ಸ್ಥಳೀಯ ಚುನಾವಣೆಗೆ ನಾಯಕರು ಪಕ್ಷದ ಸಂಘಟನೆಗೆ ಶ್ರಮಿಸಬೇಕು
Leaders should work hard to organize the party for local elections
ಹಾವೇರಿ 17: ಜಿಲ್ಲೆಯಲ್ಲಿ ಎಲ್ಲಾ ಸ್ಥಳೀಯ ಚುನಾವಣೆ ಎದುರಿಸಲು ಎಲ್ಲಾ ಗ್ರಾಮ-ತಾಲ್ಲೂಕ ಸಮಿತಿಗಳನ್ನು ರಚನೆಮಾಡಲಾಗುತ್ತಿದ್ದು, ಜವಾಬ್ದಾರಿ ತೆಗೆದುಕೊಂಡ ನಾಯಕರು ಪಕ್ಷ ಸಂಘಟನೆ ಮಾಡಲು ಶ್ರಮಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಲ್‌ಇಂಡಿಯಾ ಬಹುಜನ ಸಮಾಜ ಪಕ್ಷದಜಿಲ್ಲಾ ಮಟ್ಟದ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಮಾಡಿ ಅವರಿಗೆ ಶುಭಕೋರಿ ಮಾತನಾಡಿದರು.
ಇದೇ ಅವಧಿಯಲ್ಲಿ ರಾಣೇಬೆನ್ನೂರ ತಾಲ್ಲೂಕಾಧ್ಯಕ್ಷರಾಗಿ ಜಿ.ಕೆ. ಗಣೇಶ, ಹಿರೇಕೆರೂರ ತಾಲ್ಲೂಕಾಧ್ಯಕ್ಷರಾಗಿ ಲೋಹಿತ ಓಲೇಕಾರ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶಂಭುಲಿಂಗಯ್ಯ ಹನಗೋಡಿಮಠ, ರಾಜಪ್ಪ ಉಪ್ಪಾರ, ವಿಜಯಕುಮಾರ ಬೇನಕನವಾರಿ, ಲಿಯಾಕತ್ ತಿಳವಳ್ಳಿ, ಮೋಹಿನ್ ಮುಲ್ಲಾ, ಎಸ್.ಎಂ.ಗಣಜೂರ, ಎಂ.ಕೆ.ಮಖಬೂಲ್, ಇಶಾಕ ಕಾಗಿನೆಲೆ, ಅಜೀಮಸಾಬ ಮನ್ನಂಗಿ, ಗುಡ್ಡಪ್ಪ ಚಿಕ್ಕಪ್ಪನವರ, ದಾದಾಪೀರ ಮತ್ತಿಹಳ್ಳಿ,ಬಿ.ಸಿ.ಲಂಬಿ ಸೇರಿದಂತೆ ಪಕ್ಷದ ಮುಖಂಡರು ಮತ್ತುಕಾರ್ಯಕರ್ತರು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 