ಉತ್ತಮ ಆಹಾರಕ್ಕಾಗಿ ಕೈಜೋಡಿಸೋಣ: ಡಾ.ಪಾಲಯ್ಯ
Let's join hands for good food: Dr. Palaiah
ಲೋಕದರ್ಶನ ವರದಿ
---------------
ಉತ್ತಮ ಆಹಾರಕ್ಕಾಗಿ ಕೈಜೋಡಿಸೋಣ: ಡಾ.ಪಾಲಯ್ಯ
ಬಳ್ಳಾರಿ,ಅ.23: ಇಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಪುನರುಜ್ಜೀವನೆ ಅತ್ಯಂತ ಅಗತ್ಯವಾಗಿದೆ. ಪೌಷ್ಠಿಕ ಆಹಾರದ ಮಹತ್ವ ಜನರಲ್ಲಿ ಅರಿವು ಮೂಡಿಸುವ ಮೂಲಕ ಉತ್ತಮ ಆಹಾರಕ್ಕಾಗಿ ಕೈಜೋಡಿಸೋಣ ಎಂದು ಹಗರಿಯ ಐಸಿಎಆರ್‌ಹಿಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಪಾಲಯ್ಯ.ಪಿ ಅವರು ಹೇಳಿದರು.
‘ವಿಶ್ವ ಆಹಾರ ದಿನ’ದ ಅಂಗವಾಗಿ “ಉತ್ತಮ ಆಹಾರ ಮತ್ತು ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಕೈಜೋಡಿಸೋಣ” ಎಂಬ ಘೋಷವಾಕ್ಯದೊಂದಿಗೆ ಬಳ್ಳಾರಿ ತಾಲ್ಲೂಕಿನ ಹಗರಿಯ ಐಸಿಎಆರ್‌ಹಿಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ಹಾಗೂ ಸಿರಿಧಾನ್ಯ ಆಧಾರಿತ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರದ (ಮಣ್ಣು ವಿಜ್ಞಾನ) ವಿಜ್ಞಾನಿ ಡಾ.ರವಿ.ಎಸ್ ಅವರು ಮಾತನಾಡಿ, ಆರೋಗ್ಯಕರ ಆಹಾರವನ್ನು ಉತ್ಪಾದಿಸಲು ಮಣ್ಣಿನ ಪೌಷ್ಟಿಕತೆ ಮಹತ್ವದ ಪಾತ್ರವಹಿಸುತ್ತದೆ. ಮಣ್ಣು ಮತ್ತು ಆಹಾರ ಎರಡೂ ಪರಸ್ಪರ ಸಂಬಂಧಿತವಾಗಿವೆ ಎಂದು ಅಭಿಪ್ರಾಯಪಟ್ಟರು.
ಜಿಪಂ ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಅವರು ಮಾತನಾಡಿ, ಮಹಿಳೆಯರು ತಮ್ಮ ಸಾಂಪ್ರದಾಯಿಕ ಪಾಕಕಲೆ ಮೂಲಕ ಆರೋಗ್ಯಕರ ಹಾಗೂ ಸ್ಥಳೀಯ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇಂತಹ ಸ್ಪರ್ಧೆಗಳು ಅವರ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದರು.
ವಿಜ್ಞಾನಿ (ಆಹಾರ ಮತ್ತು ಪೋಷಣೆ) ಡಾ.ರಾಜೇಶ್ವರಿ.ಆರ್ ಅವರು ಮಾತನಾಡಿ, ಸಿರಿಧಾನ್ಯಗಳು ನಮ್ಮ ಸಂಪ್ರದಾಯದ ಭಾಗವಾಗಿದ್ದು, ಪೌಷ್ಠಿಕತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದವು. ಇಂತಹ ಸ್ಪರ್ಧೆಗಳ ಮೂಲಕ ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಆರೋಗ್ಯಕರ ಆಹಾರದ ಅರಿವು ಪಡೆಯುತ್ತಾರೆ ಎಂದು ತಿಳಿಸಿದರು.
