠ ಹಾಗೂ ನ್ಯೂಜಿಲೆಂಡ್ ಆಕ್ಲೆಂಡ್ನ ವಿಶುಕುಮಾರ ಲೋಕಪಾಲ ಅವರ ಅಧ್ಯಕ್ಷತೆಯಲ್ಲಿ ನಗರಗಳಲ್ಲಿ ಬಸವಜಯಂತಿ ಕಾರ್ಯಕ್ರಮಗಳು, ವಚನ ಪಠಣ, ಪ್ರಾರ್ಥನೆ, ವಚನ ನೃತ್ಯಗಳು ನಡೆದವು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 