ಶಿಬಿರದ ಶಿಸ್ತು ನಿತ್ಯದ ಕಾಯಕವಾಗಲಿ: ಭೂಮಣ್ಣವರ

ಶಿಬಿರದ ಶಿಸ್ತು ನಿತ್ಯದ ಕಾಯಕವಾಗಲಿ: ಭೂಮಣ್ಣವರ Let camp discipline be a daily practice: Bhumannavara

ಬಾಗಲಕೋಟೆ 08: ಶಿಸ್ತು, ಸಂಯಮ, ಶ್ರಮದಾನ ಮತ್ತು ಯೋಗಾಭ್ಯಾಸ ಚಟುವಟಿಕೆಗಳು ಕೇವಲ ಶಿಬಿರಕ್ಕೆ ಸೀಮಿತವಾಗದೆ ದಿನನಿತ್ಯ ಜೀವನಕ್ಕೆ ಅಳವಡಿಸಿಕೊಳ್ಳಿ. ಉತ್ತಮ ಅಭ್ಯಾಸಗಳಿಂದ ವ್ಯಕ್ತಿತ್ವ ವಿಕಸಗೊಳ್ಳುತ್ತದೆ ಎಂದು ಎನ್‌.ಎಸ್‌.ಎಸ್ ಘಟಕದ ಬಾಗಲಕೋಟೆ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ಎಸ್‌.ಎಸ್ ಭೂಮಣ್ಣವರ ಹೇಳಿದರು. 

ಬಸವೇಶ್ವರ ಕಲಾ ಮಹಾವಿದ್ಯಾಲಯದ ಎನ್‌.ಎಸ್‌.ಎಸ್ ಘಟಕದ ವತಿಯಿಂದ ಮುಚಖಂಡಿ ಗ್ರಾಮದಲ್ಲಿ ಹಮ್ಮಿಕೊಂಡ ಏಳು ದಿನದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಯತ್ನದಿಂದ ಸಾಧನೆ ಸಾಧ್ಯ ಆದರೆ ಅದಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯಕ ಅಂತಹ ಸಾಧನೆಯ ಮಾರ್ಗವನ್ನು ವಿಶೇಷ ಶಿಬಿರಗಳು ನೀಡುವ ಕೆಲಸ ಮಾಡುತ್ತವೆ ಅದನ್ನು ಬಳಕೆ ಮಾಡಿಕೊಳ್ಳುವ ಕೆಲಸವನ್ನು ನಿಮ್ಮದಾಗಬೇಕು ಎಂದರು. 

ಉತ್ತಮ ಹಂತಕ್ಕೆ ಬೆಳೆಯುವ ಮೂಲಕ ಗುರುಹಿರಿಯರಿಗೆ ತಲೆಬಾಗಿ ಬದುಕುವುದನ್ನು ರೂಡಿಸಿಕೊಳ್ಳಿ ಅದು ವ್ಯಕ್ತಿತ್ವದ ಸಂಕೇತವಾಗಿದೆ. ಎನ್‌.ಎಸ್‌.ಎಸ್ ಕೇವಲ ಶ್ರಮದಾನಕ್ಕೆ ಸೀಮಿತವಾಗಿರದೇ ರಾಜ್ಯ ಸರಕಾರ ಜಾರಿಗೆ ತರುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಎಂಬ ಹೊಸ ಯೋಜನೆಯಲ್ಲಿ ಎನ್‌.ಎಸ್‌.ಎಸ್‌ಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ಸಮೀಕ್ಷೆಯ ತರಬೇತಿ ನೀಡುವ ಯೋಜನೆ ಸಿದ್ದಗೊಳ್ಳುತ್ತಿದ್ದು ಕೆಲವೆ ದಿನಗಳಲ್ಲಿ ಜಾರಿಯಾಗಲಿದೆ. ಸಮೀಕ್ಷೆಗೆ ಬೇಕಾದ ದಾಖಲಾತಿಗಳನ್ನು ಸಾರ್ವಜನಿಕರು ಸಿದ್ದಪಡಿಸುವಂತೆ ಮಾಡುವ ಕೆಲಸವನ್ನು ಶಿಬಿರಾರ್ಥಿಗಳು ಮಾಡಬೇಕಿದೆ. ಇನ್ನು ಬಿವಿವಿ ಸಂಘದ ಶಿಕ್ಷಣ ಅಂಗಸಂಸ್ಥೆಗಳು ಎಲ್ಲ ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಬರುತ್ತಿದ್ದು ಕಲಾ ಮಹಾವಿದ್ಯಾಲಯದವು ಅಚ್ಚುಕಟ್ಟಾಗಿ ಮಾದರಿ ಶಿಬಿರ ನಡೆಸಿದ್ದು ಸಂತಸ ತಂದಿದೆ ಎಂದರು. 

