ಮಕ್ಕಳು ಪಾಲಕರ ಆಶಯದಂತೆ ಸಾಧನೆಯತ್ತ ದಾಪುಗಾಲಿಡಲಿ: ಹೊನಗೌಡರ್
Let children take steps towards success as their parents wish: Honagouder
ಮಾಂಜರಿ 15: ಮಕ್ಕಳು ವಿದ್ಯಾಬುದ್ಧಿ ಕಲಿತು ಮೇಲ್ಮಟ್ಟಕ್ಕೇರಲಿ, ಸಾಧಕರಾಗಲಿ ಎಂಬ ಉದ್ದೇಶದಿಂದ ಮಾತಾಪಿತರು ಹಾತೊರೆಯುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಗೆ ಮುಂದಾಗುತ್ತಾರೆ. ಮಕ್ಕಳು ಮಾತಾಪಿತರ ಜೀವನವನ್ನು ಅರ್ಥೈಸಿಕೊಂಡು ಒಳ್ಳೆಯ ಸಾಧನೆಯತ್ತ ದಾಪುಗಾಲು ಇಡಬೇಕು ಎಂದು ಬಿಸಿಎಂ ಹಾಸ್ಟೆಲಿನ ಮೇಲ್ವಿಚಾರಕ ಬಸವರಾಜ್ ಹೊನಗೌಡರ್ ಹೇಳಿದರು.
ಅವರು ಮಂಗಳವಾರ ದಿ. 14ರಂದು ಅಂಕಲಿ ಗ್ರಾಮದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಪದವಿ ಪೂರ್ವ ಮಹಾವಿದ್ಯಾಲಯದ -2025- 2026ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಾಧನೆ ಎಂಬ ಛಲವು ವಿದ್ಯಾರ್ಥಿಯಾದವನಲ್ಲಿದೆ. ಆ ಸಾಧನೆ ಯಾವುದೇ ಇರಲಿ ಅದರಂತೆ ನಿಮ್ಮ ಜೀವನ ರೂಪಿಸಿಕೊಳ್ಳಲು ಮುಂದಾದರೆ ದೊಡ್ಡ ಸಾಧಕರಾಗುತ್ತೀರಿ. ಓಟದ ಸಾಧನೆಯತ್ತ ಮುಖ ಮಾಡಿ ದೇಶವನ್ನೇ ಗೆಲ್ಲುವ ಅಪೇಕ್ಷೆ ಹೊತ್ತು ಅದನ್ನೇ ರೂಪಿಸಿಕೊಂಡು ಹೋಗಿ ಸಾಧನೆಗೈದ ಯುವಕನ ಘಟನೆಯನ್ನು ಬಸವರಾಜ್ ಹೊನಗೌಡರ್ ವಿವರಿಸಿದರು. ಅಲ್ಲದೇ, ಸಾಧನೆಗೆ ಛಲವೆಂಬುದಿರಲಿ ಅದಕ್ಕೆ ಬಲವೆಂಬುದು ಸಿಕ್ಕೆ ಸಿಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಸ್ಥಳೀಯ ಸಲಹಾ ಸಮಿತಿಯ ಸದಸ್ಯ ಆರ್ ಡಿ ಗಿಜರೆ ಅವರು ಮಾತನಾಡಿ, ಸಾಧನೆ ಎಂಬುದು ಪ್ಲಾನ್‌ನಿಂದ ಸಾಧ್ಯವಿಲ್ಲ. ಅದಕ್ಕೆ ಪೋಕಸ್‌ವೆಂಬುದು ಬೇಕು. ನಾನು ಮಾಡುವುದನ್ನು ಮನಸಾರೆ ಮಾಡುತ್ತೇನೆ, ಮನಸ್ಸುಕೊಟ್ಟು ಮಾಡುವಂತಹ ಕಾರ್ಯವಾಗಬೇಕೆಂದರು. ಯಾವುದನ್ನು ಪ್ರದರ್ಶನಕ್ಕಾಗಿ ಮಾಡದೇ ಮನಸ್ಪೂರ್ವಕವಾಗಿ ಮಾಡಬೇಕು. ಯಾವುದೇ ವಿಷಯವಾಗಲಿ ಅದರ ಮೂಲವನ್ನು ಅರ್ಥೈಸಿಕೊಳ್ಳಬೇಕು. ಆದರ ತಳಹದಿ ಎಂಬುದನ್ನು ಅರ್ಥೈಸಿಕೊಂಡರೆ ಮುಂದೆ ಅನುಕೂಲವಾಗಲಿದೆ. ಒಳ್ಳೆಯ ಗುರಿ ಎಂಬುದನ್ನು ಇಟ್ಟುಕೊಂಡು ಸಾಗಿ, ಜೀವನದ ಪ್ರಯಾಣ ಕುರಿತು ಮುಂದಾಲೋಚನೆ ಇರಲಿ ಎಂಬುದರ ಕುರಿತು ವಿವರಿಸಿದರು.
ಶಾರದಾದೇವಿ ಕೋರೆ ಪದವಿ ಪೂರ್ವ ಮಹಾವಿದ್ಯಾಲಯದ 25/26 ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯ ಕಾರ್ಯಕ್ರಮವನ್ನು ಗಣ್ಯರಿಂದ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಉಪ ಪ್ರಾಚಾರ್ಯ ಜ್ಯೋತಿ ತಮ್ಮಗೌಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ ಬಿ ಚೌಗುಲಾ, ಬಿ ಎಸ್ ಅಂಬಿ, ವಿ ಡಿ ನಾಯಕ, ಎಂ ಎಸ್ ಕಾನಡೆ, ಇನ್ನುಳಿದ ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿ ಹಾಜರಿದ್ದರು. ಡಿ ಎಸ್ ಬಾಕಳೆ ನಿರೂಪಿಸಿ, ಎಸ್ ಬಿ ಕುಂಬಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 