ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳನ್ನು ಅವಿಸ್ಮರಣಿಯಗೊಳಿಸೋಣ : ಫಕೀರ್ಪ ಹೆಬಸೂರ
Let's make the programs held throughout the year unforgettable: Fakirpa Hebasura
ಗದಗ 29 : ನಗರದಲ್ಲಿ ಶಿಕ್ಷಣ ಕ್ರಾಂತಿಯೊಂದಿಗೆ ಸರ್ವ ಧರ್ಮಕ್ಕೂ ಶಿಕ್ಷಣ ನೀಡಿ ಇದೀಗ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾಳಿದಾಸ ಶಿಕ್ಷಣ ಸಮಿತಿಗೆ ಚಿರಋಣಿಯಾಗುವ ಮೂಲಕ ರಜತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಸಮಿತಿಯ ಸೇವಾಕಾರ್ಯಗಳನ್ನು ಅವಿಸ್ಮರಣಿಯಗೊಳಿಸೋಣ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ಫಕೀರ್ಪ ಹೆಬಸೂರ ಅವರು ಹೇಳಿದರು.
ನಗರದ ದೇವರಾಜ ಅರಸು ಹಾಸ್ಟೆಲ್ ಆವರಣದಲ್ಲಿ ಜರುಗಿದ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ವ್ಯಾಪಾರಕ್ಕೆ ನಿಂತಿವೆ ಆದರೆ, ನಮ್ಮ ಶಿಕ್ಷಣ ಸಂಸ್ಥೆಗೆ ಮಕ್ಕಳ ಪಾಲಕರೇ ಆಧಾರ ಸ್ಥಂಭಗಳಾಗಿದ್ದಾರೆ ಅವರೆಲ್ಲರ ಆಶೀರ್ವಾದದಿಂದ ಈ ಸಂಸ್ಥೆಯು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಹೇಳಿದರು. ನಿವೃತ್ತ ನ್ಯಾಯಾಧೀಶರಾದ ಎಸ್. ಜಿ.ಪಲ್ಲೇದ ಅವರು ಮಾತನಾಡಿ, ಜೀವನದಲ್ಲಿ 25ರ ಘಟ್ಟವು ಮಹತ್ವದ್ದಾಗಿದೆ. ಈ ಕುರಿತು ಪೂರ್ವಭಾವಿ ಸಭೆಯನ್ನು ಸಾರ್ವಜನಿಕರ ಉದ್ದೇಶಗಳನ್ನು ಪರಿಗಣಿಸಿ ಸಭೆಯನ್ನು ನಡೆಯುತ್ತಿರುವುದು ಸಂತೋಷಕರವಾಗಿದೆ. ಇದು ವರ್ಷಪೂರ್ತಿ ನಡೆಯುವ ಕಾರ್ಯಕ್ರಮ ಆಗಿದ್ದರಿಂದ ಜಿಲ್ಲೆಗೆ ಮಾದರಿಯಾಗಲಿದೆ ಎಂದರು.
ಡಾ. ಜಿ.ಬಿ. ಪಾಟೀಲ ಅವರು ಮಾತನಾಡಿ, ಸಮಾಜದ ಸಂಘಟನೆಯು ಇತರೆ ಸಮುದಾಯಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ವರ್ಷಪೂರ್ತಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಪ್ರಶಂಸನೀಯವಾಗಿವೆ. ಎಲ್ಲರೂ ಒಳಗೊಂಡ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲಿ ಎಂದು ಹೇಳಿದರು. ಶಶಿಧರ ರೊಳ್ಳಿ ಅವರು ಮಾತನಾಡಿ, ರಜತ ಮಹೋತ್ಸವದ ಅಂಗವಾಗಿ ನವೆಂಬರ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಆಗಮಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಯೋಗ ದಿನಾಚರಣೆಗೆ ಮತ್ತು ಸಾವಯವ ಕೃಷಿ ಕುರಿತ ಕಾರ್ಯಕ್ರಮಕ್ಕೆ ಪತಂಜಲಿ ಯೋಗ ಸಮಿತಿಯಿಂದ ಸಹಕಾರ ನೀಡುವುದಾಗಿ ಮತ್ತು ಕನೇರಿ ಶ್ರೀಗಳ ಅವರನ್ನು ಕರೆಸುವ ಪ್ರಯತ್ನಕ್ಕೆ ನಾವುಗಳು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಡಾ. ಉಮೇಶ ಪುರದ ಅವರು ಮಾತನಾಡಿ, ಒಂದು ಸಂಸ್ಥೆಯಾಗಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ ಇದು ಕ್ರಿಯಾಶೀಲ ಸಂಘಟನೆಯಿಂದ ಮಾತ್ರ ಸಾಧ್ಯವಾಗುತ್ತದೆ ಅಂತಹ ಕ್ರಿಯಾಶೀಲ ಸಂಘಟನೆ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯು 8 ರಿಂದ 10 ಎಕರೆ ಭೂಮಿಯನ್ನು ಖರೀದಿ ಮಾಡಿ ಒಂದೇ ಸ್ಥಳದಲ್ಲಿ ಎಲ್ಲಾ ಅಂಗಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಸೇವಾ ಕಾರ್ಯಗಳನ್ನು ಮುಂದುವರೆಸಲಿ ಎಂದು ಹೇಳಿದರು.
