ಮಗು ಪಡೆಯಲು ಕೊನೆಯ ಅವಕಾಶ
Last chance to get a baby
ಹಾವೇರಿ 25: ಜಿಲ್ಲೆಯ ರಾಣೇಬೆನ್ನೂರ ಶಹರದ ಮಾರುತಿ ನಗರದಲ್ಲಿ ಸುಮಾರು 9 ತಿಂಗಳ ಹೆಣ್ಣು ಮಗುವನ್ನು ಅನಧಿಕೃತವಾಗಿ ಸಾಕುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ತಪಾಸಣೆ ನಡೆಸಲಾಗಿ, ಮಗು ಸಾಕುತ್ತಿದ್ದ ಶಂಕ್ರಪ್ಪ ಬಣಕಾರ, ಶ್ರೀಮತಿ ಶಶಿಕಲಾ ಬಣಕಾರ ಅವರು ಜುಲೈ 07 ರಂದು ಖುದ್ದಾಗಿ ಮಗುವಿನೊಂದಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗಿ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.
ಸ್ಪಂದನಾ ವಿಶೇಷ ದತ್ತು ಕೇಂದ್ರಕ್ಕೆ ಮಗುವನ್ನು ದಾಖಲು ಮಾಡಲಾಗಿದೆ. ಅನಧಿಕೃತವಾಗಿ ಮಗು ಸಾಕುತ್ತಿದ್ದವರನ್ನು ಮಗುವಿನ ಬಗ್ಗೆ ವಿಚಾರಿಸಿದಾಗ, ಎರೇಕುಪ್ಪಿ ರಸ್ತೆಯಲ್ಲಿ ವಾಕ ಮಾಡುವಾಗ ಒಬ್ಬ ಅಜ್ಜಿ ನಮ್ಮ ಹತ್ತಿರ ಬಂದು ಮಗು ಸಿಕ್ಕಿರುತ್ತದೆ ಎಂದು ಹೇಳಿ ಕೊಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ ಹಾಗೂ ಯಾವುದೇ ಮೂಲ ದಾಖಲಾತಿಗಳು ನೀಡಿರುವುದಿಲ್ಲ.
ಆದ್ದರಿಂದ ಮಗುವಿನ ಜೈವಿಕ ಪಾಲಕರಿಗೆ ಮಾನವಿಯತೆಯ ಆಧಾರದ ಮೇಲೆ ಮತ್ತೊಮ್ಮೆ ಮಗುವನ್ನು ಮರಳಿ ಪಡೆಯಲು ಕೊನೆಯ ಅವಕಾಶ ಇರುವುದರಿಂದ ಈ ಮೂಲಕ ಮಾಹಿತಿ ನೀಡಲಾಗಿದೆ. ಆದಾಗ್ಯೂ ಬಾರದೇ ಹೋದಲ್ಲಿ ಮುಂದಿನ ಕಾನೂನು ಬದ್ಧ ಕ್ರಮಗಳನ್ನು ಜರುಗಿಸಲಾಗುವುದು. ತದನಂತರ ಜೈವಿಕ ಪಾಲಕರಿಗೆ ಈ ಮಗುವಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ.
ಆದ್ದರಿಂದ ಪ್ರಕಟಣೆಗೊಂಡ 60 ದಿನಗೊಳಗಾಗಿ ಈ ಮಗುವಿನ ಜೈವಿಕ ಪಾಲಕರಿಗೆ ಇದು ಒಂದು ಕಡೆ ಅವಕಾಶವಾಗಿರುತ್ತದೆ. ಸೂಕ್ತ ದಾಖಲಾತಿಯೊಂದಿಗೆ ಸ್ಪಂದನಾ ವಿಶೇಷ ದತ್ತು ಸಂಸ್ಥೆ ಹಾವೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾವೇರಿ ಕಚೇರಿಗೆ ಬರದೇ ಇದ್ದಲ್ಲಿ ಮಗುವಿನ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಪ್ರಕಟಣೆಗೊಂಡ 60 ದಿನಗಳ ನಂತರ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪರಿತ್ಯಕ್ತ ಮಗುವೆಂದು ಎಂದು ಪರಿಗಣಿಸಿ ಕಾನೂನಿನ್ವಯ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 