ಜಮೀನು ವಿವಾದದ ಕೊಲೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

ಜಮೀನು ವಿವಾದದ ಕೊಲೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ  Land dispute murder accused gets life sentence

ಲೋಕದರ್ಶನ ವರದಿ 

ಬೆಳಗಾವಿ 19: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಮಾನ್ಯ 11ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. 

ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾಲಳ್ಳಿ ಗ್ರಾಮದ ಮೃತ ಶಿವಲಿಂಗಪ್ಪ ಮುರಿಗೆಪ್ಪ ಐಗಳಿ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಬಸಪ್ಪ ದಶವಂತ ಐಗಳಿ ದೋಷಿ ಎಂದು ನ್ಯಾಯಾಲಯ ತೀರ​‍್ು ನೀಡಿದೆ. ಎಸ್‌.ಸಿ. ನಂ. 10058/24 ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆಯ ಜೊತೆಗೆ ರೂ.20,000 ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದೆ. 

ಮೃತ ಶಿವಲಿಂಗಪ್ಪ ಮುರಿಗೆಪ್ಪ ಐಗಳಿ ಹಾಗೂ ಆರೋಪಿ ಬಸಪ್ಪ ದಶವಂತ ಐಗಳಿ ಇವರ ನಡುವೆ ಜಮೀನಿನ ಸೀಮೆಯ ವಿಚಾರವಾಗಿ ಆಗಾಗ್ಗೆ ತಕರಾರು ನಡೆಯುತ್ತಿತ್ತು. ಈ ಬಗ್ಗೆ ಹಿರಿಯರು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ ವಿವಾದ ಮುಂದುವರಿದಿತ್ತು. ದಿ. 19-07-2021ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಹಾಲಳ್ಳಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಕಟ್ಟೆಯ ಮೇಲೆ ಶಿವಲಿಂಗಪ್ಪ ಐಗಳಿ ಮಲಗಿದ್ದ ಸಂದರ್ಭದಲ್ಲಿ, ಆರೋಪಿ ಬಸಪ್ಪ ದಶವಂತ ಐಗಳಿ ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಯೇ ಬಿದ್ದಿದ್ದ್ಡ ಕಲ್ಲನ್ನು ಎತ್ತಿಕೊಂಡು ಶಿವಲಿಂಗಪ್ಪನ ತಲೆಗೆ ಹೊಡೆದಿದ್ದನು. ನಂತರ ಮತ್ತೊಂದು ಸಣ್ಣ ಕಲ್ಲಿನಿಂದ ಪದೇಪದೇ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿ ಸ್ಥಳದಲ್ಲೇ ಕೊಲೆ ಮಾಡಿದ್ದನು. 

ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ತನಿಖಾಧಿಕಾರಿ ಶಂಕರಗೌಡ ಬಸನಗೌಡರ, ಸಿಪಿಐ, ಅಥಣಿ ಅವರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆಯ ವೇಳೆ ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಈರಣ್ಣ ಈ.ಎಸ್‌., ಅಥಣಿ ಅವರು ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ​‍್ು ಪ್ರಕಟಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಮೀನಸಾಬ ಕಲಾದಗಿ ಅವರು ವಾದ ಮಂಡಿಸಿದರು.