ಇನ್ನೋರ್ವ ವಿಜ್ಞಾನಿ (ವಿಸ್ತರಣೆ ಶಿಕ್ಷಣ) ಡಾ.ನವೀನ್ ಕುಮಾರ್.ಪಿ ಅವರು ಮಾತನಾಡಿ, ಗ್ರಾಮೀಣ ಮಹಿಳೆಯರು ತಮ್ಮ ಪಾಕಕೌಶಲ್ಯವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಇಂತಹ ಕಾರ್ಯಕ್ರಮಗಳು ಮಹಿಳಾ ಸಬಲೀಕರಣಕ್ಕೆ ಮಾರ್ಗದರ್ಶಿಯಾಗುತ್ತವೆ ಎಂದರು.
ಸ್ಥಳೀಯವಾಗಿ ಲಭ್ಯವಿರುವ ಪೌಷ್ಠಿಕ ಆಹಾರ ಪದಾರ್ಥಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಪುನರುಜ್ಜೀವಗೊಳಿಸುವ ಉದ್ದೇಶಕ್ಕಾಗಿ ಸುಮಾರು 30 ಮಂದಿ ಗ್ರಾಮೀಣ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಸಾಂಪ್ರದಾಯಿಕ ಪದಾರ್ಥಗಳನ್ನು ಸಿರಿಧಾನ್ಯಗಳ ಬಳಕೆಯಿಂದ ಪೌಷ್ಠಿಕ ಹಾಗೂ ಸವಿಯಾದ ರೀತಿಯಲ್ಲಿ ತಯಾರಿಸಿ ತಮ್ಮ ಪಾಕಕೌಶಲ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಸುಮಾರು 120 ಮಂದಿ ಶಾಲಾ ಮಕ್ಕಳು ಪಾಲ್ಗೊಂಡು ಪೌಷ್ಠಿಕ ಆಹಾರ ಸೇವನೆ ಮತ್ತು ಆಹಾರ ವ್ಯರ್ಥತೆಯನ್ನು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ವಿಜ್ಞಾನ ಕೇಂದ್ರದ ಅಧಿಕಾರಿ-ಸಿಬ್ಬಂದಿ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಅ.28 ರಂದು ಬಳ್ಳಾರಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ
ಬಳ್ಳಾರಿ,ಅ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ 2025-26ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಅ.28 ರಂದು ಬೆಳಿಗ್ಗೆ 10.30 ಕ್ಕೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಯುವಕ, ಯುವತಿಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ/ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಸ್ಪರ್ಧಾಳುಗಳು 15 ರಿಂದ 29 ವರ್ಷದೊಳಗಿನವರಾಗಿರಬೇಕು.
*ಸ್ಪರ್ಧೆಗಳ ವಿವರ:*
ಜಾನಪದ ನೃತ್ಯ(10 ಜನರ ಗುಂಪು): ಸ್ಪರ್ಧೆಯಲ್ಲಿ ಯಾವುದೇ ಕ್ಯಾಸೆಟ್, ಪೆನ್‌ಡ್ರೈವ್, ಸಿಡಿ ಹಾಡುಗಳಿಗೆ ಅವಕಾಶ ಇರುವುದಿಲ್ಲ, 15 ನಿಮಿಷ ಮಾತ್ರ.
ಜಾನಪದ ಗೀತೆ(10 ಜನರ ಗುಂಪು): ಸ್ಪರ್ಧೆಯಲ್ಲಿ ಯಾವುದೇ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸುವಂತಿಲ್ಲ ಹಾಗೂ ಹಾಡುಗಳಲ್ಲಿ ಸಿನಿಮಾ ಮಿಶ್ರಣಕ್ಕೆ ಅವಕಾಶವಿರುವುದಿಲ್ಲ, 7 ನಿಮಿಷ ಮಾತ್ರ ಕಾಲಾವಕಾಶ.
ಕಥೆ ಬರೆಯುವುದು(ಒಬ್ಬರಿಗೆ ಅವಕಾಶ): 1000 ಪದಗಳಿಗೆ ಮೀರದಂತೆ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿರಬೇಕು, 60 ನಿಮಿಷ ಮಾತ್ರ ಕಾಲಾವಕಾಶ.
ಚಿತ್ರಕಲೆ(ಒಬ್ಬರಿಗೆ ಅವಕಾಶ): ಎ3 ಸೈಜ್ (ಥೀಮ್: ನಶೆ ಮುಕ್ತ ಯುವ/ಯೂತ್ ಫಾರ್ ಹೆಲ್ದಿ ಸ್ಟೈಲ್), 90 ನಿಮಿಷ ಮಾತ್ರ ಕಾಲಾವಕಾಶ.
