ಕಲಿಕೆ ನಿಂತ ನೀರಾಗಬಾರದು : ಡಾ. ಮಮತಾ ಬನ್ನೂರ
Learning should not become stagnant water: Dr. Mamata Bannur
ವಿಜಯಪುರ 20 : ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ತಮ್ಮಲ್ಲಿರುವ ವಿಷಯ ಜ್ಞಾನ, ಪ್ರಾಯೋಗಿಕತೆ, ಕಲಿತ ವಿಷಯವನ್ನು ವಾಸ್ತವಿಕವಾಗಿ ಹೇಗೆ ಬಳಸಿಕೊಳ್ಳಬಹುದು. ಸಣ್ಣ ವ್ಯವಹಾರ-ವ್ಯಾಪಾರ, ಉದ್ದಿಮೆ, ಬ್ಯಾಂಕಿಂಗ್-ಹಣಕಾಸಿನ ಕ್ಷೇತ್ರಗಳಲ್ಲಿ ಎದುರಾಗುವ ಸಮಸ್ಯೆಗಳು, ಪರಿಹರಿಸುವ ಕ್ರಮ, ರೂಪಿಸಬೇಕಾದ ಯೋಜನೆ-ನೀತಿಗಳು ಮತ್ತು ಲಾಭದಾಯಕತ್ವದಲ್ಲಿ ಹೇಗೆ ವ್ಯವಹಾರವನ್ನು ದೀರ್ಘಾವಧಿಯ ಗುರಿ-ಉದ್ದೇಶಗಳನ್ನು ಸಾಧಿಸಬಹುದು ಮುಂತಾದ ಸಂಗತಿಗಳನ್ನು ಪ್ರಾಜೆಕ್ಟ್ ವರದಿ ಸಿದ್ದಪಡಿಸುವಲ್ಲಿ ಅರಿತುಕೊಳ್ಳಲು ಪ್ರಯೋಜನಕಾರಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ವಿಭಾಗದ ಪ್ರಾಧ್ಯಾಪಕಿ ಡಾ. ಮಮತಾ ಬನ್ನೂರ ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗವು ಆಯೋಜಿಸಿದ “ಪ್ರೋಜೆಕ್ಟ್ ವರದಿಯ ಮೌಖಿಕ ಸಂದರ್ಶನ” ಕಾರ್ಯಕ್ರಮದಲ್ಲಿ ವಿಷಯ ಪರಿಣಿತರಾಗಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಉನ್ನತ ಶಿಕ್ಷಣವು ಕೇವಲ ಶಿಕ್ಷಕರಿಂದ ಮಾತ್ರ ಬೋಧನೆ ಎನ್ನುವಂತಾಗಬಾರದು ಮತ್ತು ಏಕಮುಖವಾಗಬಾರದು. ವಿದ್ಯಾರ್ಥಿಗಳ ಕಲಿಕೆಯು ಪಠ್ಯಕ್ರಮಕ್ಕೆ ಸಂಬಂಧಿಸಿದ ಜ್ಞಾನವನ್ನು ಪಡೆಯಲಷ್ಟೇ ಸಿಮೀತವಾಗಬಾರದು. ಶಿಕ್ಷಕರು ಬೋಧನೆ-ಕಲಿಕೆಯಲ್ಲಿ ಸಾಮರಸ್ಯತೆಯನ್ನು ಸಾಧಿಸಲು ತಮ್ಮ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮನೋಭಾವ, ಆತ್ಮವಿಶ್ವಾಸ, ವೇದಿಕೆಯ ಸ್ಥೈರ್ಯ, ವಾಕ್ಚಾತುರ್ಯದಂತಹ ಮೌಲ್ಯಗಳನ್ನು ಬೆಳೆಸಬೇಕು. ಪದವಿ ನಂತರ ಉತ್ತಮ ವ್ಯವಹಾರಸ್ಥ, ಕೈಗಾರಿಕೋದ್ಯಮಿ, ಮ್ಯಾನೇಜರ್, ಕಂಪನಿ ಕಾರ್ಯದರ್ಶಿ, ಚಾರ್ಟರ್ಡ ಅಕೌಂಟಂಟ್, ಲೆಕ್ಕಪರಿಶೋಧಕ, ಫೈನಾನ್ಸಿಯಲ್ ಎನಾಲಿಸ್ಟ್, ಷೇರು ಮಾರುಕಟ್ಟೆ ಮತ್ತು ಇನಕಮ್ ಟ್ಯಾಕ್ಸ್ ಅಡವೈಜರ್ ಆಗಿ ಹೊರಹೊಮ್ಮುವಂತೆ ರೂಪಿಸಬೇಕು ಎಂದರು.
ಈ ಪ್ರಾಜೆಕ್ಟ್ ವರದಿ ಮೌಖಿಕ ಸಂದರ್ಶನದಲ್ಲಿ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವಿಷಯದ ಉದ್ಧೇಶ, ಸಂಶೋಧನಾ ವಿಧಾನಗಳು, ಪ್ರೋಫೈಲ್, ಮಾಹಿತಿ ಸಂಗ್ರಹಣೆ, ಮಾಹಿತಿ ವಿಶ್ಲೇಷಣೆ ಮತ್ತು ಸಲಹಾತ್ಮಕ ಪರಿಹಾರಗಳು ಮತ್ತು ಸಂಸ್ಥೆಯ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಯನ್ನು ಮೌಖಿಕ ಸಂದರ್ಶನದಲ್ಲಿ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ, ಹಿರಿಯ ಪ್ರಾಧ್ಯಾಪಕರಾದ ಡಾ. ಐ.ಎಸ್.ಶಿವಶರಣರ, ಪ್ರೊ. ಆರ್.ಐ.ಜೋಗೂರ, ಪ್ರೊ. ವ್ಹಿ.ಆರ್.ಕಬಾಡೆ ಇನ್ನಿತರರು ಸಹ ಉಪಸ್ಥಿತರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 