ತೆರಿಗೆ ವಸೂಲಾತಿಯಲ್ಲಿ ಲಾಳಸಂಗಿ ಗ್ರಾ.ಪಂ ಪ್ರಥಮ
Lalasangi Gram Panchayat ranks first in tax collection
ಇಂಡಿ 20: ತಾಲೂಕು ಪಂಚಾಯತ ಸಭಾಂಗಣದಲ್ಲಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಗುರಿಗೆ ಮೀರಿ ವಸೂಲಾತಿಯಲ್ಲಿ ಶೇ.100ಅ ರಷ್ಟು ಪ್ರಗತಿ ಸಾಧಿಸಿದ ಇಂಡಿ ತಾಲ್ಲೂಕಿನ ಲಾಳಸಂಗಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿ ಸಿದ್ದರಾಯ ಸಿನಕೇಡ, ಹಾಗೂ ಕಾರ್ಯದರ್ಶಿ ಮಾನಸಿಂಗ್ ರಾಠೋಡ ಹಾಗೂ ಬಿಲ್ ಕಲೆಕ್ಟರ್ ತುಕಾರಾಮ ಮಾರನೂರು ಇವರನ್ನು ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸದರಿ ಗೌರವ ಎಲ್ಲ ಪಂಚಾಯತಿಗಳಿಗೆ ಸಲ್ಲಲಿದೆ. ತಾವು ಸಹ ಒಂದು ತಂಡವಾಗಿ ಕೆಲಸ ಮಾಡಿ ತೆರಿಗೆ ವಸೂಲಾತಿಯಲ್ಲಿ ಶೇ.100ಅ ಪ್ರಗತಿ ಸಾಧಿಸಿ. ತಮಗೂ ಸಹ ತಾಲೂಕು ಪಂಚಾಯತಿಯಿಂದ ಗೌರವ ಸನ್ಮಾನ ಮಾಡಲಾಗುವುದು. ಎಲ್ಲರು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿ ಎಂದು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ ರಾಜ್ ಸಹಾಯಕ ನಿರ್ದೇಶಕರಾದ ಪ್ರಕಾಶ ರಾಠೋಡ , ಯೋಜನಾಧಿಕಾರಿಗಳಾದ ನಂದೀಪ ರಾಠೋಡ ಹಾಗೂ ತಾ.ಪಂ ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು,ತಾಂತ್ರಿಕ ಸಹಾಯಕರುಗಳು, ಹಾಗೂ ಅನೇಕರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 