ಬೈಕ್ ಸವಾರರ ಮೇಲೆ ಚಿರತೆ ದಾಳಿ, ಮೂವರಿಗೆ ಗಾಯ
Leopard attacks bikers, three injured
ಲೋಕದರ್ಶನ ವರದಿ
ಹೂವಿನಹಡಗಲಿ 21: ತಾಲ್ಲೂಕಿನ ಕತ್ತೆಬೆನ್ನೂರು ಹಿ ಅಂಗೂರು ಮಾರ್ಗ ಮಧ್ಯೆ ಶನಿವಾರ ರಾತ್ರಿ ಬೈಕ್ ಸವಾರರ ಮೇಲೆ ಚಿರತೆ ಎರಗಿದ್ದು, ಮೂವರು ಗಾಯಗೊಂಡಿದ್ದಾರೆ.ಅಂಗೂರು ಗ್ರಾಮದ ಶಂಭಣ್ಣ, ಅಲೆಮಾರಿ ಕುರಿಗಾಹಿಗಳಾದ ಆನಂದ ಯಡ್ರಾಮಿ, ಶಿವಪ್ಪ ಕವಲಾಪೂರ ಗಾಯಗೊಂಡವರು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.ಕತ್ತೆಬೆನ್ನೂರು ಅಂಗೂರು ಮಾರ್ಗದಲ್ಲಿ ಬೈಕ್ನಲ್ಲಿ ಹೊರಟಿದ್ದ ಶಂಭಣ್ಣನ ಮೇಲೆ ಚಿರತೆ ಎರಗಿದೆ. ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದ ಅವರು, ಜೋರಾಗಿ ಕೂಗಿಕೊಂಡಾಗ ಚಿರತೆ ಅಲ್ಲಿಂದ ಪರಾರಿಯಾಗಿದೆ. ಕೆಲ ಕ್ಷಣದ ನಂತರ ಅದೇ ಮಾರ್ಗದಲ್ಲಿ ಹೊರಟಿದ್ದ ಆನಂದ ಯಡ್ರಾಮಿ, ಶಿವಪ್ಪ ಕವಲಾಪೂರ ಅವರ ಬೈಕ್ ಮೇಲೆ ಎರಡು ಚಿರತೆಗಳು ಎರಗಿವೆ. ಇಬ್ಬರಿಗೂ ತರಚು ಗಾಯಗಳಾಗಿವೆ.ಹಳ್ಳದ ಪ್ರದೇಶದಲ್ಲಿ ನಾಲೈದು ಚಿರತೆಗಳು ಒಟ್ಟಿಗೆ ಇರುವುದನ್ನು ನೋಡಿದ ಅವರು, ಈ ಮಾರ್ಗದಲ್ಲಿ ರಾತ್ರಿ ಓಡಾಡದಂತೆ ಎರಡೂ ಗ್ರಾಮಗಳವರಿಗೆ ವಿಷಯ ತಿಳಿಸಿದ್ದಾರೆ.ಬೇಸಿಗೆಯಲ್ಲಿ ತುಂಬಿನಕೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಆಹಾರ, ನೀರು ಅರಸಿ ಚಿರತೆಗಳು ಜನ ವಸತಿಯತ್ತ ಬರುತ್ತಿವೆ. ಎರಡು ಮೂರು ವರ್ಷಗಳಿಂದ ಈ ಪ್ರದೇಶದಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ಕುರಿ, ಮೇಕೆ, ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆಗಳು ಈಗ ಬೈಕ್ ಸವಾರರ ಮೇಲೆಯೂ ದಾಳಿ ಶುರು ಮಾಡಿವೆ’ ಎಂದು ಸ್ಥಳೀಯ ನಿವಾಸಿ ರವಿ ತಿಳಿಸಿದರು.’ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಈ ಪ್ರದೇಶದ ಜನರು ಭಯಭೀತರಾಗಿದ್ದಾರೆ. ರಾತ್ರಿ ವೇಳೆ ಪಂಪ್ ಸೆಟ್ ಚಾಲೂ ಮಾಡಲು ಹೋಗಲು ಹಿಂಜರಿಯುವಂತಾಗಿದೆ. ಕೃಷಿ ಚಟುವಟಿಕೆಗಳಿಗೂ ತೊಂದರೆ ಉಂಟಾಗಿದೆ. ತಕ್ಷಣ ಚಿರತೆಗಳು ಓಡಾಡುವ ಸ್ಥಳಗಳಲ್ಲಿ ಬೋನುಗಳನ್ನು ಅಳವಡಿಸಿ ಸೆರೆ ಹಿಡಿಯಬೇಕು. ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ, ನೀರು ಸಿಗುವ ವ್ಯವಸ್ಥೆ ಮಾಡಬೇಕು’ ಎಂದು ಅಂಗೂರಿನ ದೇವೇಂದ್ರ್ಪ ಒತ್ತಾಯಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 