ಭಾಷಣ(ಒಬ್ಬರಿಗೆ): ವಿಷಯ-ಭಾರತದಲ್ಲಿ ತುರ್ತು ಪರಿಸ್ಥಿತಿಯ ಅವಧಿ ಮತ್ತು ಸಂವಿಧಾನ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವುದು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು. ಭಾಷಣವು 7 ನಿಮಿಷಗಳ ಅವಧಿಯಲ್ಲಿ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ಪ್ರಸ್ತುತಪಡಿಸಬೇಕು.
ಕವಿತೆ ಬರೆಯುವುದು(ಒಬ್ಬರಿಗೆ): 1000 ಪದ ಮೀರದಂತೆ ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿರಬೇಕು, ಅವಧಿ 60 ನಿಮಿಷ.
ವಿಜ್ಞಾನ ಮೇಳ(ಪ್ರತಿ ಗುಂಪಿಗೆ 5 ಜನ): ನಾವಿನ್ಯಾತ ವಿಜ್ಞಾನ ಮೇಳ ಪ್ರದರ್ಶನ.
ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಆನ್‌ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಿದಲ್ಲಿ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ.
ಭಾಗವಹಿಸಲು ಇಚ್ಚಿಸುವ ಸ್ಪರ್ಧಾರ್ಥಿಗಳು ಅ.27 ರೊಳಗಾಗಿ ತಮ್ಮ ಹೆಸರುಗಳನ್ನು ಆನ್ ಲೈನ್ ಕ್ಯೂರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯ ಅಥವಾ ಮೊ.8971238689, 7026401500 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್: ‘ದೀಪಾವಳಿ ಬೊನಾಂಜಾ’ ಸೇವೆ ಪಡೆದುಕೊಳ್ಳಿ
ಬಳ್ಳಾರಿ,ಅ.23: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಅ.18 ರಿಂದ ನ.18 ರವರೆಗೆ ಒಂದು ತಿಂಗಳ ಸೀಮಿತ ಅವಧಿಗೆ ‘ದೀಪಾವಳಿ ಬೊನಾಂಜಾ-2025’ ಸೇವೆ ನೀಡುತ್ತಿದ್ದು, ಗ್ರಾಹಕರು ರಿಯಾಯಿತಿ ದರದಲ್ಲಿ ಸೇವೆ ಪಡೆದುಕೊಳ್ಳಬೇಕು ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಉಪಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
*ವಿಶೇಷ ಕಾರ್ೋರೇಟ್ ಕೊಡುಗೆ:*
ಎಫ್‌ಆರ್‌ಸಿ1 ಯೋಜನೆಯ ಮೂಲಕ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು. ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆ, 2ಜಿಬಿ ಡೇಟಾ/ದಿನದ ನಂತರ ವೇಗವನ್ನು 40 ಕೆಬಿಪಿಎಸ್ ಮತ್ತು 100 ಎಸ್‌ಎಂಎಸ್ (30 ದಿನಗಳಿಗೆ ಮಾತ್ರ). ಈ ಸೌಲಭ್ಯ ವ್ಯಾಪಾರ ಮತ್ತು ಬೃಹತ್ ಗ್ರಾಹಕರಿಗೆ ಅನ್ವಯಿಸುವುದಿಲ್ಲ.
*ವಿಶೇಷ ಕಾರ್ೋರೇಟ್ ಕೊಡುಗೆ:*
ಈ ಪ್ಲಾನ್ ನಲ್ಲಿ ಕನಿಷ್ಠ 10 ಹೊಸ ಪೋಸ್ಟ್ ಪೇಯ್ಡ್ ಬಿಎಸ್‌ಎನ್‌ಎಲ್ ಸಿಮ್ ಮತ್ತು ಒಂದು ಎಫ್‌ಟಿಟಿಹೆಚ್ ಸಂಪರ್ಕ ತೆಗೆದುಕೊಳ್ಳುವ ಕಾರ್ೋರೇಟ್ ಗ್ರಾಹಕರು ಎಲ್ಲಾ ಹೊಸ ಪೋಸ್ಟ್ ಪೇಯ್ಡ್ ಸಿಮ್ ಮತ್ತು ಎಫ್‌ಟಿಟಿಹೆಚ್ ಸಂಪರ್ಕಕ್ಕಾಗಿ ಮೊದಲ ತಿಂಗಳ ಎಫ್‌ಎಂಸಿ ಯಲ್ಲಿ ಶೇ.10 ರಷ್ಟು ರಿಯಾಯಿತಿ ಪಡೆಯುತ್ತಾರೆ.
