ಕಲಿಕೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲು, ಕಲಿಕೆ ಮತ್ತಷ್ಟು ಗಟ್ಟಿಗೊಳಿಸಲು ಕಲಿಕಾ ಹಬ್ಬ ಸಹಕಾರಿ

ಕಲಿಕೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲು, ಕಲಿಕೆ ಮತ್ತಷ್ಟು ಗಟ್ಟಿಗೊಳಿಸಲು ಕಲಿಕಾ ಹಬ್ಬ ಸಹಕಾರಿ Learning festivals are helpful in encouraging children to learn and further solidifying their learni

 ಕಂಪ್ಲಿ 05 :  ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪ್ರೋತ್ಸಾಹಿಸಲು, ಕಲಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಆಯೋಜಿಸಿರುವ ಸರ್ಕಾರದ ವಿನೂತನ ಈ ಕಲಿಕಾ ಹಬ್ಬ ಕಾರ್ಯಕ್ರಮವು ಬಹಳ ಉಪಯುಕ್ತವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಮರಿಯಪ್ಪ ಹೇಳಿದರು.ತಾಲೂಕಿನ ಸಣಾಪುರ ಗ್ರಾಮದ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಬಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಫ್‌.ಎಲ್‌.ಎನ್ ಆಧರಿತ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮಕ್ಕಳಿಗೆ ಈ ಕಲಿಕಾ ಹಬ್ಬ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.

ನಂತರ ಸಿಆರ​‍್ಿ ರೇಣುಕಾರಾಧ್ಯ ಪ್ರಾಸ್ತಾವಿಕವಾಗಿ  ಮಾತನಾಡಿ, ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲಾಗುತ್ತಿದೆ. ಕಲಿಕಾ ಹಬ್ಬ ಶೈಕ್ಷಣಿಕ ಅಂಶಗಳನ್ನೊಳಗೊಂಡಿದೆ. ಮಕ್ಕಳಲ್ಲಿ ಪ್ರಾಯೋಗಿಕ, ವೈಜ್ಞಾನಿಕ ಹಾಗೂ ಕ್ರಿಯಾತ್ಮಕ ಕಲಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ’. ಈ ಕಲಿಕಾ ಹಬ್ಬದ ಸದುಪಯೋಗದೊಂದಿಗೆ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಇಲ್ಲಿನ ಕಲಿಕಾ ಹಬ್ಬದಲ್ಲಿ ಪೋಷಕ ಸಹ ಸಂಬಂಧ ವಲಯ, ಕಥೆ ಹೇಳುವುದು, ಸಂತಸದಾಯಕ ಗಣಿತ, ಆರೋಗ್ಯ ಪೌಷ್ಠಿಕಾಂಶ, ಗಟ್ಟಿ ಓದು, ನೆನಪಿನ ಶಕ್ತಿ ಪರೀಕ್ಷೆ, ರಸ ಪ್ರಶ್ನೆ ಸೇರಿದಂತೆ ಒಟ್ಟು ಏಳು ಕಲಿಕಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಯಿತು ಎಂದರು.

ನಂತರ ಈ ಕಲಿಕಾ ಚಟುವಟಿಕೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರದ ಜೊತೆಗೆ ಬಹುಮಾನ ಹಾಗೂ ಭಾಗವಹಿಸಿದ ಮಕ್ಕಳಿಗೆ ಅಭಿನಂದನಾ ಪತ್ರ ಮತ್ತು ಸಮಾಧಾನಕರ ಬಹುಮಾನ ವಿತರಿಸಲಾಯಿತು. ಈ ಕಲಿಕಾ ಹಬ್ಬದಲ್ಲಿ 11 ಶಾಲೆಯಿಂದ ಒಟ್ಟು 88 ಮಕ್ಕಳು ಭಾಗವಹಿಸಿದ್ದರು.ಕಾರ್ಯಕ್ರಮ ಮುಂಚಿತವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದ ಕಲಿಕಾ ಹಬ್ಬದ ಭವ್ಯ ಮೆರವಣಿಗೆಗೆ ಕುಂಭ, ಕಳಸ ಸೇರಿದಂತೆ ಕಲಿಕಾ ಚಟುವಟಿಕೆಗಳು ಸಾಕ್ಣಿಯಾದವು.ಈ ಸಂದರ್ಭದಲ್ಲಿ ಅಪೆಕ್ಸ್‌ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಪಿಡಿಒ ಹಾಲರ್ವಿ ಶೇಷಗಿರಿ, ಇಸಿಒ ರೇವಣ್ಣ, ಎನ್ಪಿಎಸ್ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ, ಸಿಆರ್ ಪಿ ಗಂಗಾಧರ, ಮುಖ್ಯಶಿಕ್ಷಕಿ ಸುನೀತಾ ಕುಮಾರಿ, ಮುಖ್ಯಗುರು ಎಚ್‌.ಪಿ.ಸೋಮಶೇಖರ, ಶಿಕ್ಷಕರಾದ ಚಂದ್ರಯ್ಯ ಸೊಪ್ಪಿನಮಠ, ರೇವಣಸಿದ್ದೇಶ ಮುಖಂಡರಾದ ವಿರೇಶ, ಕುರುಗೋಡು ಬಸವರಾಜ, ಟಿ.ಶರಣಪ್ಪ, ಈಶಣ್ಣ, ವೈ.ರಮಣಯ್ಯ ಸೇರಿದಂತೆ ಮಕ್ಕಳು ಇದ್ದರು.