ಕಾಗವಾಡ 27: 20 ವರ್ಷ ಹಿಂದೆ ಕಾಗರ್ಿಲ್ ಯುದ್ಧದಲ್ಲಿ 530 ಸೈನಿಕರು ಭಾರತ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ಬಲಿದಾನವಾಗಿ ನೀಡಿದರು. ಇಂತಹ ಸೈನಿಕರ ಶೌರ್ಯ, ದೇಶಭಕ್ತಿ ಪ್ರತಿಯೊಂದು ಶಾಲೆಯ ವಿದ್ಯಾಥರ್ಿಗಳಿಗೆ ವಿದ್ಯಾಭ್ಯಾಸದೊಂದಿಗೆ ಅವರಿಗೆ ನೀತಿ ಪಾಠ ಹೇಳಿ, ದೇಶ ಭಕ್ತಿ ಅವರಲ್ಲಿ ತುಂಬಿಸಬೇಕು ಎಂದು ಸನ್ 1965 ಹಾಗೂ 1971ರ ಯುದ್ಧದಲ್ಲಿ ಭಾಗವಹಿಸಿ, ಸೈನಿಕ ಸೇವೆಯಿಂದ ನಿವೃತ್ತಿ ಹೊಂದಿರುವ ಶಿವಪುತ್ರ ಪಾವಲಿ ಐನಾಪುರದಲ್ಲಿ ಹೇಳಿದರು.
ಗುರುವಾರ ದಿ. 26 ರಂದು ಬೆಳಗ್ಗೆ ಐನಾಪುರದ ಶಾಂತಿಸಾಗರ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ 20ನೇ "ಕಾಗರ್ಿಲ್ ವಿಜಯ ದಿವಸ" ನಿಮಿತ್ಯ ಹಮ್ಮಿಕೊಂಡ ಸಮಾರಂಭದಲ್ಲಿ ನಿವೃತ್ತ ಸೈನಿಕ ಶಿವಪುತ್ರ ಪಾವಲಿ ಮಾತನಾಡಿದರು.
ಕಾಗರ್ಿಲ್ ಯುದ್ಧದ ಬಗ್ಗೆ ಮಾಹಿತಿ ನೀಡುವಾಗ, ಕಾಗರ್ಿಲ್ ಇದೊಂದು ವಿಶಾಲ ಪರ್ವತ. ಪಾಕಿಸ್ತಾನ ಸೈನಿಕರು ಮೇಲಿದ್ದರು. ಭಾರತಿಯ ಸೈನಿಕರು ಕೆಳಗೆ ಉಳಿದು, ಈ ಯುದ್ಧದಲ್ಲಿ ಹೋರಾಡುತ್ತಿದ್ದರು. ಭಾರತದ 6 ಸೈನಿಕರಿಗೆ ಚಿತ್ರಹಿಂಸೆ ನೀಡಿದರು. ಇದನ್ನು ಭಾರತಿಯ ಸೈನಿಕರು ಸವಾಲವಾಗಿ ಸ್ವೀಕರಿಸಿ ಪಾಕಿಸ್ತಾನ ಸೈನಿಕರನ್ನು ಹೊಡೆದು ಹಾಕಿ, ಯಶ ಪಡೆದುಕೊಂಡರು. ಈ ಯುದ್ಧದಲ್ಲಿ 530 ಸೈನಿಕರು ಶಹಿದರಾದರು. ಇವರ ಶೌರ್ಯ ನೆನಪಿಸಿ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ವಿದ್ಯಾಥರ್ಿಗಳಿಗೆ ದೇಶಭಕ್ತಿ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ನಿವೃತ್ತ ಸೈನಿಕ ಶಿವಪುತ್ರ ಪಾವಲಿ ಹೇಳಿದರು.
ಸಮಾರಂಭದಲ್ಲಿ ನಿವೃತ್ತ ಸೈನಿಕರಾದ ನೇಮಗೌಡಾ ಪಾಟೀಲ(ಐನಾಪುರ), ಖಂಡು ಪಾಟೀಲ, ದಾದಾಸಾಹೇಬ ನಾಯಿಕ್, ಧೊಂಡಿರಾಮ್ ನಾಯಿಕ್(ಕೃಷ್ಣಾ-ಕಿತ್ತುರ), ಅಶೋಕ ಇಂಗಳೆ, ಮಂಗಸೂಳಿಯ ದತ್ತಾತ್ರಯ ಶಿಂದೆ, ಎಸ್.ಕೆ.ಮಗದುಮ್ಮ ಇವರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.
ಶಹಿದ ಜವಾನರಿಗೆ ಸಮಾರಂಭದಲ್ಲಿ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಸೈನಿಕರ ವೇಷದಲ್ಲಿಯ ಚಿಕ್ಕ ಬಾಲಕರಿಂದ ದೀಪ ಪ್ರಜ್ವಲಿಸಿ, ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಈ ಬಾಲಕರ ವೇಷ-ಭೂಷಣ ಎದ್ದು ಕಾಣುತ್ತಿತ್ತು.
ಶಾಂತಿಸಾಗರ ಶಿಕ್ಷಣ ಸಂಸ್ಥೆ ಆಧ್ಯಕ್ಷ ರವೀಂದ್ರ ಗಾಣಿಗೇರ ಆಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಸಂಸ್ಥೆ ಉಪಾಧ್ಯಕ್ಷ ಪಾಯಪ್ಪಾ ಕುಡವಕ್ಕಲಗಿ, ಕಾರ್ಯದಶರ್ಿ ಬಾಳಾಸಾಹೇಬ ದಾನೋಳಿ ಸೇರಿದಂತೆ ಪಾಲಕರು, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ಕಿರಣ ಚಂದಾವರ್ ಸ್ವಾಗತಿಸಿ, ವಂದಿಸಿದರು.