ನಾಯಕತ್ವವು ಅಧಿಕಾರವಲ್ಲ ಅದು ಜವಾಬ್ದಾರಿ: ಪ್ರಸಾದ ತೆಂಡೂಲ್ಕರ್

ನಾಯಕತ್ವವು ಅಧಿಕಾರವಲ್ಲ ಅದು ಜವಾಬ್ದಾರಿ: ಪ್ರಸಾದ ತೆಂಡೂಲ್ಕರ್   Leadership is not a power, it is a responsibility: Prasad Tendulkar

ಬೆಳಗಾವಿ 23: ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ವಹಿಸುವ ಜವಾಬ್ದಾರಿಗಳು ಬಹಳ ಮುಖ್ಯವಾದವುಗಳು. ತಾವು ಕಲಿಯುವ ವಿದ್ಯಾ ಸಂಸ್ಥೆಗಳ ನೀತಿ ನಿಯಮ ಮತ್ತು ತಮ್ಮ ಜೀವನದ ಬೆಳವಣಿಗೆಗೆ ಶ್ರದ್ಧೆಯಿಂದ ಅಧ್ಯಯನ ಗೈಯಬೇಕು, ಇಂಥ ಸಂದರ್ಭದಲ್ಲಿ ಬರುವ ನಾಯಕತ್ವ ಜವಾಬ್ದಾರಿ ಗಳನ್ನು ನಿಷ್ಠಾ ವಂತರಾಗಿ ಪೂರೈಸಬೇಕು, ಅವರು ನಿರ್ವಹಿಸುವ ನಾಯಕತ್ವ ಅಧಿಕಾರವಲ್ಲ  ಅದು ಏಳಿಗೆಗೆ ದುಡಿಯುವ ಜವಾಬ್ದಾರಿ ಯಾಗಬೇಕು ಎಂದು ಖ್ಯಾತ ಕ್ರೀಡಾಪಟುಗಳು, ಸಮಾಜ ಸೇವಕರು, ಆರ್‌. ಪಿ. ಡಿ. ಕಾಲೇಜಿನ ಮ್ಯಾನೇಜಿಂಗ್ ಕಮಿಟಿಯ ಸದಸ್ಯರೂ ಆದ  ಪ್ರಸಾದ ತೆಂಡೂಲ್ಕರ್ ಅವರು ನುಡಿದರು.   

ಇಂದು ದಿ. 23ರಂದು ಬೆಳಗಾವಿ ನಗರದ ಪ್ರತಿಷ್ಠಿತ ಸೌತ್ ಕೊಂಕಣ ಶಿಕ್ಷಣ ಸಂಸ್ಥೆಯ ಆರ್‌. ಪಿ. ಡಿ. ಕಾಲೇಜಿನ 2025-26 ನೆಯ ಸಾಲಿನ ವಿದ್ಯಾರ್ಥಿ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.  

ಅಧ್ಯಕ್ಷತೆ ವಹಿಸಿದ್ದ ಆರ್‌. ಪಿ. ಡಿ. ಕಾಲೇಜಿನ ಮ್ಯಾನೇಜಿಂಗ್ ಕಮಿಟಿಯ ಸದಸ್ಯರಾದ ಡಾ. ಧನಶ್ರೀ ಅಜಗಾಂವ್ಕರ್ ಅವರು  ವಿದ್ಯಾರ್ಥಿಗಳು ಪ್ರತೀವರ್ಷ ಹೊಸದನ್ನು ಸಾಧಿಸಬೇಕು ಅದಕ್ಕೆ ವಿದ್ಯಾರ್ಥಿಗಳೆಲ್ಲ ಕೂಡಿ ಶ್ರಮಿಸಬೇಕು. ಸಮೂಹ ಸಾಧನೆ ಬಹಳ ದೊಡ್ಡದು, ಮತ್ತು ಮಹತ್ವದ್ದು. ಪ್ರಮಾಣ ಸ್ವೀಕರಿಸಿದಂತೆ ನಡೆದು ನಿಮ್ಮಿಂದ ನಿಮಗೂ ಕಾಲೇಜಿಗೂ ಕೀರ್ತಿ ತರಬೇಕು ಎಂದು ಕರೆ ನೀಡಿದರು.   

ಪ್ರೊ. ಅಕ್ಷಯ್ ಹಿರೇಮಠ ಪ್ರಾರ್ಥನೆ ಸಲ್ಲಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಅಭಯ ಪಾಟೀಲ ಅವರು ಸ್ವಾಗತ ಕೋರಿದರು. ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷರಾದ ಡಾ. ಎಸ್‌. ಎಚ್‌. ಪಾಟೀಲ ಅವರು ಅತಿಥಿ ಗಳನ್ನು ಪರಿಚಯಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ತದ ನಂತರ ವಿದ್ಯಾರ್ಥಿ ನಾಯಕರಿಂದ ಅಧಿಕಾರ ಸ್ವೀಕಾರ ಮತ್ತು ಪ್ರಮಾಣ ವಚನ, ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ಕಾರ್ಯಕ್ರಮ ಜರುಗಿತು.. ಪ್ರೊ. ಶರಯೂ ಪೋತ್ನಿಸ್ ಮತ್ತು ಪ್ರೊ. ಸಾಯಿಶೀಲಾ ಜಡೆ ಅವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕು. ಆರೋಗ್ಯಪ್ಪ ವಂದನಾರೆ​‍್ಣ ಸಲ್ಲಿಸಿದರು.    

ಕ್ರೀಡಾ ನಿರ್ದೇಶಕ ಡಾ. ರಾಮಕೃಷ್ಣ ಎನ್‌. ಮತ್ತು ಎಲ್ಲ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.