ಬಿಜೆಪಿಯ ಹಿರಿಯ ಮುಖಂಡರಾದ ಎಂ. ಎಸ್. ಕರಿಗೌಡ್ರ ಅವರು ಮಾತನಾಡಿ, ಸಂಸ್ಥೆಯನ್ನು ಕಟ್ಟುವುದು ಮತ್ತು ಅದನ್ನು ನಡೆಸಿಕೊಂಡು ಬರುವುದು ಇಂದಿನ ದಿನಗಳಲ್ಲಿ ಕಷ್ಟದಾಯಕವಾಗಿದೆ.ಅಂತಹ ಸಂಕಷ್ಟಗಳನ್ನು ಮೆಟ್ಟಿನಿಂತು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂಸ್ಥೆಯ ಸಾಧನೆ ಮೆಚ್ಚುವಂತಹದು. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ನೀಡಬೇಕೆಂದು ಹೇಳಿದರು.
ವಿಶ್ವಕರ್ಮ ಸಮಾಜದ ಮುಖಂಡರಾದ ಆರ್.ಡಿ. ಕಡ್ಲಿಕೊಪ್ಪ್ಪ ಅವರು ಮಾತನಾಡಿ, ಈ ರಜತ ಮಹೋತ್ಸವವನ್ನು ಸ್ಮರಣೀಯವನ್ನಾಗಿಸೋಣ ಎಂದರು. ಪಾಲಕರ ಪರವಾಗಿ ಈರಣ್ಣ ಮೇಟಿ ಅವರು ಮಾತನಾಡಿ, ಈ ಸಂಸ್ಥೆಯ ರಜತ ಮಹೋತ್ಸವಕ್ಕೆ ಮಕ್ಕಳ ಪಾಲಕರೆಲ್ಲರೂ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೀಲಕಂಠ ಮರುಡಿ ಅವರು ಮಾತನಾಡಿ, ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ಇದೆ ಆಗಸ್ಟ್ 18 ರಂದು ಗಂಗಾವತಿಯ ಬಿ. ಪ್ರಾಣೇಶ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೇ ತಿಂಗಳಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ನಂತರ ವರ್ಷವುದ್ದಕ್ಕೂ ಪರಿಸರ ದಿನಾಚರಣೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ, ಗುರುಪೂರ್ಣಿಮೆ, ಹಳೆ ವಿದ್ಯಾರ್ಥಿಗಳಿಂದ ಗುರು-ಶಿಷ್ಯರ ಸಮ್ಮೇಳನ, ಉಚಿತ ಆರೋಗ್ಯ ಶಿಬಿರ, ಕೃತಕ ಕಾಲು ಜೋಡಣೆ ಶಿಬಿರ, ಸ್ವತಂತ್ರ ದಿನಾಚರಣೆ, ಕ್ರೀಡಾಕೂಟ,
ಜಿಲ್ಲೆಯ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ, ಸ್ವಚ್ಛತಾ ಅಭಿಯಾನ, ಮಹಿಳಾ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ, ಅಪರಾಧ ತಡೆ ಮಾಸಾಚರಣೆ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟನನ್ನು ಒಳಗೊಂಡಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅಲ್ಲದೆ, ಇದಕ್ಕೆ ಸರ್ವರೂ ನೀಡಿರುವ ಸಲಹೆಗಳನ್ನು ಪರೀಶೀಲಿಸಿ ಉತ್ತಮ ಕಾರ್ಯಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಕೆ.ಮ್ಯಾಗೇರಿ, ಬಿ.ಬಿ.ಬಾವಿಕಟ್ಟಿ, ನಾಗಪ್ಪ ಗುಗ್ಗರಿ, ಶೇಖಣ್ಣ ಕಾಳೆ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ಬಿ.ಎಸ್.ಮೇಟಿ, ಮುತ್ತು ಜಡಿ, ನಿಂಬನಾಯ್ಕರ, ದೊಡ್ಡಣ್ಣವರ, ಎಸ್.ಎಸ್.ಕರಡಿ, ಹ್ಯಾಟಿ, ವೈ.ಡಿ.ಜಡದೆಲೆ ಸೇರಿದಂತೆ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕೊನೆಗೆ ಕೆ.ಬಿ. ಕಂಬಳಿ ಅವರು ಹೊಂದಿಸಿದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 