*ಶೇ.2.5 ರಿಯಾಯಿತಿ ಪಡೆಯಿರಿ:*
ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರ ಬಿಎಸ್‌ಎನ್‌ಎಲ್ ಸ್ವಯಂ ಆರೈಕೆ ಅಪ್ಲಿಕೇಶನ್ ಮೂಲಕ ರೂ.199 ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡುವ ಮೂಲಕ ಶೇ.2.5 ತ್ವರಿತ ರಿಯಾಯಿತಿ ಪಡೆಯಬಹುದು. ಮೊದಲ ರಿಚಾರ್ಜ್‌ಗಳಿಗೆ ಈ ಕೊಡುಗೆ ಅನ್ವಯಿಸುವುದಿಲ್ಲ.
*ರೂ.485 ಮತ್ತು ರೂ.1999 ರಿಚಾರ್ಜ್‌ಗಳಿಗೆ ರಿಯಾಯಿತಿ ಕೊಡುಗೆ:*
ಬಿಎಸ್‌ಎನ್‌ಎಲ್ ಸೆಲ್ಫ್ ಕೇರ್ ಅಪ್ಲಿಕೇಷನ್ ಅಥವಾ ವೆಬ್ ಸೈಟ್ ಮೂಲಕ ಮಾಡಲಾದ ಎಸ್‌ಟಿವಿ ರೂ.485 ಮತ್ತು ಪಿವಿ ರೂ.1999 ರ ರಿಚಾರ್ಜ್ ಗಳಿಗೆ, ಎಂಆರ್‌ಪಿ ಮೇಲೆ ಶೇ.05 ರಷ್ಟು ರಿಯಾಯಿತಿ ಲಭಿಸಲಿದೆ.
*ಹಿರಿಯ ನಾಗರಿಕರಿಗಾಗಿ ಹೊಸ ಪಿವಿ ರೂ.1812 ವಾರ್ಷಿಕ ಯೋಜನೆ ಬಿಡುಗಡೆ:*
ಎಫ್‌ಆರ್‌ಸಿ ಪ್ರಕಾರ ಹಿರಿಯ ನಾಗರಿಕರಿಗಾಗಿ ರೂ.1812 ಗಳ ವಾರ್ಷಿಕ ಯೋಜನೆ ಬಿಡುಗಡೆ ಮಾಡಲಾಗಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು, ಪ್ರತಿದಿನ 2ಜಿಬಿ ಡೇಟಾ (ನಂತರ ವೇಗವನ್ನು 40 ಕೆಬಿಪಿಎಸ್ ಗೆ ಇಳಿಸಿದ ಯು/ಎಲ್ ಡೇಟಾ), ಪ್ರತಿದಿನ ಉಚಿತ 100 ಎಸ್‌ಎಂಎಸ್ ಹಾಗೂ 6 ತಿಂಗಳ ವರೆಗೆ ಬಿಐಟಿವಿ ಪ್ರೀಮಿಯಂ ರಾಷ್ಟ್ರೀಯ ಪ್ಯಾಕ್, ಉಚಿತ ಸಿಮ್ ದೊರೆಯಲಿದೆ.
*ಇ-ಸಿಮ್ ಸೌಲಭ್ಯ:*
ಬಿಎಸ್‌ಎನ್‌ಎಲ್ ಇ-ಸಿಮ್ ಸೌಲಭ್ಯ ಪರಿಚಯಿಸಿದ್ದು, ಈ ಸೌಲಭ್ಯ ಪಡೆಯಲು ಹೊಂದಾಣಿಕೆಯ ಮೊಬೈಲ್ ಹ್ಯಾಂಡ್ ಸೆಟ್ ಅಗತ್ಯ.
