ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಇರಲಿ: ಶಾಸಕ ನಾಡಗೌಡ

ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಇರಲಿ: ಶಾಸಕ ನಾಡಗೌಡ Let everyone feel like an Indian: MLA Nadagowda

ತಾಳಿಕೋಟಿ 16 :  ಪವಿತ್ರ ರಮಜಾನ ಶಾಂತಿ ಪ್ರೀತಿ ಹಾಗೂ ಕರುಣೆಯ ತಿಂಗಳಾಗಿದೆ. ಇಂತಹ ಮಾಸದಲ್ಲಿ ಯುದ್ಧ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಇದು ಆದಷ್ಟು ಬೇಗ ನಿಂತು ಶಾಂತಿ ನೆಲಸುವಂತಾಗಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸಬೇಕಾಗಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು. ಪಟ್ಟಣದ ಹಳೆ ತರಕಾರಿ ಮಾರುಕಟ್ಟೆ ಆವರಣದಲ್ಲಿ ನಾಡಗೌಡ ಅಭಿಮಾನಿ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡ ಸೌಹಾರ್ದ ಇಫ್ತಾರ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಭೂಮಿಯ ಮೇಲೆ ಬದುಕಿರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಬೇಕಾಗಿದೆ ಮರಣ ಯಾವಾಗ ಬರುತ್ತದೆಯೋ ಗೊತ್ತಿಲ್ಲ, ಮರಣದೊಂದಿಗೆ ನಮ್ಮ ಬದುಕಿನ ಪಯಣ ನಿಂತು ಹೋಗುತ್ತದೆ ಇಲ್ಲಿ ನಾವು ಕೇವಲ ಪ್ರಯಾಣಿಕರು ಮಾತ್ರ ಶಾಶ್ವತವಾಗಿ ಇರಲು ಬಂದವರಲ್ಲ. ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿ ಮತ್ತು ಪ್ರೀತಿಯೇ ಆಗಿದೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ ಎಂದರು. ಹಿರಿಯ ಪತ್ರಕರ್ತ ಜಿ.ಟಿ.ಘೋರೆ​‍್ಡ, ಮುಖಂಡರಾದ ರೋಷನ್ ಡೋಣಿ,ಶಿವರಾಜ ಗುಂಡಕನಾಳ ಹಾಗೂ ಇಬ್ರಾಹೀಮ ಮನ್ಸೂರ ಮಾತನಾಡಿ ಶಾಸಕರ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.  

ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರನ್ನು ಮುಸ್ಲಿಂ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು. ಖಾಸ್ಗತೇಶ್ವರ ಮಠದ ವೇ.ಮೂ.ಮುರಗೇಶ ವಿರಕ್ತಮಠ, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ವಿವಿ ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ ಸಮಾರಂಭದ ಸಾನಿಧ್ಯ ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಪ್ರಮುಖರಾದ ಗನಿಸಾಬ ಲಾಹೋರಿ, ಅಬ್ದುಲ್ ರಹಮಾನ ಎಕೀನ,ಸಿಕಂದರ ವಠಾರ,ನಿರಂಜನಶಾ ಮಕಾಂದಾರ,ಶಮ್ಶುದ್ದೀನ ನಾಲಬಂದ, ಆರೀಫ ಹೊನುಟಗಿ, ಫಯಾಜ ಉತ್ನಾಳ, ಹಸನಸಾಬ ಮನಗೂಳಿ, ಕಾಶೀಮಪಟೇಲ ಮೂಕಿಹಾಳ, ಎ.ಎಸ್‌.ನಮಾಜಕಟ್ಟಿ, ಡಾ.ನಜೀರ ಕೋಳ್ಯಾಳ, ಡಾ.ಎ.ಎ.ನಾಲಬಂದ, ಎಂ.ಎ.ಮೇತ್ರಿ, ಸಿಕಂದರ ಡೋಣಿ, ಮಂಜೂರ ಬೇಪಾರಿ,ಮಹೆಬೂಬ ಕೆಂಭಾವಿ, ಮುನ್ನಾ ಅರ್ಜುಣಗಿ, ಅಕ್ಕಮಹಾದೇವಿ ಕಟ್ಟಿಮನಿ, ನೀಲಮ್ಮಗೌಡತಿ ಪಾಟೀಲ, ಸುರೇಶಧಣಿ ನಾಡಗೌಡ(ಬಿಂಜಲಭಾವಿ), ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ, ಶರಣುಧಣಿ ದೇಶಮುಖ, ಸಂಗನಗೌಡ ಅಸ್ಕಿ ಮತ್ತಿತರರು ಇದ್ದರು.