ಮಾಲಿನ್ಯಕಾರಕ ಕಾರ್ಖಾನೆಗಳು ಶಿಫ್ಟ್ ಆಗಲಿ : 152ನೇ ದಿನದ ಹೋರಾಟ
Let the polluting factories shift: 152nd day of struggle
ಲೋಕದರ್ಶನ ವರದಿ
ಕೊಪ್ಪಳ 31 : ನಗರಸಭೆ ಮುಂದೆ ನಡೆದಿರುವ 152ನೇ ದಿನದ ಬಳ್ದೂಟ ವಿರೋಧಿ ಧರಣಿಯನ್ನು ಬೆಂಬಲಿಸಿ ಮಾಜಿ ನಗರಸಭಾ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್ ಮಾತನಾಡಿ, ಬಲ್ಡೋಟ ಬೃಹತ್ ಬಂಡವಾಳದಲ್ಲಿ ವಿಸ್ತರಣೆಯಾದರೆ ಕೊಪ್ಪಳ ಭಾಗ್ಯನಗರ ಸಂಪೂರ್ಣವಾಗಿ ಮಾಲಿನ್ಯಗೊಂಡು ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಈ ಸುಧೀರ್ಘ ಹೋರಾಟದಿಂದ ಹಿರೆಬಗನಾಳ, ಹಾಲವರ್ತಿ , ಕಾಸನಕಂಡಿ, ಕುಣಿಕೇರಿ ಎಂತಹ ದುಸ್ಥಿತಿಗೆ ಈಡಾಗಿವೆ ಎಂದು ತಿಳಿಯುತ್ತದೆ. ವಿಧಾನಸೌಧವನ್ನು ತಲುಪಿ ಗಂಭೀರ ಚರ್ಚೆಗೆ ಗ್ರಾಸವಾದ ಕಾರ್ಖಾನೆ ಬಾಧನೆ ಮುಖ್ಯಮಂತ್ರಿಗಳು ಸದನದ ಗಮನ ಸೆಳೆದಾಗಿದೆ. ಮುಖ್ಯಮಂತ್ರಿಗಳು ಶೀಘ್ರ ಬಾಧಿತ ಹಳ್ಳಿಗಳಿಗೆ ಭೇಟಿ ಮಾಡಿ ಜನರ ನಿಜಸ್ಥಿತಿ ತಿಳಿದು ಬೇಗ ಆತಂಕ ದೂರ ಮಾಡಲಿ. ಕಳಕಳಿಯಿಂದ ಯೋಚಿಸುವ ಗುಣ ಹೊಂದಿರುವ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಕೊಪ್ಪಳ ಜನರ ಆತಂಕವನ್ನು ದೂರ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಈ ಹೋರಾಟವನ್ನು ತಡಮಾಡದೆ ತೀವ್ರಗೊಳಿಸಲು ಮುಂದಾದರೆ ಸರ್ಕಾರದ ಮೇಲೆ ಒತ್ತಡ ಬೀಳಲಿದೆ ಎಂದರು.
