ಕೆ.ಡಿ. ಜಂಬಿಗಿ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ
Leopard footprints found in K.D. Jambigi village
ಕೆ.ಡಿ. ಜಂಬಿಗಿ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ
ಜಮಖಂಡಿ 08: ತಾಲೂಕಿನ ಕೆ.ಡಿ. ಜಂಬಿಗಿ ಗ್ರಾಮದಲ್ಲಿ ಚಿರತೆಯೊಂದು ನಾಯಿ ಮತ್ತು ಮೇಕೆಯನ್ನು ತಿಂದು ಹಾಕಿದೆ. ಚಿರತೆಯ ಹೆಜ್ಜೆ ಗುರುತುಗಳನ್ನು ನೋಡಿದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದ ಗಿರಮಲ್ಲ ಬಿರಾದಾರ ತೋಟದ ವಸ್ತಿಯಲ್ಲಿ ಇರುವ ನಾಯಿ ಮರಿಯನ್ನು ಮತ್ತು ಆಡು ತಿಂದು ಹಾಕಿದ ಕಾರಣ ಅವರ ಹೊಲದಲ್ಲಿ ಚಿರತೆಯ ಹೆಜ್ಜೆ ಗುರುತು ಸಹ ಪತ್ತೆಯಾಗಿವೆಂದು ಸುತ್ತಮುತ್ತಲಿನ ತೋಟದ ವಸ್ತಿ ಜನರು ಭಯಭೀತಗೊಂಡಿದ್ದಾರೆ. ಚಿರತೆಯ ಆಕಾರದ ಪ್ರಾಣಿಯನ್ನು ಪ್ರತ್ಯೇಕವಾಗಿ ನೋಡಿದ್ದೇನೆ ಎಂದು ರೈತ ಗಿರಮಲ್ಲ ಬಿರಾದರ ತಿಳಿಸಿದ್ದಾರೆ. ಚಿರತೆಯ ಹೆಜ್ಜೆ ಗುರುತು ಹಾಗೂ ನಾಯಿಮರಿಯನ್ನು ತಿಂದು ಬಿಟ್ಟಿದ್ದನ್ನು ನೋಡಿ ಗ್ರಾಮಸ್ಥರು ಸಾವಳಗಿ ಪೊಲೀಸ್ ಠಾಣೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಗಮನಕ್ಕೆ ತಂದಿರುತ್ತಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸರು ಭೇಟಿ ನೀಡಿ ಮಾಹಿತಿಯನ್ನು ಪಡೆದಿರುತ್ತಾರೆ.
ಸಾವಳಗಿ ಉಪವಲಯ ಅರಣ್ಯ ಅಧಿಕಾರಿ ಮಹೇಶ ಗುಡಿಮನಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಹಾರಗೊಂಡ, ಪ್ರಕಾಶ ಕರಾವಳಿ, ಈರಣ್ಣ ಪೋದ್ದಾರ, ಪೊಲೀಸ್ ಸಿಬ್ಬಂದಿಗಳಾದ ವಿಶಾಲ ಭಜಂತ್ರಿ, ಶ್ರೀಶೈಲ ಜಂಬಿಗಿ, ಗ್ರಾಮಸ್ಥರಾದ ಶ್ರೀಶೈಲ ಅಲ್ಲವಗೋಳ, ಗಿರಿಗೌಡ ಪಾಟೀಲ, ರವಿ ಐಗಿಳಿ, ಮಾಲಿಂಗಪ್ಪ ಕುಂಚನೂರ ಅನೇಕರು ಇದ್ದರು.ಪಕ್ಕದ ಗ್ರಾಮ ನಾಗನೂರ ಗ್ರಾಮದಲ್ಲಿ ತಡರಾತ್ರಿಯಲ್ಲಿ ಸಹ ಚಿರತೆಯು ಬಂದಿದ್ದು. ಮನೆಯ ಹೊರಗಡೆ ಕಟ್ಟಿರುವ ಆಡು ತಿನ್ನಲು ಬಂದ ಕಾರಣ ಆಡು ಜೋರಾಗಿ ಕೂಗಾಡಿದ ಕಾರಣ ಮನೆಯಲ್ಲಿನ ಜನರು ಕೂಗಾಟ - ಚಿರಾಟ ಮಾಡುತ್ತಾ ಹೊರಗೆ ಬಂದ ತಕ್ಷಣ ಮತ್ತೆ ಕಬ್ಬಿನ ಗದ್ದೆಯಲ್ಲಿ ಹೋಗಿರುವ ಸಾಧ್ಯತೆ ಇದೆ ಎಂದು ನಾಗನೂರ ಗ್ರಾಮಸ್ಥರು ತಿಳಿಸಿದ್ದು. ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಚಿರತೆ ಅಥವಾ ಕತ್ತೆ ಕಿರುಬು ಎಂಬುದನ್ನು ಪತ್ತೆ ಹಚ್ಚಿ ಚಿರತೆಯಾಗಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ನಾವು ಹೆಚ್ಚಿನ ಕಾರ್ಯಚರಣೆ ನಡೆಸಿ ಅಲ್ಲಲ್ಲಿ ಸಿಸಿ ಕ್ಯಾಮೆರಾ ಹಾಗೂ ಮಾಂಸ ಆಹಾರವನ್ನು ಇಟ್ಟು ಅದನ್ನು ಬೋನಿನಲ್ಲಿ ಬಂಧಿಸುತ್ತೇವೆ ಅದಕ್ಕಾಗಿ ಗ್ರಾಮಸ್ಥರಲ್ಲಿ ಮನವಿ ದನ ಕರು ನಾಯಿ ಚಿಕ್ಕ ಸಾಕು ಪ್ರಾಣಿಗಳನ್ನು ದಯವಿಟ್ಟು ಯಾರು ರಾತ್ರಿ ವೇಳೆ ಹೊರಗಡೆ ಪ್ರಾಣಿಗಳನ್ನು ಕಟ್ಟಬೇಡಿ ಹಾಗೂ ಚಿಕ್ಕ ಮಕ್ಕಳನ್ನು ಹೊರಗಡೆ ಬಿಡಬೇಡಿ ಒಬ್ಬಂಟಿಯಾಗಿ ತಿರುಗಾಡಬೇಡಿ ಎಂದು ರೈತರಲ್ಲಿ ಮನವಿ ಮಾಡುತ್ತೇವೆ.
ಕಿರಣ ದಾಸರೆಡ್ಡಿ ಜಮಖಂಡಿ ವಿಭಾಗ ವಲಯ ಅಧಿಕಾರಿಗಳು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 