ಸರ್ಕಾರ ಮತ್ತು ಸಂಸ್ಥೆಗಳ ಸಮನ್ವಯತೆಯಿಂದ ಸಾಗಾಣಿಕೆ ತಡೆ ಸಾಧ್ಯ: ಸಂಕಣ್ಣವರ
Legal Awareness Assistance Program: Bastawada
ಬಸ್ತವಾಡ (ಹುಕ್ಕೇರಿ) 26: ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ ಮತ್ತು ಪೋಸ್ಕೋ ಪ್ರಕರಣಗಳು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಲೈಂಗಿಕ ಶೂಷಣೆ, ಬಲವಂತದ ದುಡಿಮೆ, ಕೌಟುಂಬಿಕ ದೌರ್ಜನ್ಯ, ಪ್ರಕರಣಗಳನ್ನು ಸಂಘಟಿತರಾಗಿ ತಡೆಯಬೇಕಾಗಿದೆ. ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಂಘಟತರಾಗಿ ಸಮನ್ವಯತೆಯಿಂದ ಕೆಲಸಮಾಡಿದಾಗ ಮಾತ್ರ ಮಾನವ ಕಳ್ಳಸಾಗಾಣಿಕೆ ಹತೋಟಿಗೆ ತರಬಹುದು ಎಂದು ಹುಕ್ಕೇರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣವರ ಅಭಿಪ್ರಾಯಪಟ್ಟರು.
ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕ ಆಡಳಿತ, ವಿಹಾನ್ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರ ಹಿಡಕಲ್ ಡ್ಯಾಂ ಇವರುಗಳ ಸಂಯೋಗದಲ್ಲಿ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಆಶಾ ಶಿಂಗಾಡಿ ಮಾತನಾಡಿ ಮಹಿಳೆಯರಿಗೆ ಸ್ಥಳೀಯವಾಗಿ ಸುರಕ್ಷಿತ ಉದ್ಯೋಗ ನೀಡುವ ಮೂಲಕ ಮೋಸದ ಅವಕಾಶ ಕಡಿಮೆ ಮಾಡಬಹುದು. ಬಾಲ್ಯ ವಿವಾಹ, ಜನನ ಮರಣ ನೋಂದಣಿ, ವಿವಾಹ ಜೀವನಾರ್ ಕಾಯ್ದೆ ಬಗ್ಗೆ ವಿವರಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ.ಬಿ ಕುರುಬೇಟ ಮಾತನಾಡಿ ಜನಸಾಮಾನ್ಯರು ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆ ಸಹ ಅರಿವು ಹೊಂದಿರಬೇಕು ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಕಾನೂನಿಯ ಸಹಾಯ ಪಡೆಯಬಹುದು ಎಂದರು. ನ್ಯಾಯವಾದಿ ಬಿ. ಎಂ. ಜಿನರಾಳಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕಾಯ್ದೆ, ಲೈಂಗಿಕ ಕಿರುಕುಳ, ಪೋಕ್ಸೋ, ಪ್ರಕರಣಗಳ ತಡೆಯುವಲ್ಲಿ ಸಮುದಾಯದ ಸಹಭಾಗಿತ್ವದ ಕುರಿತು ತಿಳಿಸಿದರು. ಅವರ ಸರಕಾರಿ ವಕೀಲ ಎಂ. ಸಿ. ಕರೋಳಿ, ಜಂಟಿ ಕಾರ್ಯದರ್ಶಿ ವಿ. ಎಲ್. ಘಸ್ತಿ, ಖಜಾಂಚಿ, ಎ. ಎ. ಬಾಗೇವಾಡಿ, ಮಹಿಳಾ ಪ್ರತಿನಿಧಿ ಎ.ಬಿ. ಕುಲಕರ್ಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಸಂಸ್ಥೆಯ ಮೂಲಕ ಶಕ್ತಿ ಸದನ ಯೋಜನೆಯನ್ನು ಅನುಷ್ಠಾನ ಮಾಡುತ್ತಲಿದ್ದು ನಿರ್ಲಕ್ಷಕ್ಕೆ ಒಳಗಾದ ಮಹಿಳೆಯರು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಟಿ.ಡಿ.ಪಿ.ಓ ಹೊಳೆಪ್ಪ, ಹೆಚ್, ಎ.ಸಿ.ಡಿ.ಪಿ.ಓ ಕಮಲಾ ಹಿರೇಮಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕರಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಜಾವಲಸಾಬ್ ಬಾಡ್ಕರ್, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಕಿರಣ್ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿದರು. ವಿಹಾನ ಸಂಸ್ಥೆಯ ಸಂಯೋಜಕಿ ರೇಖಾ ಬೆನಿವಾಡ ನಿರೂಪಿಸಿದರು. ಪ್ರಿಯಾಂಕಾ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 