ಭಾರತ್ ಬ್ರ್ಯಾಂಡ್ನಡಿ ರಿಯಾಯಿತಿ ದರದಲ್ಲಿ ಗೋಧಿ ಹಿಟ್ಟು ಮತ್ತು ಅಕ್ಕಿಮಾರಾಟಕ್ಕೆ ಚಾಲನೆ
ನವದೆಹಲಿ 05: ಕೇಂದ್ರ ಸರ್ಕಾರವು ಭಾರತ್ ಬ್ರ್ಯಾಂಡ್ನಡಿ ರಿಯಾಯಿತಿ ದರದಲ್ಲಿ ಗೋಧಿ ಹಿಟ್ಟು ಮತ್ತು ಅಕ್ಕಿ ಮಾರಾಟದ ಎರಡನೇ ಹಂತಕ್ಕೆ ಮಂಗಳವಾರ ಚಾಲನೆ ನೀಡಿದೆ.
ಪ್ರಸ್ತುತ ಗೋಧಿ ಹಿಟ್ಟು ಪ್ರತಿ ಕೆ.ಜಿಗೆ 30
ದರ ಇದ್ದರೆ, ಅಕ್ಕಿ ದರ ಕೆ.ಜಿಗೆ 34ರಂತೆ ಮಾರಾಟ ಮಾಡಲಿದೆ. ಆದರೆ, ಮೊದಲನೇ ಹಂತದಲ್ಲಿ ಗೋಧಿ ಹಿಟ್ಟು ಕೆ.ಜಿ 27
ಮತ್ತು ಅಕ್ಕಿ ಕೆ.ಜಿ 29
ಇತ್ತು. ಇದಕ್ಕೆ ಹೋಲಿಸಿದರೆ ಎರಡನೇ ಹಂತದಲ್ಲಿ ಬೆಲೆಯು ಏರಿಕೆಯಾಗಿದೆ.
ಪ್ರಸ್ತುತ ಅಕ್ಕಿ ಮತ್ತು ಗೋಧಿ ಹಿಟ್ಟು 5 ಕೆ.ಜಿ ಮತ್ತು 10 ಕೆ.ಜಿಗೆ ಪ್ಯಾಕೆಟ್‌ಗಳಲ್ಲಿ ಲಭ್ಯವಿದ್ದು, ಗ್ರಾಹಕರಿಂದ ಬೇಡಿಕೆ ಬಂದರೆ, ಸಣ್ಣ ಗಾತ್ರದ ಪ್ಯಾಕೆಟ್‌ಗಳಲ್ಲಿ ಪೂರೈಸಲಾಗುವುದು. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ಕೇಂದ್ರೀಯ ಭಂಡಾರ ಮತ್ತು ಇ–ಕಾಮರ್ಸ್ ವೇದಿಕೆಗಳಲ್ಲಿ ಮೂಲಕ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸರ್ಕಾರದ ಉದ್ದೇಶ ವ್ಯಾಪಾರ ಮಾಡುವುದಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದು ಮತ್ತು ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಿಸುವುದಾಗಿದೆ ಎಂದು ಹೇಳಿದ್ದಾರೆ.