ಜಂಟಿ ಕ್ರಿಯಾ ವೇದಿಕೆಯ ತಂಡದಿಂದ ಇಂದು ನಗರದಲ್ಲಿ ಗವಿಶ್ರೀನಗರ, ಸದಾಶಿವನಗರ, ಕಿನ್ನಾಳ ರಸ್ತೆಯ ಅಗಡಿ ಲೇಓಟ್ ಏರಿಯಾಕ್ಕೆ ತೆರಳಿ ಕರಿಬೂದಿಯ ದರ್ಶನ ಮಾಡಿತು. ಅಲ್ಲಿನ ಗೃಹಣಿಯರಿಂದ ನೆಲಹಾಸು ತೊಳೆದು, ತಿಳೀನೀರು ಕರೀನೀರಿಗೆ ಬದಲಾಗುವ ದೃಶ್ಯ ಕಂಡು ಬಂತು. ಅಲ್ಲಿನ ಗೃಹಿಣಿಯರು ಅಕ್ಟೋಬರ್ ತಿಂಗಳಿಂದ ಎಪ್ರೀಲ್ ಕೊನೆವರೆಗೆ ಇದೆ ದೂಳು, ಕರಿಬೂದಿ ಮನೆಯ ಪ್ರತಿ ಜಾಗದಲ್ಲಿ ಮೆತ್ತಿಕೊಳ್ಳುತ್ತದೆ ಎನ್ನುತ್ತಾರೆ. ಹೊರಗೆ ಕಾಣುವುದಿಷ್ಟು ದಿನಾಲು ಉಸಿರಾಟ ಮಾಡಿ ಎಷ್ಟು ಸೇವಿಸುತ್ತೇವೊ ಗೊತ್ತಾಗುವುದಿಲ್ಲ. ನಮ್ಮ ರೋಗಗಳಿಗೆ ಇದೆ ದೂಳು, ಕರಿಬೂದಿ ಹೆಚ್ಚಿನ ಕಾರಣ ಎಂದರು. ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಮಹಿಳೆಯರು ಜಾಗೃತರಾಗಿ ಹೋರಾಟ ಮಾಡಲು ಮುಂದೆ ಬರಬೇಕು. ಪರಿಸ್ಥಿತಿ ಕಳೆದುಕೊಂಡು ಮರುಗುವದಕ್ಕಿಂತ ಮುಂಜಾಗ್ರತೆಯ ಯೋಚನೆ ಮಾಡಿರಿ ಎಂದು ಆಂದೋಲನ ನಡೆಸಲಾಯಿತು.
ತಂಡದಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮಹಿಳಾ ನಾಯಕಿಯರಾದ ಜ್ಯೋತಿ ಎಂ. ಗೊಂಡಬಾಳ, ಕಾವ್ಯಾ ಗಡಾದ, ಸರೋಜಾ ಬಾಕಳೆ, ವಿದ್ಯಾ ಶರಣಪ್ಪ ಸಜ್ಜನ್, ಅಣ್ಣಪ್ಪ ಡೆಕೊರೇಟರ್, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರ್ಪ ಹಾಲಳ್ಳಿ ಬಸಾಪುರ, ಹನುಮಂತ ತಳವಾರ, ಶರಣು ಶೆಟ್ಟರ್, ಸುಭಾನ್ ಸಾಬ್ ನೀರಲಗಿ, ರಾಜಶೇಖರ ಏಳುಬಾವಿ ಇದ್ದರು.
ಧರಣಿಯಲ್ಲಿ ಯುವ ಮುಖಂಡ ಗ್ಯಾನೇಶ ಹ್ಯಾಟಿ ಭಾಗ್ಯನಗರ, ನಿವೃತ್ತ ಪ್ರಾಚಾರ್ಯ ಎಸ್. ಬಿ. ರಾಜೂರು, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ರತ್ನಮ್ಮ ದೊಡ್ಡಮನಿ, ಗಂಗಮ್ಮ ಕೊಡೇಕಲ್, ರವಿ ಕಾಂತನವರ, ಮಹಾಂತೇಶ ಕೊತಬಾಳ, ನಾಗರಾಜ ಕುಷ್ಟಗಿ, ಮಖ್ಬುಲ್ ರಾಯಚೂರು, ಎಂ.ಎಸ್. ಗಂಟಿ, ಶಂಭುಲಿಂಗಪ್ಪ ಹರಗೇರಿ, ಪಂಪಣ್ಣ ಚಿಂತಪಲ್ಲಿ, ಅಯ್ಯಪ್ಪ ಹಳ್ಳಿ, ಫೈಯಾಜ್ ಅಮೀದ್, ಭೀಮಪ್ಪ ಯಲಬುರ್ಗಾ, ಸುಂಕಮ್ಮ ಪಡಚಿಂತಿ ಮುಂತಾದವರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 