ಭಾರತೀಯ ಸಂಸ್ಕೃತಿ ಉತ್ಸವ ಕಣ್ತುಂಬಿ ಕೊಳ್ಳೋಣ

Let's have a look at the Indian Culture Festival

ಬಳ್ಳಾರಿ 13: ಕಲ್ಯಾಣ ಕರ್ನಾಟಕದ ಸೇಡಂನಲ್ಲಿ ಜನವರಿ ಕೊನೆಯಲ್ಲಿ ಆರಂಭವಾಗುವ ಭಾರತೀಯ ಸಂಸ್ಕೃತಿ ಉತ್ಸವವು ನಮ್ಮ ದೇಶದ ಕೃಷಿ, ತಂತ್ರಜ್ಞಾನ, ಕಲೆ, ವೈದ್ಯಕೀಯ, ಸಾಂಸ್ಕೃತಿಕ ನೆಲೆಗಳನ್ನು ಆಧುನಿಕ ಜಗತ್ತಿಗೆ ಪರಿಚಯಿಸುವ ಅದ್ಭುತ ಕಾರ್ಯಕ್ರಮ ವಾಗಿದ್ದು ಅದರಲ್ಲಿ ದೇಶದ ನಾನಾ ಭಾಗಗಳಿಂದ ತಜ್ಞರು, ವಿದ್ವಾಂಸರು ಕಲಾವಿದರು, ಕೃಷಿಕರು, ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಅದನ್ನು ನೋಡುವುದೇ ಒಂದು ಭಾಗ್ಯ ವಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಚೈತನ್ಯ ಸಂಸ್ಥೆಯ ರಾಧಾ ಕೃಷ್ಣ ನುಡಿದರು.   

ಆರಂಭದಲ್ಲಿ ಉತ್ಸವ ಸಮಿತಿ ಸದಸ್ಯರು, ಬಳ್ಳಾರಿ ಮಾಜಿ ಮೇಯರ್ ಹಾಗೂ ಖ್ಯಾತ ಅಡ್ವೋಕೇಟ್ ಆಗಿರುವ ಶ್ರೀಮತಿ ಪಾರ್ವತಿ ಇಂದು ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಜಾದೂ ನಲ್ಲಿ ಬಂತು ಆಮಂತ್ರಣ  

ದೇಶ ವಿದೇಶಗಳ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅವರು ಮಾತನಾಡಿ ಇಂತಹ ಅಪರೂಪದ ಕಾರ್ಯಕ್ರಮಕ್ಕಾಗಿ ನಾನು ಮಂಗಳೂರು ನಿಂದ ಬಂದು ಜಾದೂ ಮೂಲಕ ಜಾಗೃತಿ ಮೂಡಿಸಲಾಗುತ್ತಿರುವೆ ಎಂದರು. ಸ್ವಚ್ಛತೆ ಮಹತ್ವದ, ನಾವೆಲ್ಲ ಒಂದು ಎಂದು ಸಾರುವ ಹಲವಾರು ವಿಷಯಗಳನ್ನು ಜಾದೂ ಮೂಲಕ ತಿಳಿಸಿದರು.   

ಜಾದೂ ಗಳಲ್ಲಿ ಮಕ್ಕಳನ್ನು, ನಾಗರಿಕರನ್ನು ನಗು ನಗಿಸುತ್ತಾ ಬಳಸಿ ವಿಸ್ಮಯ ಜಾದೂ ಪ್ರದರ್ಶನ ನೀಡಿದರಲ್ಲದೆ, ಜಾದೂ ಮೂಲಕವೇ ಭಾರತೀಯ ಸಂಸ್ಕೃತಿ ಉತ್ಸವ ಆಮಂತ್ರಣ ಅನಾವರಣ ಮಾಡುವ ಮೂಲಕ ಇಡೀ ಕಲಾಮಂದಿರ ಚಪ್ಪಾಳೆ ಯಲ್ಲಿ ಮುಳುಗೇಳುವಂತೆ ಮಾಡಿದ್ದು ಅನನ್ಯ.  

ಕಾರ್ಯಕ್ರಮದಲ್ಲಿ ಪತಂಜಲಿ ಯೋಗದ ಇಸ್ವಿ ಪಂಪಾಪತಿ, ಪ್ರಾಂಶುಪಾಲ ಸಂಘದ ಶ್ರೀಶೈಲ ಹಾಗೂ ಶಿಕ್ಷಕರ ಸಂಘದ ಬೋರಮ್ಮ ಕೆಂಭಾವಿ ಉಪಸ್ಥಿತರಿದ್ದರು.  

ಆರಂಭದಲ್ಲಿ ಜಡೇಶ್ ತಂಡದಿಂದ ಭಾವಗೀತೆ ಜಾನಪದ ಗೀತೆ ನಡೆದವು. ಕು. ಕಾವ್ಯ ಅವರ ನೃತ್ಯ ಗಮನ ಸೆಳೆಯಿತು. ಅಡವಿ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು, ನಗರ ಸಂಚಾಲಕ ವೆಂಕಟೇಶ ಬಡಿಗೇರ ವಂದನಾರೆ​‍್ಣ ಸಲ್ಲಿಸಿದರು.