ಸಂವಿಧಾನ ಅರ್ಥೈಸದ ವ್ಯವಸ್ಥೆ ವಿರುದ್ಧ ಗಟ್ಟಿಧ್ವನಿ ಮೊಳಗಲಿ : ಡಾ.ಮಾಳಿ
Let's raise our voices against a system that does not understand the Constitution: Dr. Mali
ಲೋಕದರ್ಶನ ವರದಿ
ಹಾರೂಗೇರಿ 03: ರಾಜಕಾರಣಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ ಮತ್ತು ಮಹಾತ್ಮಾ ಗಾಂಧೀಜಿ ಅರ್ಥವಾಗುವುದಿಲ್ಲ. ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡುವಂತಹ ಶಕ್ತಿಗಳ ವಿರುದ್ಧ ಗಟ್ಟಿಧ್ವನಿ, ಪ್ರತಿ ಸ್ಪರ್ಧಿಗಳಾಗುವುದರ ಜೊತೆಗೆ ರಾಜಕೀಯ ಅಜೆಂಡಾಗಳನ್ನು ಜಾರಿಗೊಳಿಸುತ್ತಿರುವ ರಾಜಕೀಯ ಪಕ್ಷಗಳ ನಡೆಗಳ ವಿರುದ್ಧ ನಾವು ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಮನೆಮನೆಗೆ ಮನಮನಕೆ ಬಾಬಾಸಾಹೇಬರು ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಂಬೇಡ್ಕರ ಅವರು ನನ್ನನ್ನು ಪೂಜಿಸಬೇಡಿ, ಓದಿ, ಸಂಘಟಿತರಾಗಬೇಕೆಂದು ಹೇಳಿದ್ದು, ಅವರು ಯಾವುದೇ ಸೈನ್ಯವನ್ನು ಕಟ್ಟಲಿಲ್ಲ, ಭೀಮ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ಶಾಂತಿ, ಸಮಾನತೆಯ ದೇಶವನ್ನು ಬಂದೂಕಿನಿಂದಲ್ಲ, ಸಂವಿಧಾನದಿಂದ ಕಟ್ಟಬೇಕಿದೆ. ಬಸವಣ್ಣನವರ ವಚನಗಳ ಸಾರ ಹಾಗೂ ಅಂಬೇಡ್ಕರ ವಿಚಾರ ಧಾರೆಯನ್ನು ಅರಿತು ನಡೆದರೆ ಆರೋಗ್ಯವಂತ ಸಮಾಜ ನಿರ್ಮಿಸುವ ಜೊತೆಗೆ ನೈತಿಕ ಮೌಲ್ಯಗಳನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಡಾ.ವಿ.ಎಸ್.ಮಾಳಿ ಹೇಳಿದರು.
ಪ್ರಾಚಾರ್ಯ ಡಾ.ವಿನೋದ ಕಾಂಬಳೆ ಅಂಬೇಡ್ಕರ ಅವರ ನವಭಾರತ ನಿರ್ಮಾಣದ ಕುರಿತು ಮಾತನಾಡುತ್ತ ಅಂಬೇಡ್ಕರ ಅವರ ಕನಸಿನ ಭಾರತದ ನಿರ್ಮಾಣದ ಕನಸನ್ನು ವಿದ್ಯಾರ್ಥಿಗಳು ಹಾಗೂ ಯುವಸಮೂಹ ಈಡೇರಿಸುವ ಸಂಕಲ್ಪ ಮಾಡಬೇಕೆಂದರು.
ಅಂಬೇಡ್ಕರ ಮತ್ತು ಭಾರತದ ಸಂವಿಧಾನದ ಕುರತು ಪ್ರೊ.ಆರ್.ಡಿ.ಕೊಳವಿ, ಅಂಬೇಡ್ಕರ ಅವರ ಜೀವನ-ಸಾಧನೆ ಕುರಿತು ಮೈಬೂಬ ಕೊರಬು, ಅಂಬೇಡ್ಕರ ಅವರ ಚಿಂತನೆಗಳ ಕುರಿತು ಎಸ್.ಎಲ್.ಜಾಧವ ಮತ್ತು ಅಂಬೇಡ್ಕರ ಅವರ ರಾಜಕೀಯ ಚಿಂತನೆಗಳ ಕುರಿತು ಸತೀಶ ಮಸ್ಕಿ ಮಾತನಾಡಿದರು.
ಸಂಸ್ಥೆ ನಿರ್ದೇಶಕ ಆರ್.ಎಸ್.ಯಲಶೆಟ್ಟಿ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಡಾ.ರಮೇಶ ಕಮತಗಿ, ಪ್ರೊ.ತ್ರೀಶಲಾ ಮಂಗಜೆ, ಮಹಾಂತೇಶ ಅರಕೇರಿ ಹಾಗೂ ಎಲ್ಲ ಅಂಗಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ಅಮೃತಾ ಒಂಟಿ ಸ್ವಾಗತಿಸಿದರು. ಪ್ರೊ.ಶಂಕರ ಮೊಕಾಸಿ ನಿರೂಪಿಸಿದರು. ಮುಖ್ಯೋಪಾಧ್ಯಾಯ ವಂದಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 