ಶಿಗ್ಗಾವಿ ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಕಾನೂನು ಕ್ರಮ

ಶಿಗ್ಗಾವಿ ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಕಾನೂನು ಕ್ರಮ Legal action against leaders of the Valmiki Nayaka community in Shiggavi taluk

ಶಿಗ್ಗಾವಿ ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಕಾನೂನು ಕ್ರಮ 

ಶಿಗ್ಗಾವಿ 19  : ಚಿಕ್ಕೋಡಿ ಭಾಗದ ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅವ್ಯಾಚ್ಯ ಶಬ್ದಗಳಿಂದ ಜಾತಿ ನಿಂಧನೆ ಮಾಡಿ ಅವಮಾನಿಸಿದ್ದು ಅವರನ್ನು ಕೂಡಲೇ ಜಾತಿ ನಿಂದನೆ ಕೇಸ್ ಪ್ರಕರಣ ದಾಖಲಿಸಿ ಅವರನ್ನ ಬಂದಿಸಿ, ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿಗ್ಗಾವಿ ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಕಾನೂನು ಕ್ರಮಕ್ಕೆ ಅಗ್ರಹಿಸಿದರು. ನ್ಯಾಯವಾದಿ ಹಾಗೂ ಮುಖಂಡ ಮಾರುತಿ ವಾಲ್ಮೀಕಿ ಮಾತನಾಡಿ, ವಾಲ್ಮೀಕಿ ಸಮುದಾಯದ ಬಗ್ಗೆ ಮಾತನಾಡುವಾಗ ಇತಿಹಾಸವನ್ನ ತಿಳಿದು ಎಚ್ಚರಿಕೆಯಿಂದ ಮಾತನಾಡಬೇಕು, ಇಡಿ ಭಾರತ ದೇಶಕ್ಕಾಗಿ ಜೀವವನ್ನು ಕೊಟ್ಟು ತ್ಯಾಗ ಮಾಡಿದ ಸಮುದಾಯವಾಗಿದೆ, ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸಮುದಾಯ ಈ ವಾಲ್ಮೀಕಿ ಸಮುದಾಯವಾಗಿದೆ, ಓರ್ವ ಜನ ನಾಯಕನಾಗಿ ಒಂದು ಸಮುದಾಯವನ್ನ ನಿಂದಿಸುವುದು ಎಷ್ಟು ಸರಿ ? ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪೂರ್ವದಲ್ಲಿ ರಾಮಾಯಣವನ್ನ ನೀಡಿದ ಮಹರ್ಷಿ ವಾಲ್ಮೀಕಿಯವರ ವಂಶಸ್ಥರಿಗೆ ಈ ರೀತಿಯ ಅವ್ಯಾಚ್ಯ ಶಭ್ದ ಬಳಸಿ ಜಾತಿ ನಿಂದನೆ ಮಾಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮೂಲಕ ಎಚ್ಚರಿಸಬೇಕಾಗುತ್ತದೆ ಕೂಡಲೇ ರಮೇಶ ಕತ್ತಿ ಬೇಶರತ್ ಕ್ಷಮೆ ಯಾಚಿಸಬೇಕು ಇಲ್ಲವಾದರೆ ಅಖಂಡ ವಾಲ್ಮೀಕಿ ಸಮುದಾಯದಿಂದ ಉಗ್ರವಾದ ಪ್ರತಿಭಟಣೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು. 

ವಾಲ್ಮೀಕಿ ಯುವ ಘಟಕದ ತಾಲೂಕಾದ್ಯಕ್ಷ ಬಸವರಾಜ ವಾಲ್ಮೀಕಿ ಮಾತನಾಡಿ, ಬೆಳಗಾಂವ ಡಿ.ಸಿ.ಸಿ ಬ್ಯಾಂಕನ ಮತದಾನ ಪ್ರಕ್ರಿಯೇ ನಡೆಯುತ್ತಿರುವ ಸಂದರ್ಭದಲ್ಲಿ ಬೆಲ್ಲದ ಬಾಗೇವಾಡಿಯಲ್ಲಿ ರಮೇಶ ಕತ್ತಿ ನಮ್ಮ ವಾಲ್ಮೀಕಿ/ನಾಯಕ/ಬೇಡ ಸಮುದಾಯದ ಜನರಿಗೆ ಅವ್ಯಾಚ್ಚ ಶಬ್ದದಿಂದ ನಿಂಧಿಸಿದಲ್ಲದೆ ಜಾತಿ ನಿಂಧನೆ ಮಾಡಿ ಅವಮಾನಿಸಿದ್ದಾರೆ, ಇದು ಜಾತಿ ನಿಂಧನೆ ಪ್ರಕಣಕ್ಕೆ ಕೈಗನ್ನಡಿಯಾಗಿದೆ, ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದಾಖಲಾಗಿದೆ, ಇದರಿಂದ ಅಖಂಡ ವಾಲ್ಮೀಕಿ ಸಮುದಾಯವನ್ನು ಜಾತಿ ಆಧಾರದಿಂದ ನಿಂಧಿಸಿರುವುದು ಸತ್ಯವಿರುತ್ತದೆ. ಆದ ಕಾರಣ ರಮೇಶ ಕತ್ತಿರವರನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದರು. ನಂತರ ಪಟ್ಟಣದ ಪೋಲೀಸ್ ಠಾಣೆಗೆ ತೆರಳಿದ ವಾಲ್ಮೀಕಿ ಸಮುದಾಯದ ಮುಖಂಡರು, ಕಾನೂನು ಕ್ರಮ ಕೈಗೊಳ್ಳಿವಂತೆ ಶಿಗ್ಗಾವಿ ಪೋಲೀಸ್ ಠಾಣೆಯ ಮೂಲಕ ಮನವಿ ಅರ​‍್ಿಸಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಮಲ್ಲಾಡದ, ಮಲ್ಲೇಶಪ್ಪ ಚೋಟಪ್ಪನವರ, ಮಲ್ಲಿಕಾರ್ಜುನಗೌಡ ಪಾಟೀಲ, ಗದಿಗೆಪ್ಪ ಓಲೇಕಾರ, ಪ್ರಕಾಶ ಕ್ಯಾಲಕೊಂಡ, ರವಿ ಹಾದಿಮನಿ, ಮಹೇಶ ತಳವಾರ, ಚಂದ್ರು ಓಲೇಕಾರ, ಮನೋಹರ ಹಾದಿಮನಿ, ಶಿವಪ್ಪ ಓಲೇಕಾರ, ದೇವನಗೌಡ ಗದಿಗೆಪ್ಪಗೌಡ್ರ, ಸಂತೋಷ ತಾರಿಹಾಳ, ಸುರೇಶ ತಳವಾರ ಸೇರಿದಂತೆ ವಾಲ್ಮೀಕಿ ಸಮುದಾಯದ ಇತರ ಮುಖಂಡರು ಇದ್ದರು.