ಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನ

ಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನ  Lakshmi Hebbalkar consoles the families of the deceased


ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಳೇಬೈಲ್ ಹಾಗೂ ಇನಾಂ ಬಡಸ್ ಗ್ರಾಮಗಳಲ್ಲಿ ಇತ್ತೀಚೆಗೆ ನಿಧನರಾದವರ ಕುಟುಂಬಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಎಳೇಬೈಲ್ ಗ್ರಾಮದ ಕಾಂಗ್ರೆಸ್ ಮುಖಂಡ ಧಾನಾಜಿ ರಾಮು ಮೊರೆ ಅವರ ಪತ್ನಿ ಮಂಗಲ ಮೊರೆ ಹಾಗೂ ಇನಾಂ ಬಡಸ್ ಗ್ರಾಮದ ಕಾಂಗ್ರೆಸ್ ಮುಖಂಡ ನಾರಾಯಣ ಪಾಟೀಲ ಅವರ ತಾಯಿ ಯುಲ್ಲುಬಾಯಿ ಪಾಟೀಲ ಅವರ ನಿವಾಸಗಳಿಗೆ ಭೇಟಿ ನೀಡಿದ ಅವರು, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.