ಮಕ್ಕಳ ವಿಕಸನಕ್ಕೆ ಕಲಿಕಾ ಹಬ್ಬ ಸಹಕಾರಿ: ಸುನಂದಾ ವಾಲಿಕಾರ

ಮಕ್ಕಳ ವಿಕಸನಕ್ಕೆ ಕಲಿಕಾ ಹಬ್ಬ ಸಹಕಾರಿ: ಸುನಂದಾ ವಾಲಿಕಾರ  Learning festivals are helpful for children's development: Sunanda Valikara

ಲೋಕದರ್ಶನ ವರದಿ   

ಇಂಡಿ 09: ಕಲಿಕಾ ಹಬ್ಬವು ಮಕ್ಕಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಹೇಳಿದರು. 

ಅವರು ತಡವಲಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವೇಶ್ವರ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ  2025-26 ನೇ ಸಾಲಿನ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳೀಯ ಕಲೆಗಳು, ಜನಪದ ಹಾಡುಗಳು ಮತ್ತು ಕಥೆಗಳಿಗೆ ಈ ಹಬ್ಬದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕರಾದ ಟಿ ಎಸ್ ಜಂಬಗಿ ಅವರು ಮಾತನಾಡಿ ಇದು ಮಕ್ಕಳಿಗೆ ತಮ್ಮ ಸಂಸ್ಕೃತಿಯ ಪರಿಚಯ, ಚಿತ್ರಕಲೆ, ಮಣ್ಣಿನ ಮಾದರಿ ತಯಾರಿಕೆ, ಕಾಗದದ ಕೆಲಸ, ನಾಟಕಗಳ ಮೂಲಕ ಮಕ್ಕಳ ಸೃಜನಶೀಲ ಶಕ್ತಿಯನ್ನು ಉತ್ತೇಜಿಸಲಾಗುತ್ತದೆ ಎಂದರು.ಬಸವೇಶ್ವರ ವಸತಿ ಶಾಲೆಯ ಮುಖ್ಯ ಗುರುಮಾತೆ ಚೆನ್ನಮ್ಮ ಝಳಕಿ ಅವರು ಮಾತನಾಡಿ, ಕಲಿಕಾ ಹಬ್ಬವು ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿಸಲು ಮತ್ತು ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಆಯೋಜಿಸಲಾಗುವ ಒಂದು ವಿಶೇಷ ಕಾರ್ಯಕ್ರಮ ಎಂದು ತಿಳಿಸಿದರು. 

ಶಿಕ್ಷಕರಾದ ಡಾ. ಕೆ ಎಂ ಇಂಡಿ ಮಾತನಾಡಿ ಕಲಿಕಾ ಹಬ್ಬವೆನ್ನುವುದು ಕಲಿಕೆಯ ಹಬ್ಬವಾಗಬೇಕು. ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸಬೇಕು. ಕಲಿಕೆಯು ಆಟ, ಸಂವಾದ, ಕಲೆ, ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಮಕ್ಕಳ ಕಲಿಕೆಯ ಒತ್ತಡವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದರು.  

ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪಂತೋಜಿ ಮಾತನಾಡಿ ಮಕ್ಕಳು, ಶಿಕ್ಷಕರು ಪೋಷಕರು ಹಾಗೂ ಸಮುದಾಯದೊಂದಿಗೆ ಬೆರೆತು ಕಲಿಯುವಂತಾಗಬೇಕು. ಕ್ಲಸ್ಟರ್ ಹಂತದ ಶಾಲೆಗಳು ತಮ್ಮೊಳಗಿರುವ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯಾಗಬೇಕು ಎಂದು ಸಿಆರ್‌ಪಿಗಳಾದ ಪ್ರಕಾಶ್ ಚವ್ಹಾಣ ಹಾಗೂ ಮಂಜುನಾಥ ತೇಲಿ ಮತ್ತು ಶಿಕ್ಷಕರಾದ ಎನ್ ಎಸ್ ಚವ್ಹಾಣ ಎಚ್ ಆರ್ ಮುತ್ತಗಿ ವಿ ಆಯ್ ಜಾಡರ ಎ ಡಿ ರೇವಶೆಟ್ಟಿ ರಾಜು ತಳಕೇರಿ ಎಸ್ ಎಂ ವಂದಾಲ ಲಕ್ಷ್ಮಣ ಕೊಕಣಿ ಎಸ್ ಎಂ ಲಾಳಸಂಗಿ ಎಸ್ ಆರ್ ಝಳಕಿ ಸಂದೀಶ್ ಬಿರಾದಾರ ಪ್ರೇಮಾ ಹುಬ್ಬಳ್ಳಿ ಶ್ರೀದೇವಿ ಹಿಳ್ಳಿ ರೇಣುಕಾ ಗುಂದಗಿ ಕವಿತಾ ಪಾಟೀಲ ಸೇರಿದಂತೆ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 

ಶಿಕ್ಷಕರಾದ ಎನ್ ಜಿ ರೊಳ್ಳಿ ಸ್ವಾಗತಿಸಿದರು. ಎಸ್ ಆರ್ ಗಿಡಗಂಟಿ ನಿರೂಪಿಸಿದರು. ಎಸ್ ಬಿ ಅಂಗಡಿ ವಂದಿಸಿದರು.