ಮುಖ್ಯ ಮಂತ್ರಿಗಳ ಎಡಬಿಡಂಗಿ ಹೇಳಿಕೆ: ಆತ್ಮ ಸ್ಥೈರ್ಯ ಕಳೆದು ಕೊಳ್ಳುತ್ತಿರುವ ರೈತ: ಪಾಟೀಲ
ಲೋಕದರ್ಶನ ವರದಿ
ರಾಣಿಬೆನ್ನೂರು 10: ರಾಜ್ಯ ಸರಕಾರವು 18 ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಗಳೆಂದು ಘೋಷಿಸಿದೆ. ಆದರೆ ಮುಖ್ಯ ಮಂತ್ರಿಗಳು ತಮ್ಮ ಎಡಬಿಡಂಗಿ ಹೇಳಿಕೆಗಳನ್ನು ನೀಡುವುದರ ಮೂಲಕ ರಾಜ್ಯದ ರೈತರು ಆತ್ಮ ವಿಶ್ವಾಸವನ್ನು ಕಳೆದು ಕೊಂಡು ಆತ್ಮಹತ್ಯಯ ದಾರಿ ಹಿಡಿಯುವಂತಾಗಿದೆ. ಕೂಡಲೇ ಸಂಪೂರ್ಣ ಸಾಲ ಮನ್ನಾ ಮಾಡಿ ಆದೇಶಿಸುವಂತೆ ರೈತಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ರವೀಂದ್ರ ಗೌಡ ಪಾಟೀಲ ಅವರು ಆಗ್ರಹಿಸಿದರು.
ಈ ಕುರಿತು ನಗರದಲ್ಲಿ ಆಯೋಜಿಸಿದ್ದ ಮಾದ್ಯಮ ಗೂಷ್ಠಿಯಲ್ಲಿ ಮಾತನಾಡಿದರು.
ಸತತ 4 ವರ್ಷಗಳ ಬರಗಾಲದ ನಂತರವು ಪುನ: ಈ ವರ್ಷವು ಮುಂಗಾರು ಮಳೆ ಕೈ ಕೂಟ್ಟಿದೆ ಹಾವೇರಿ, ದಾವಣಗೇರೆ, ಬಳ್ಳಾರಿ, ಕೂಪ್ಪಳ, ರಾಯಚೂರು, ಚಿಕ್ಕಬುಳ್ಳಾಪುರ, ಕಲಬುಗರ್ಿ, ಯಾದಗಿರಿ, ಬೀದರ, ವಿಜಯಾಪುರ, ಬಾಗಲಕೋಟೆ, ಗದಗ, ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ರೈತ ಮುಂಗಾರು ಮಳೆಯಿಂದ ವಂಚಿತನಾಗಿದ್ದಾನೆ ಎಂದರು.
ಪ್ರತಿವರ್ಷವೊ ಮುಂಗಾರು ಕೈ ಕೂಟ್ಟಾಗಲೂಮ್ಮೆ ಹಿಂಗಾರು ಸಹ ಅದೇ ಪರಿಸ್ಥಿತಿ ಮುಂದುವರೆಯುತ್ತಾ ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಆಹಾಕಾರ ಎದ್ದಿದೆ.
ಇಂತಹ ಸಂದರ್ಭದಲ್ಲಿ ನಾಡಿನ ದೂರೆ ನೀಡಿರುವ ಅಪಹಾಸ್ಯದ ಹೇಳಿಕೆಗಳು ರೈತರ ಜಂಗಾಬಲವನ್ನೆ ಕುಸಿಯುವಂತೆ ಮಾಡಿದರು. ಅವರ ಹೇಳಿಕೆಗಳಿಂದ ರೈತರು ಪುನ: ಆತ್ಮ ಸ್ಥೈರ್ಯ ಕಳೆದು ಕೂಂಡು ನಿತ್ಯವೂ ಆತ್ಮಹತ್ಯ ಪ್ರಕರಣಗಳು ಹೆಚ್ಚಾಗುತ್ತಲಿವೆ ಎಂದು ವಿವರಿಸಿದರು.
18 ಜಿಲ್ಲೆ ಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ ಅಲ್ಲಿ ಕುಡಿಯುವ ನೀರು ಜಾನುವಾರಗಳಿಗೆ ಮೇವು ಬ್ಯಾಂಕ್ ತರೆದು ರೈತರು ಜನಸಾಮಾನ್ಯರು ಗುಳೆಹೂಗುವುದನ್ನು ತಪ್ಪಿಸಬೇಕು ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಘೋಷಿಸಿ ರೈತರ ಆತ್ಮ ವಿಶ್ವಾಸ ಹೆಚ್ಚಿಸಲು ಮುಂದಾಗಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರಾದ ಸುರೇಶಪ್ಪ ಗರಡಿ ಮನಿ, ಮಾಲತೇಶ ಪೂಜಾರ, ಪರ್ವತ ಗೌಡ ಕುಸಗೂರು, ಹರಿಹರ ಗೌಡ ಪಾಟೀಲ, ಮಲ್ಲೇಶಪ್ಪ ಬಿಳಿಎಲಿ, ಕೊಟ್ರೇಶಪ್ಪ ಹುಬ್ಬಳ್ಳಿ, ಶಿರಾಜ ಶೇಖ ರಾಣೇಬೆನ್ನೂರು, ಗೌರಮ್ಮ ತೆಗ್ಗಿನ, ಅಂಜನಮ್ಮ ಹಾದರಗೇರಿ, ರೂಪಾ ನಾಯಕ, ದಿಲ್ಶಾದಬೀ ಶೇತ್ಸನದಿ, ಜಯಣ್ಣ ಮಾಗನೂರ ಮತ್ತಿತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 