ಲಕ್ಷ್ಮೇಶ್ವರ ಪೊಲೀಸರ ಭರ್ಜರಿ ಕಾರ್ಯಾಚರಣೆ ಮಾದಕ ಪದಾರ್ಥ ಗಾಂಜಾ ಮಾರಾಟ ಆರೋಪಿಗಳ ಬಂಧನ
Lakshmeshwar police arrest drug dealer accused in massive operation
ಲಕ್ಷ್ಮೇಶ್ವರ" 19 : ಪಟ್ಟಣದ ಹರದಗಟ್ಟಿ ರಸ್ತೆಯಲ್ಲಿ ಬರುವ ಮುಕ್ತಿನಗರದ ಅಗಸ್ತ್ಯರ್ಥ ದೇವಸ್ಥಾನದ ಹತ್ತಿರ ದಿನಾಂಕ 15-06-2026 ರಂದು ಮಾದಕ ಪದಾರ್ಥವಾದ ಗಾಂಜಾವನ್ನು ಸಿಗರೇಟನಲ್ಲಿರುವ ತಂಬಾಕನ್ನು ಹೊರ ತೆಗೆದು ಆ ಭಾಗದಲ್ಲಿ ಗಾಂಜಾ ಅನ್ನುವ ಮಾಧಕ ಪದಾರ್ಥವನ್ನು ತುಂಬಿಕೊಂಡು ಸೇವನೆ ಮಾಡುತಿದ್ದ ಸಂತೋಷ ತಂದೆ: ಬಸವರಾಜ ಉಪ್ಪಾರ ಸಾ: ಲಕ್ಷೇಶ್ವರ ಹಾಗೂ ಸಾಧಿಕ್ ತಂದೆ: ರಿಯಾಜ ಅಹ್ಮದ ರಿತ್ತಿ ಸಾ: ಲಕ್ಷೇಶ್ವರ ಇವರ ಮೇಲೆ ದಾಳಿ ಮಾಡಿ ಹಿಡಿದಿಕೊಂಡು ಬಂದಿದ್ದು ಪ್ರಕರಣ ದಾಖಲಿಸಿದ್ದು ಸದರಿ ಪ್ರಕರಣದ ತನಿಖೆ ಕೈಗೊಂಡಾಗ ದಿನಾಂಕ: 18-06-2026 ರಂದು ಗದಗ ದಿಂದ ಲಕ್ಷೇಶ್ವರಕ್ಕೆ ಬರುವ ದಾರಿಯಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿತರಾದ 01) ನಾಗರಾಜ ತಂದೆ: ದೊಡ್ಡಪ್ಪ ಮುತಗಾರ 02) ಪ್ರಶಾಂತ ತಂದೆ: ಕರಿಯಪ್ಪ ಕಟಗೇರಿ 03) ಗಂಗಪ್ಪ ತಂದೆ: ಬಾಬು ನಾರಾಯಣ ಚವ್ಹಾಣ ಸಾ: ಎಲ್ಲರೂ ಗದಗ-ಬೆಟಗೇರಿ ಇವರನ್ನು ದಸ್ತಗಿರಿ ಮಾಡಿ ಇವರ ವಶದಲ್ಲಿ ಇದ್ದ ಒಟ್ಟು 2.365 ಕಿಲೋ. ಗ್ರಾಂ ತೂಕದ ಅ.ಕಿ 1,18,250/- ಕಿಮ್ಮತ್ತಿನ ಗಾಂಜಾವನ್ನು ಸೂಕ್ತ ಕಾನೂನಿನ ಅಡಿಯಲ್ಲಿ ವಶಪಡಿಸಿಕೊಂಡು ಇವರ ಮೇಲೆ ಪ್ರಕರಣ ದಾಖಲೆಸಿ ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ .ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಟಿ.ಕೆ.ರಾಠೋಡ ಪಿಎಸ್‌ಐ (ಅವಿ) ಮತ್ತು ಸಿಬ್ಬಂದಿ ವರ್ಗ ಹಾಗೂ ತನಿಖಾಧಿಕಾರಿಯಾದ ನಾಗರಾಜ ಗಡದ ಪಿಎಸ್‌ಐ (ಕಾಸು) ಇವರಿಗೆ ಮಾರ್ಗದರ್ಶನ ನೀಡಿದ ಡಿ.ಎಸ್.ಪಿ ಸಾಹೇಬರು ಗದಗ ಉಪ-ವಿಭಾಗ ಗದಗ ಹಾಗೂ ಸಿಪಿಐ ಬಿ.ವಿ.ನ್ಯಾಮಗೌಡ ಶಿರಹಟ್ಟಿ ವೃತ್ತ ರವರಿಗೆ ಪೊಲೀಸ್ ಅಧೀಕ್ಷಕರು ಗದಗ ರವರು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 