ಪ್ಲಾಸ್ಟಿಕ್ ಬಿಡೋಣ, ಪ್ರಕೃತಿಗೆ ಬದುಕು ಕೊಡೋಣ

ಪ್ಲಾಸ್ಟಿಕ್ ಬಿಡೋಣ, ಪ್ರಕೃತಿಗೆ ಬದುಕು ಕೊಡೋಣ  Let's leave plastic behind and give life to nature

ಗದಗ 28: ನಗರದ ಪ್ರತಿಷ್ಠಿತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ಇತ್ತೀಚಿಗೆ ಗದಗ ನಗರದ ರಾಧಾಕೃಷ್ಣ ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಎಂದು ಜಾಗೃತಿ ಅಭಿಯಾನ ಮತ್ತು ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.  

ನಂತರ ರಾಧಾಕೃಷ್ಣ ನಗರದ ನಿವಾಸಿಗಳಲ್ಲಿ ಒಬ್ಬರಾದ ಕುಮಾರಿ ಸಾಕ್ಷಿ ಹೊಸಮಠ ಮತ್ತು ಬಸವರಾಜ ಹೊಸಮಠ ಅವರ ಸಹಾಯದಿಂದ ಮಾರುತಿ ದೇವಸ್ಥಾನವನ್ನು ಸ್ವಚ್ಛತೆ ಮಾಡಲಾಯಿತು.    

ಈ ಚಟುವಟಿಕೆಯಲ್ಲಿ ರಾಧಾಕೃಷ್ಣ ನಗರದ ನಿವಾಸಿಗಳಲ್ಲಿ ಒಬ್ಬರಾದ ಸಾಕ್ಷಿ ಹೊಸಮಠ ಮತ್ತು ಬಸವರಾಜ ಹೊಸಮಠ, ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕನಾದ ಕುಮಾರ. ಅಪ್ಪಣ್ಣ ಹಡಪದ, ಕಾರ್ಯದರ್ಶಿಯಾದ ಕುಮಾರಿ. ಐಶ್ವರ್ಯ ಶಲವಡಿ, ಕುಮಾರಿ ಸಹನಾ ನಾಲ್ವಾಡದ, ಎನ್‌. ಎಸ್‌. ಎಸ್‌. ತಂಡದ ನಾಯಕರಾದ ಕುಮಾರ. ರುದ್ರಗೌಡ ಹಿರೇಗೌಡ್ರ, ಕುಮಾರ. ಸತೀಶ ಕಣವಿ, ಕುಮಾರಿ ರುಕ್ಸಾರ್ ಕೊಪ್ಪಳ ಮತ್ತು ಎನ್‌. ಎಸ್‌. ಎಸ್‌. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.