ದಿವಂಗತ ಬಸವರಾಜ ಉಳ್ಳಾಗಡ್ಡಿ ಅವರ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
Late Basavaraja Ullagaddi's birthday: Fruits distributed to patients
ಯಲಬುರ್ಗಾ 01: ತಾಲೂಕು ಸಾರ್ವಜನಿಕರ 100 ಹಾಸಿಗೆಯ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಂಗತ ಬಸವರಾಜ ಉಳ್ಳಾಗಡ್ಡಿ ಅವರ ಹುಟ್ಟುಹಬ್ಬವನ್ನು ಕುಟುಂಬದವರು ಹಾಗೂ ಅವರ ಅಭಿಮಾನಿಗಳು ಆಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಅಟಮಾಳಗಿ ಮಾತನಾಡಿ, ಯಲಬುರ್ಗಾ ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿವಂಗತ ಬಸವರಾಜ ಉಳ್ಳಾಗಡ್ಡಿ ಅಣ್ಣನವರು ಸದಾ ಹಸನ್ಮುಖಿಯಾಗಿದ್ದರು. ಎಲ್ಲ ಮುಖಂಡರ ಜತೆಗೂಡಿ ಪಕ್ಷ ಸಂಘಟನೆಗೆ ಪ್ರಾಮಾಣಿಕ, ದಕ್ಷತೆಯಿಂದ ದುಡಿದವರು. ತಾಲೂಕು, ಜಿಲ್ಲೆಯ ಎಲ್ಲ ಕ್ಷೇತ್ರದ ಜನರನ್ನು ಪಕ್ಷಾತೀತವಾಗಿ ಅಪ್ಪಿಕೊಳ್ಳುತ್ತಿದ್ದ ಇವರು ಮನೆಗೆ ಯಾರೇ ಬಂದರೂ ಉಪಚರಿಸಿ ಅವರ ಕಷ್ಟ ನೋವುಗಳಿಗೆ ಸ್ಪಂದಿಸಿ ಸಹಾಯ ಸಹಕಾರ ಮಾಡುತ್ತಿದ್ದ ಒಳ್ಳೆಯ ವ್ಯಕ್ತಿತ್ವ ಇವರದಾಗಿತ್ತು.
ವ್ಯಕ್ತಿತ್ವಕ್ಕೆ ಅನುಗುಣವಾಗಿ ಇಂತಹ ಕಾರ್ಯಕ್ರಮಗಳ ಮೂಲಕ ಅವರ ಹುಟ್ಟುಹಬ್ಬ ನಿಜವಾದ ಅರ್ಥವನ್ನು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ನೀಡಿದ್ದಾರೆ ಎಂದರು. ನಂತರ ಅನೇಕ ಶೋಷಿತರು, ಬಡವರು ಮತ್ತು ನಿರ್ಗತಿಕರಿಗೆ ಗ್ಯಾಸ್ ಒಲೆಯನ್ನು ಮತ್ತು ಆಹಾರ-ಧಾನ್ಯ ಕಿಟ್ಗಳನ್ನು ಒದಗಿಸಿದರು. ಈ ವೇಳೆ ಉಳ್ಳಾಗಡ್ಡಿ ಕುಟುಂಬದವರು ಹಾಗೂ ಅಭಿನಂದನೆಗಳು ಪಕ್ಷದ ಕಾರ್ಯಕರ್ತರು ಇದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 