ಎಲ್ಲಾ ಗ್ರಾಹಕರು ಣಣಠಿ:/ಜಟಜಿಛಿಚಿಡಿಜ.ಟಿಟ.ಛಿಠಟಿ ಆನ್‌ಲೈನ್ ನಲ್ಲಿ ಬಿಲ್ ಪಾವತಿಸುವ ಮೂಲಕ ಸೌಲಭ್ಯ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ತಿತಿತಿ.ಟಿಟ.ಛಿಠಟಿ ಗೆ ಭೇಟಿ ನೀಡಬಹುದು ಎಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಕೃಷಿ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಅ.23: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದ ಅತ್ಯುತ್ತಮ ಸಾಧನೆಗೈದ ಪ್ರಗತಿಪರ ಕೃಷಿಕರಿಗೆ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲು 2024-25ನೇ ಸಾಲಿಗೆ ಕಲ್ಯಾಣ ಕರ್ನಾಟಕ ಭಾಗದ ಅರ್ಹರಿಂದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇಲ್ಲಿ ಪಡೆಯಬಹುದು.
ಅರ್ಜಿಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ ಣಣಠಿ://ಣಛಿಡಿಚಿಛಿಣಡಿ.ಞಚಿಡಿಟಿಚಿಣಚಿಞಚಿ.ರಠ.ಟಿ ನಲ್ಲಿ ಸಹ ಪಡೆಯಬಹುದು.
ಆಸಕ್ತ ರೈತರು ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಆಯಾ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರಿಗೆ ಅಥವಾ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳ ಮುಖ್ಯಸ್ಥರ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರ ಅಥವಾ ಮೊ. 9480696314 ಗೆ ಸಂಪರ್ಕಿಸಬಹುದು ಎಂದು ರಾಯಚೂರು ಕೃ.ವಿ.ವಿ. ವಿಸ್ತರಣಾ ನಿರ್ದೇಶಕರು ತಿಳಿಸಿದ್ದಾರೆ.
---------------
ವಿದ್ಯುತ್ ಮಾಪಕವನ್ನು 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಲು ಜೆಸ್ಕಾಂ ಸೂಚನೆ
ಬಳ್ಳಾರಿ,ಅ.23: ಬಳ್ಳಾರಿ ನಗರ ಉಪವಿಭಾಗ-1 ಜೆಸ್ಕಾಂ ವ್ಯಾಪ್ತಿಯಲ್ಲಿ ಕಂಪನಿಯ ನಿಯಮಾನುಸಾರ ಎಲ್ಲಾ ಸ್ಥಾವರದಲ್ಲಿರುವ ಮೀಟರ್‌ಗಳನ್ನು ಆಪ್ಟಿಕಲ್ ಪ್ರೋಬ್ ಡಿವೈಸ್ ಮೂಲಕವೇ ರೀಡಿಂಗ್ ಮಾಡಬೇಕಾಗಿದ್ದು, ವಿದ್ಯುತ್ ಗ್ರಾಹಕರು ತಮ್ಮ ಸ್ಥಾವರದ ವಿದ್ಯುತ್ ಮಾಪಕವನ್ನು ಕಡ್ಡಾಯವಾಗಿ ನೆಲದಿಂದ 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಬೇಕು.
ವಿದ್ಯುತ್ ಮಾಪಕಗಳು ಗೋಚರಿಸುವ ಹಾಗೂ ಓದಲು ಅನುಕೂಲವಾಗುವ ಸ್ಥಳದಲ್ಲಿ ಇರಬೇಕು. ಮೀಟರ್ ಓದುವವರಿಗೆ ಸ್ಥಳವಿಲ್ಲದಿದ್ದಲ್ಲಿ ಸ್ಥಳವಿರುವ ಜಾಗದಲ್ಲಿ ಇರಿಸಬೇಕು. ಅ.25 ರೊಳಗಾಗಿ ನಿಗದಿತ ಎತ್ತರದ ಜಾಗದಲ್ಲಿ ಅಳವಡಿಸಿಕೊಳ್ಳಬೇಕು.
ಈ ನಿಯಮ ಪಾಲನೆ ಮಾಡದಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಅ.24 ರಂದು ‘ಹೆಣ್ಣು ಮಕ್ಕಳ ಜನ್ಮೋತ್ಸವ’ ಕಾರ್ಯಕ್ರಮ
ಬಳ್ಳಾರಿ,ಅ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದಡಿ ಅ.24 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ಜನ್ಮೋತ್ಸವ ಕಾರ್ಯಕ್ರಮ ಏರಿ್ಡಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ ಶಾಂತಿ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಉಮಾದೇವಿ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರ ದೇವಿ ಸೇರಿದಂತೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತರಿರುವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ.ಎಂ ಅವರು ತಿಳಿಸಿದ್ದಾರೆ.
------------
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 