ಇಟ್ಟಿಗಿಯಲ್ಲಿ ಜನಪದ ಸಾಹಿತ್ಯ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಉಪನ್ಯಾಸ
Lecture on folk literature and the development of North Karnataka at Ittigi
ಲೋಕದರ್ಶನ ವರದಿ
ಹೂವಿನಹಡಗಲಿ 01: ಜನಮುಖಿ ಇತಿಹಾಸದ ಜೀವಂತ ಸಾಕ್ಷಿ ಜನಪದ ಸಾಹಿತ್ಯ. ಭಾರತದ ಬಹುಪಾಲು ಚರಿತ್ರೆ ಅರಸೊತ್ತಿಗೆಯ ಚರಿತ್ರೆಯಾಗಿದ್ದು, ಜನಸಾಮಾನ್ಯರು ಇಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಜನಮುಖಿ ಚರಿತ್ರೆಯ ಜೀವಂತ ಸಾಕ್ಷಿಯಾಗಿ ಜನಪದ ಸಾಹಿತ್ಯವನ್ನು ಪರಿಗಣಿಸಬೇಕು ಎಂದು ಹಗರಿಬೊಮ್ಮನಹಳ್ಳಿ ಜೆವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹಾಗೂ ಚಿಂತಕ ಡಾ. ಅಕ್ಕಿ ಬಸವೇಶ ಅಭಿಪ್ರಾಯಪಟ್ಟರು.
ತಾಲೂಕಿನ ಇಟ್ಟಿಗಿ ಗ್ರಾಮದ ಕೆ.ಎನ್.ಎಸ್.ಸಿ. ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕ ಇಟ್ಟಿಗಿ ಹಾಗೂ ತಾಲೂಕು ಘಟಕ ಹೂವಿನಹಡಗಲಿ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜನಪದ ಸಾಹಿತ್ಯ’ ಹಾಗೂ ‘ಉತ್ತರ ಕರ್ನಾಟಕದ ಅಭಿವೃದ್ಧಿಯ ಸ್ಥಿತಿಗತಿಗಳು’ ಕುರಿತು ಉಪನ್ಯಾಸ ನೀಡಿದ ಅವರು, ಜನಪದ ಸಾಹಿತ್ಯ ಮತ್ತು ಸಂಸ್ಕೃತಿ ಇಂದು ನಶಿಸುತ್ತಿದ್ದು, ಜನಪದ ಮೌಲ್ಯಗಳ ಜಾಗೃತಿಗಾಗಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.
ಮುಖ್ಯ ಗುರುಗಳಾದ ಕೆ. ಗಂಗಾಧರ್ಪ ಅವರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ. ವಿನಯರಾಜ್ ವಹಿಸಿದ್ದರು.
ವಿದ್ಯಾರ್ಥಿನಿಯರಾದ ಮಾನಸ ಮತ್ತು ಲಕ್ಷ್ಮಿ ಕವನ ವಾಚಿಸಿದರು. ಶಾಲಾ ಆಡಳಿತಾಧಿಕಾರಿ ಟಿ. ಸಿದ್ಧಾರ್ಥ, ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಭಾರ್ಗವಿ ಮತ್ತು ನಂದಿನಿ ಪ್ರಾರ್ಥಿಸಿದರು. ಕನ್ನಡ ಶಿಕ್ಷಕ ಕೊಟ್ಟರಗೌಡ ಸ್ವಾಗತಿಸಿದರು. ಹಿಂದಿ ಶಿಕ್ಷಕಿ ಸುನೀತಾ ವಂದಿಸಿದರು. ಹಿರಿಯ ಶಿಕ್ಷಕ ಎಸ್. ಶಶಿಧರಗೌಡ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶ್ರೀಪಾಟೀಲ್ ಅನ್ನದಾನಗೌಡ ಸ್ಮಾರಕ ದತ್ತಿ, ಶ್ರೀಪಾಟೀಲ್ ಚನ್ನನಗೌಡ ಸ್ಮಾರಕ ದತ್ತಿ, ನಂದಿಹಳ್ಳಿ ಹಾಲಪ್ಪ ದತ್ತಿ, ಟಿ.ಎಸ್. ಮೃತ್ಯುಂಜಯಪ್ಪ ಸ್ಮಾರಕ ದತ್ತಿ ಹಾಗೂ ಮುದ್ದಿ ನಿಂಗಪ್ಪ ಸ್ಮಾರಕ ದತ್ತಿಗಳ ಸಹಕಾರವಿತ್ತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 