ಕಲಾವಿದರಿಗೆ ಸರ್ವಕಾಲಿಕ ಮನ್ನಣೆ ದೊರೆಯಲಿ: ಬಂದಿ

ಕಲಾವಿದರಿಗೆ ಸರ್ವಕಾಲಿಕ ಮನ್ನಣೆ ದೊರೆಯಲಿ: ಬಂದಿ  Let artists get recognition all the time: Bandi

ಗುರ್ಲಾಪೂರ 10: ಕಲೆಗಳಿಗೆ ಜೀವ ತುಂಬಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುನ್ನಡೆಸುವ ಕಲಾವಿದರಿಗೆ ಸರ್ವಕಾಲಿಕ ಮನ್ನಣೆ ದೊರೆಯಬೇಕು ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.   

ಸಮೀಪದ ಇಟನಾಳ ಗ್ರಾಮದ ಶಿವಶರಣ ಶಾಬುಜಿ ಐಹೊಳೆ ಮತ್ತು ಮಾತೋಶ್ರಿ ಅವಬಾಯಿ ಐಹೊಳೆ ಅವರ ಪುಣ್ಯಸ್ಮರಣೆ ಅಂಗವಾಗಿ ಏರಿ​‍್ಡಸಿದ್ದ ಶಿವಭಜನೆ ಮತ್ತು ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರು ಕಷ್ಟ, ನೋವು ಉಂಡು ಬಡವರಾಗಿದ್ದರೂ ಸಹ ತಮ್ಮ ಕಲಾವಂತಿಕೆಯಿಂದ ಅವರು ಶ್ರೀಮಂತರೆನಿಸುತ್ತಾರೆ ಎಂದರಲ್ಲದೇ ಭಜನೆಯು ದೇವರನ್ನು ಸ್ಮರಿಸುವ ಸರಳ ಮಾರ್ಗವಾಗಿದ್ದು, ಶಿವಶರಣರ ವಚನ, ಅನುಭಾವ ಸಾಹಿತ್ಯವನ್ನು ರಾಗ ಸಂಯೋಜನೆಯ ಮೂಲಕ ಜನರಿಗೆ ಸುಲಭವಾಗಿ ಅರಿಯುವ ರೀತಿಯಲ್ಲಿ ತಲುಪಿಸುವ ಸ್ತುತ್ಯ ಕಾರ್ಯ ಮಾಡುತ್ತಿದ್ದಾರೆ ಎಂದರು.   

ಇಟನಾಳದ ಶರಣ ಶಾಬುಜಿ ಐಹೊಳಿ ಭಜನೆ ಕಲೆಯ ಮೂಲಕ ಕಲಾ ಪರಂಪರೆಯನ್ನು ಬೆಳೆಸಿದ್ದಾರೆ. ಶಾಬುಜಿ ಐಹೊಳೆ ಅವರ ತ್ಯಾಗ, ಕಷ್ಟ ಸಂಹಿಷ್ಣುತೆಯ ಪ್ರತಿಫಲವಾಗಿ ಸದಾಶಿವ ಐಹೊಳೆ ಅವರಂತ ಖ್ಯಾತ ಕಲಾವಿದ ಕಲಾ ಪ್ರಪಂಚಕ್ಕೆ ದೊರಕಿದ್ದಾರೆ ಎಂದರು.    

ಸಾನಿಧ್ಯ ವಹಿಸಿದ್ದ ಇಟನಾಳದ ಮೈಲಾರಲಿಂಗೇಶ್ವರ ದೇವಸ್ಥಾನದ ಸಿದ್ಧೇಶ್ವರ ಆಶ್ರಮ ಸಿದ್ಧೇಶ್ವರ ಸ್ವಾಮಿಗಳು ಮಾತನಾಡಿ, ಗುರು, ಪರಮಾತ್ಮನನ್ನು ನಿತ್ಯ ಸ್ಮರಣೆ ಮಾಡುವುದರ ಮೂಲಕ ಜೀವನದಲ್ಲಿ ಆನಂದ ದೊರೆಯುತ್ತದೆ ಮತ್ತು ಅದು ಜೀವನ ಮುಕ್ತಿಯ ಮಾರ್ಗವಾಗಿದೆ ಎಂದರು.   

ಎಸ್‌.ಕೆ. ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ ಅಧ್ಯಕ್ಷತೆ ವಹಿಸಿದ್ದರು.  ಧಾರವಾಡ ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬೆಳಗಲಿಯ ಯಮನಪ್ಪ ಆಲಗೂರ, ರಾಯಬಾಗದ ಶಿವಾನಂದ ಹುಲಗಬಾಳಿ, ಗಂಗಾಧರ ಸರಿಕರ, ಮಹಾದೇವಪ್ಪ ಐಹೊಳೆ, ಪರಮೇಶ್ವರ ತೇಲಿ, ರಂಗಪ್ಪ ಐಹೊಳೆ, ರಾಮಕೃಷ್ಣ ಐಹೊಳೆ ಭಾಗವಹಿಸಿದ್ದರು.  ಶಾನೂರ ಐಹೊಳೆ ಸ್ವಾಗತಿಸಿದರು, ಡಾ. ಮಹಾದೇವ ಪೋತರಾಜ ನಿರೂಪಿಸಿದರು.