ಧಾರ್ಮಿಕ-ಸಮಾಜಮುಖಿ ಕಾರ್ಯಕಮಗಳಿಂದ ಸಮಾಜದಲ್ಲಿ ಸಾಮರಸ್ಯತೆ ಮೂಡಲಿ

ಧಾರ್ಮಿಕ-ಸಮಾಜಮುಖಿ ಕಾರ್ಯಕಮಗಳಿಂದ ಸಮಾಜದಲ್ಲಿ ಸಾಮರಸ್ಯತೆ ಮೂಡಲಿ Let religious and social activities bring harmony in society.

ಲೋಕದರ್ಶನ ವರದಿ 

 ವಿಜಯಪುರ 15: ಸಿದ್ಧಿ ವಿನಾಯಕ ಗಣೇಶನ ರೂಪಗಳಲ್ಲಿ ಅತಿ ಮಹತ್ವದ್ದಾಗಿದೆ. ಸಿದ್ಧಿವಿನಾಯಕ ಭಕ್ತರ ಇಚ್ಛಿತ ಸಿದ್ದಿ-ಸಂಕಲ್ಪಗಳನ್ನು ಈಡೇರಿಸುತ್ತಾ ಜೀವನದಲ್ಲಿ ಯಶಸ್ಸನ್ನು ದಯಪಾಲಿಸುತ್ತಾನೆ. ಜೀವನದಲ್ಲಿ ಎದುರಾಗುವ ಎಲ್ಲ ವಿಘ್ನ-ಸಂಕಷ್ಟಗಳನ್ನು ನಿವಾರಿಸಿ ಜ್ಞಾನ, ಬುದ್ಧಿ ಮತ್ತು ಸಮೃದ್ಧಿಯನ್ನು ಕರುಣಿಸೆಂದು ಭಕ್ತಿ-ಭಾವದಿಂದ ಪೂಜಿಸಬೇಕು ಎಂದು ಸಿದ್ಧಾರ್ಥ ನಗರದ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷ ಅನೀಲ ಫತ್ತೇಪೂರ ಅವರು ಅಭಿಪ್ರಾಯಪಟ್ಟರು. ಅವರು ನವರಸಪುರ ಸಿದ್ಧಾರ್ಥ ನಗರದ ಸಿದ್ಧಿವಿನಾಯಕ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ  ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಎಲ್ಲ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಗಣೇಶನಿಗೆ ಅಗ್ರಪೂಜೆ ಸಲ್ಲುತ್ತದೆ. ಸ್ಕಂದ ಪುರಾಣದ ಪ್ರಕಾರ, ಕಾಶಿಖಾಂಡದಲ್ಲಿ ಉಲ್ಲೇಖಿಸಲಾದ ವಿದ್ಯಾ ಪ್ರದಾಯಕನಾದ ಈ ಸಿದ್ಧಿವಿನಾಯಕನನ್ನು ಭಕ್ತಿಯಿಂದ ಆರಾಧಿಸಿದರೆ, ವಿಘ್ನನಿವಾರಕನಾಗಿ ಭಕ್ತರ ಜೀವನವನ್ನ ಉದ್ಧರಿಸುತ್ತಾನೆ. ನಾವು ದೈನಂದಿನವಾಗಿ ಸಿದ್ಧಿವಿನಾಯಕನನ್ನು ಆರಾಧಿಸುವುದರಿಂದ ದಾರಿದ್ರ್ಯ ದೂರಾಗಿ ಮನೆಯಲ್ಲಿ ಸುಖ-ಶಾಂತಿ, ಸಂತೋಷ-ನೆಮ್ಮದಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ಹೇಳಿದರು. 

ಅತಿಥಿಗಳಾದ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಗಳಲ್ಲಿ ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಜನರಲ್ಲಿ ಐಕ್ಯತೆ, ಸಾಮರಸ್ಯತೆ, ಸಮಗ್ರತೆ, ಸಮಷ್ಠಿಭಾವ ಮತ್ತು ಸಮತಾಭಾವದಂತಹ ಗುಣಗಳನ್ನು ಮೂಡಿಸುವುದರಿಂದ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ.  ನಾವೆಲ್ಲರೂ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ತನು-ಮನ-ಧನದಿಂದ ಸೇವೆ ಸಲ್ಲಿಸಬೇಕು. ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಧಾರ್ಮಿಕ ಮತ್ತು ಅಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಒಲವು ತೋರುತ್ತಾ, ಸದಾ ಪರೋಪಕಾರ, ಭಾವೈಕ್ಯತೆ, ಶಾಂತಿ-ಸಹಕಾರ, ಸಹಬಾಳ್ವೆ, ಸದಾಚಾರ, ಸದ್ಭಾವ, ಮತ್ತು ನಾವೆಲ್ಲರೂ ಒಂದು ಎಂಬ ಸಮಷ್ಠಿಭಾವವನ್ನು ಹೊಂದಬೇಕು ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೌರವಾಧ್ಯಕ್ಷರಾದ ಡಾ. ರಾಹುಲ ಕೆಂಭಾವಿ ಹಾಗೂ ಮುಖ್ಯ ಅರ್ಚಕರಾದ ವೇದಮೂರ್ತಿ ಶ್ರೀ ಬಸಯ್ಯ ಶಾಸ್ತ್ರಿಗಳು ಪದಾಧಿಕಾರಿಗಳಾದ ಭೀಮನಗೌಡ ಸಿದ್ದರೆಡ್ಡಿ, ಶಿವಕುಮಾರ ಏಗ್ಗಶೆಟ್ಟಿ, ಶಾಂತವೀರಯ್ಯ ಹಿರೇಮಠ, ವಿಜಯಕುಮಾರ ಪೂಜೇರಿ, ಭೀಮರಾಯ ಅಮ್ಮಾಜಿಗೋಳ, ಕವಿತಾ ಹನಗಂಡಿಮ ಗೀತಾ ಪೂಜಾರಿ, ಪವಿತ್ರಾ ಭೋಸಲೆ, ಆರತಿ ಘೋರೆ​‍್ಡ, ಲಕ್ಮೀಂಬಾಯಿ ಸೌದಿ, ಸಂಗೀತಾ ಕುಳೆ ಮತ್ತು ಭರಮಣ್ಣ ಕಡಕೋಳ, ಅಲ್ಲಮಪ್ರಭು ಶಿರಹಟ್ಟಿ, ಪ್ರೊ.ಬಿ.ಎಸ್‌.ಬೆಳಗಲಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಸಿದ್ಧಿವಿನಾಯದ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವದಲ್ಲಿ ಅಭಿಷೇಕ, ಮಹಾಪೂಜೆ ಮತ್ತು ಮಹಾಪ್ರಸಾದ ನಂತರ ಸಂಜೆ ಗಣೇಶನ ಸ್ತುತಿ-ಶ್ರೋತ್ರಗಳ ಗೀತ-ಗಾಯನ ಕಾರ್ಯಕ್ರಮವು ಮೂಡಿಬಂದಿತು. ನವರಸಪುರ ವಿವಿಧ ಬಡಾವಣೆಗಳ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.