ಪ್ರಾಚಾರ್ಯಎಸ್‌.ಆರ್ ಮೂಗನೂರಮಠ ಅವರು ಮಾತನಾಡಿ ಶಿಬಿರದಲ್ಲಿ ಪ್ರತಿದಿನ ಒಂದು ಹೊಸ ಯೋಜನೆ ಮತ್ತು ಆಲೋಚನೆಗಳ ಮೂಲಕ ಕಾರ್ಯಚಟುವಟಿಕೆ ಮಾಡಿದಂತೆ ದಿನನಿತ್ಯವು ಹೊಸದನ್ನು ಹುಡುಕುವ ಮತ್ತು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು ಇದರಿಂದ ಸಮಾಜಕ್ಕೆ ಬೇಕಾದ ಯೋಗ್ಯ ನಾಗರಿಕರಾಗಿ ಬೆಳೆಯಲು ಸಾಧ್ಯ. ಬಾವನೆಗಳು ಅತಿ ಹೆಚ್ಚು ಬೆಲೆಯುಳ್ಳವುಗಳಾಗಿದ್ದು ಅವುಗಳನ್ನು ಶಿಬಿರ ಕಲಿಸಿದೆ. ನೈಸರ್ಗಿಕ ಸಂಪನ್ಮೂಲವನ್ನು ಹಿತವಾಗಿ ಮತ್ತು ಮಿತವಾಗಿ ಬಳಸುವ ಕೌಶಲ್ಯ, ಕಾರ್ಯಕ್ರಮ ನಿರ್ವಹಣೆ ರೀತಿ, ಗುಂಪು ನಿರ್ವಹಣೆ, ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಕೌಶಲ್ಯಗಳನ್ನು ಇಲ್ಲಿ ಕಲಿತಿದ್ದೀರಿ. ನಾವೆಲ್ಲರೂ ಒಂದು ಎಂಬ ಒಗ್ಗಟ್ಟು ಜಯ ಕೊಡುತ್ತದೆ ಎಂದರು. 

ಎನ್‌.ಎಸ್‌.ಎಸ್ ಘಟಕಾಧಿಕಾರಿಗಳಾದ ಡಾ.ಎಂ.ಎಚ್ ವಡ್ಡರ, ಡಾ.ವೀರುಪಾಕ್ಷಿ ಎನ್‌.ಬಿ, ಪ್ರಾಧ್ಯಾಪಕರುಗಳಾದ ಡಾ.ಕೆ.ವಿ ಮಠ, ಡಾ.ಎಲ್‌.ಎಸ್ ಚವಡಿ, ಎಸ್‌.ವಿ ಕಟ್ಟಿ, ನಟರಾಜ ಇಂಗಳಗಿ, ಶ್ರೇಯಾ ಜೋರಾಪೂರ ಮತ್ತು ಶಿಬಿರಾರ್ಥಿಗಳಿಗೆ ಟೀಶರ್ಟ್‌ ಕೊಡುಗೆ ನೀಡಿದ ಆನಂದ ಕೊಟ್ಟಗಿ, ನಾಗೇಶ ನಾಯಕ, ಕಿರಣ ಬಾಗೇವಾಡಿ, ಪ್ರಶಾಂತ ರಾಠೋಡ, ಕಿರಣ ನಾಯಕ ಸೇರಿದಂತೆ ಇತರರು ಇದ್ದರು.