ದುರ್ಬಲರನ್ನು ಮೇಲೆತ್ತುವ ಕೆಲಸ ಆಗಲಿ:ಡಾ.ಕಾರ್ಚಿ
Let's work to uplift the weak: Dr. Kaarchi
ತಾಳಿಕೋಟಿ 18: ವಿಶ್ವಕರ್ಮ ಸಮಾಜ ಬಸವಾದಿ ಶರಣರ ಕಾಯಕತತ್ವ ಪಾಲಿಸುವ ಸಮಾಜವಾಗಿದ್ದು, ಇವರಲ್ಲಿ ಬಹುತೇಕರು ಪ್ರತಿಭಾವಂತರಾಗಿದ್ದರೂ ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಇವರನ್ನು ಮೇಲೆತ್ತುವ ಕೆಲಸ ಸಮಾಜದಿಂದಾಗಬೇಕು ಎಂದು ಹಿರಿಯ ವೈದ್ಯ ಡಾ.ವಿ.ಎಸ್.ಕಾರ್ಚಿ ಹೇಳಿದರು.
ಬುಧವಾರ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ಹಿರಿಯರಾದ ವಿಶ್ವನಾಥ್ ಶರಣರ ಅವರು ಮಾತನಾಡಿ ದೇವಾನು ದೇವತೆಗಳನ್ನು ಸೃಷ್ಟಿ ಮಾಡುವ ಭಕ್ತಿ- ಶಕ್ತಿ ವಿಶ್ವಕರ್ಮ ಸಮಾಜಕ್ಕಿದೆ. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಈ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಸಭೆ ಸಮಾರಂಭ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನದ ಅಗತ್ಯವಿದೆ ಈ ಕೆಲಸಕ್ಕಾಗಿ ಸಮಾಜದ ಮುಖಂಡರು ಶ್ರಮ ವಹಿಸಬೇಕು ಎಂದರು. ಆರ್ ಎಸ್ ಎಸ್ ಮುಖಂಡ ಬಾಳುಬಕ್ಷಿ ಕರಮರಕರ ಹಾಗೂ ಮಲ್ಲಿಕಾರ್ಜುನ ಬಡಿಗೇರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಪುರಸಭೆ ಸದಸ್ಯ ಮುದಕಪ್ಪ ಬಡಿಗೇರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ ಉಪಾಧ್ಯಕ್ಷ ಪ್ರಭಾಕರ್ ಹಿಪ್ಪರಗಿ ಖಜಾಂಚಿ ಶ್ರೀನಿವಾಸ ಪತ್ತಾರ ಸದಸ್ಯರಾದ ಗಂಗಾಧರ ಬಡಿಗೇರ,ಸುನೀಲ ವರದಪ್ಪನವರ,ನಾಗರಾಜ ಪತ್ತಾರ,ಮೋಹನ ಬಡಿಗೇರ, ಶಿಕ್ಷಕರಾದ ಜಿ.ಕೆ.ಪತ್ತಾರ,ಗಜಾನನ ಸೋನಾರ, ಅರ್ಚಕ ವಿಶ್ವನಾಥ ಆಚಾರ್ಯ, ರಾಜು ಪತ್ತಾರ, ಎಚರಣ್ಣ ಪತ್ತಾರ, ದೇವೇಂದ್ರ್ಪ ಬಡಿಗೇರ ಮತ್ತಿತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 