ಹಿಂದೂಗಳ ಮೇಲೆ ನಡೆದ ಲಾಠಿ ಚಾರ್ಜ ಅನ್ಯಾಯದ ನಿದರ್ಶನ: ನರಹರಿ
Lathi charge against Hindus is an example of injustice: Narahari
ಶಿಗ್ಗಾವಿ 08: ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿ .ಜೆ. ಹಚ್ಚಲು ಹಾವೇರಿ ಜಿಲ್ಲೆಯಲ್ಲಿ ಪರವಾನಗಿ ನೀಡದಿರುವುದು ದುರದೃಷ್ಟಕರ ಎಂದು ಭಾಜಪ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ನರಹರಿ ಕಟ್ಟಿ ಹೇಳಿದರು.
ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಸರ್ಕಾರದ ನಿರ್ವಹಣೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಧಾರವಾಡದಲ್ಲಿ ಗಣಪತಿ ವಿಸರ್ಜನೆ ವೇಳೆ ಸಾಮಾನ್ಯ ಜನರ ಮೇಲೆ ಲಾಠಿ ಚಾರ್ಜ ಮಾಡಿರುವುದು ಹಿಂದೂಗಳ ಮೇಲೆ ನಡೆದ ಅನ್ಯಾಯದ ನಿದರ್ಶನವಾಗಿದೆ ಅಲ್ಲದೇ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅನ್ಯಕೋಮಿನ ಕೆಲ ಯುವಕರು ಹಿಂದೂಗಳ ಆರಾಧ್ಯ ದೈವವಾದ ವಿಘ್ನ ವಿನಾಶಕ ಗಣಪತಿಯ ಮೇಲೆ ಕಲ್ಲು ತೂರಿದಾಗ, ಆ ಘಟನೆಗೆ ವಿರೋಧವಾಗಿ ಪ್ರತಿಭಟಿಸಿದ ಹಿಂದೂಗಳನ್ನು ಬಂಧಿಸಿ, ನಿರಪರಾಧಿಗಳ ಮೇಲೆ ಲಾಠಿ ಚಾರ್ಜ ಮಾಡಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ದುಸ್ಥಿತಿಯನ್ನು ತೋರಿಸುತ್ತದೆ. ಇನ್ನೂ ನೋವುಂಟುಮಾಡುವ ಸಂಗತಿ ಎಂದರೆ, ಪ್ರತಿಭಟನೆಯ ಸಂದರ್ಭದಲ್ಲಿ ಒಬ್ಬ ಪೊಲೀಸ್ ಪೇದೆ ಕಾನೂನು ಬಾಹಿರವಾಗಿ ಹಿಂದೂ ಯುವತಿಯ ಮೇಲೆ ಲಾಠಿ ಬೀಸಿರುವುದು. ಇದು ಕೇವಲ ದುರಂತವಲ್ಲ, ಪಂಚ ಭಾಗ್ಯದ ಜೊತೆಗೆ ರಾಜ್ಯದ ಹಿಂದೂಗಳಿಗೆ ಲಾಠಿಭಾಗ್ಯ ಎಂಬ ಯೋಜನೆಯನ್ನು ಹಬ್ಬದ ಸಂದರ್ಭದಲ್ಲಿ ನೀಡಿದಂತಾಗಿದೆ. ಪ್ರಸ್ತುತ ಪರಿಸ್ಥಿತಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 