ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬೀಜೋತ್ಪಾದನೆಗೆ ಜಮೀನು ಸಿದ್ಧತೆ
Land preparation for seed production at the District Agricultural Training Center
ಲೋಕದರ್ಶನ ವರದಿ
ಕಂಪ್ಲಿ 29: ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಬೀಜೋತ್ಪಾದನಾ ಕೇಂದ್ರದಿಂದ ವಿವಿಧ ತಳಿಯ ಬೀಜ ಬಿತ್ತನೆಗೆ ಭೂಮಿಯನ್ನು ಹದಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕಕೃಷಿ ನಿರ್ದೇಶಕ ಎಂ.ದಯಾನಂದ್ ಮಾತನಾಡಿ ತಾಲ್ಲೂಕಿನಲ್ಲಿ ಎರಡು ದಿನಗಳ ಕಾಲ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಭೂಮಿಯನ್ನು ಹಸನು ಮಾಡಿ ಮಾಗಿ ಉಳುಕೆ ಮಾಡಲಾಗಿದ್ದು,ಈಗ ಕೇಂದ್ರದಿಂದ 6 ಹೆಕ್ಟೇರ್ ಭೂಮಿಯಲ್ಲಿ ಎಂಟಿಯು 1010 ತಳಿಯ ಭತ್ತ, 8 ಹೆಕ್ಟೇರಿನಲ್ಲಿ ಟಿಎಸ್ 3 ಆರ್ ತಳಿಯ ತೊಗರಿ, 20 ಹೆಕ್ಟೇರಿನಲ್ಲಿ ಜೆಜಿ 11 ತಳಿಯ ಕಡಲೆ, 18 ಹೆಕ್ಟೇರಿನಲ್ಲಿ ದೇಶೀಯ ತಳಿಗಳಾದ ನವಣೆ, ಬರಗು ಸೇರಿದಂತೆ ವಿವಿಧ ಸಿಧಾನ್ಯಗಳನ್ನು ಬೆಳೆಯಲಾಗುವುದು ಎಂದು ವಿವರಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಭೂಮಿಯನ್ನು ಸಮಕ್ಷೆ ಮಾಡಿಸಿದ ಬಳಿಕ ತೋಟಗಾರಿಕೆ,ಅರಣ್ಯ ಮತ್ತು ಕೃಷಿ ಬೆಳೆ ಬೆಳೆಯಲು ಉದ್ದೇಶಿಸಲಾಗಿದ್ದು, ಕ್ರೀಯಾಯೋಜನೆ ರೂಪಿಸಿ ಕೃಷಿ ಆಯುಕ್ತರಿಗೆ ಕಳುಹಿಸಲಾಗಿದೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 