ತಳ್ಳು ಗಾಡಿ ಮೂಲಕ ಅರ್ಹ ಬಡ ಕುಟುಂಬಳಿಗೆ ಆಹಾರ ಧಾನ್ಯ ವಿತರಿಸಿದ ಶಾಸಕಿ ಸೌಮ್ಯ ರೆಡ್ಡಿ

ಬೆಂಗಳೂರು, ಏ 17,ಕೋರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರ ೨ನೇ ಹಂತದ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡ್‌ನಲ್ಲಿ ನಿರ್ಗತಿಕರಿಗೆ ಶಾಸಕರಾದ ರಾಮಲಿಂಗಾ ರೆಡ್ಡಿ ಹಾಗೂ  ಸೌಮ್ಯರೆಡ್ಡಿ  ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.ಈಗಾಗಲೇ ಒಮ್ಮೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿದ್ದು, ೨ನೇ ಬಾರಿಗೆ ತಳ್ಳು ಗಾಡಿಗಳ ಮೂಲಕ ಆಹಾರ ಧಾನ್ಯಗಳ ಕಿಟ್‌ಗಳನ್ನು ಕೊಂಡೊಯ್ದು ಅರ್ಹ ಕುಟುಂಬಗಳಿಗೆ ನೀಡಿದರು.೧೦ ಕೆಜಿ ಅಕ್ಕಿ, ಬೇಳೆ, ಸಕ್ಕರೆ, ಸಾಂಬಾರುಪುಡಿ, ಉಪ್ಪು, ಮುತ್ತಿತರ ದಿನನಿತ್ಯ ಅಗತ್ಯದ ವಸ್ತುಗಳನ್ನು ವಿತರಣೆ ಮಾಡಲಾಯಿತು. ಸುಮಾರು ೩ ಸಾವಿರ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಶಾಸಕಿ ಸೌಮ್ಯ ರೆಡ್ಡಿ ತಳ್ಳು ಗಾಡಿ ತೆಗೆದುಕೊಂಡು ಆಹಾರ ಕಿಟ್ ಗಳನ್ನು ಹಂಚಿ ಗಮನ ಸೆಳೆದರು. ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಸದಸ್ಯ ಎಂ.ನಾಗರಾಜು ತಿಲಕ್‌ನಗರ, ಸ್ವಾಗತ್ ಚಿತ್ರಮಂದಿರ ಬಡಾವಣೆ, ಎಂ.ಎಸ್.ಬಿಲ್ಡಿಂಗ್, ಆಂಜನೇಯಸ್ವಾಮಿ ದೇವಸ್ಥಾನ, ಕಾವೇರಿ ಕೊಳಚೆ ಪ್ರದೇಶದ ಬಡ ಕುಟುಂಬಗಳಿಗೆ ವಿತರಣೆ ಮಾಡಲಾಗಿದೆ. ಮುಂದಿನ ೨-೩ ದಿನಗಳ ಕಾಲ ಮತ್ತಷ್ಟು ಪ್ರದೇಶಗಳ ಬಡವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದರು.