ಜ.14 ರಿಂದ ಶ್ರೀ ಕ್ಷೇತ್ರ ಯಡೂರನಲ್ಲಿ ಲಕ್ಷದೀಪೊತ್ಸವ

ಜ.14 ರಿಂದ ಶ್ರೀ ಕ್ಷೇತ್ರ ಯಡೂರನಲ್ಲಿ ಲಕ್ಷದೀಪೊತ್ಸವ Lakshdeep festival to be held at Sri Kshetra Yadoor from January 14

ಲೋಕದರ್ಶನ ವರದಿ 

ಜಮಖಂಡಿ 18: ಶ್ರೀ ಕ್ಷೇತ್ರ ಯಡೂರನಲ್ಲಿ ಜ.14 ರಿಂದ ಮಾ.6 ವರೆಗೆ ಮಹಾಕುಂಭಾಭಿಷೇಕ, ಲಕ್ಷದೀಪೊತ್ಸವ, ಕೃಷ್ಣಾರತಿ, ಐದು ರಾಜಗೋಪುರಗಳ ಲೋಕಾರೆ​‍್ಣಗಳಿಗೆ ವಿವಿಧ ಐದು ಪೀಠದ ಶ್ರೀಗಳು ನೇರವೆರಿಸುವರು ಹೀಗೆ ಹಲವು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು  ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. 

ನಗರದ ಮುತ್ತಿನಕಂತಿ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯಡೂರಿನ ಶ್ರೀ ವೀರಭದ್ರ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಕಳೆದ 21 ವರ್ಷದಲ್ಲಿ ಭಕ್ತರಿಗೆ ಮೂಲಭೂಕ ಸೌಕರ್ಯ ಒದಗಿಸುವುದರಿಂದ ದೇವಸ್ಥಾನದ ಜೀರ್ಣೊದ್ದಾರ, ಯಾತ್ರಿನಿವಾಸ, ಕಲ್ಯಾಣಮಂಟಪ, ರಥನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ದಿಗಳಾಗಿವೆ. ಮಾ.3 ರಿಂದ 6ರವರೆಗೆ ಉತ್ತರ ಮತ್ತು ದಕ್ಷಿಣದ ರಾಜಗೋಪುರಗಳ ಲೋಕಾರೆ​‍್ಣ, ಕಳಸಾರೋಣ, ಮಹಾ ಕುಂಭಾಭಿಷೇಕ, ಲಕ್ಷ ದೀಪೋತ್ಸವ ಮತ್ತು ಕಾಶಿಯ ಗಂಗಾಆರತಿ ಮಾದರಿಯಲ್ಲಿ ಕೃಷ್ಣಾರತಿ ಜರುಗಲಿವೆ. ವೀರಶೈವ ಪದ್ದತಿಯಂತೆ ದೇವಾಲಯದ ಶುದ್ದಿಕರಣದ ಜೊತೆಗೆ ಲಕ್ಷಾಂತರ ಭಕ್ತರ ದೇಹ ದೇವಾಲಯಗಳ ಶುದ್ದಿಕರಣ ಲಿಂಗದೀಕ್ಷೆ, ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚಾರಿ ದರ್ಮ ಜಾಗೃತಿ ಯಾತ್ರೆ ಸೇರಿದಂತೆ 51ದಿನಗಳ  ಕಾರ್ಯಕ್ರಮ ಜರುಗಲಿವೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನದಿಂದ ಭಾಗವಸಿ ಕಾರ್ಯಕ್ರಮ ಯಶ್ವಿಗೊಳಿಸಬೇಕು ಎಂದರು. 

ಮುತ್ತಿನಕಂತಿ ಮಠದ ಶಿವಲಿಂಗ ಶೀವಾಚಾರ್ಯ ಶ್ರೀಗಳು, ಕಲ್ಯಾಣಮಠದ ಶ್ರೀಗಳು, ಗುಣದಾಳದ ವಿವೆಕಾನಂದ ಶ್ರೀಗಳು ಮಾತನಾಡಿದರು. ಇದೇ ಸಂದರ್ಭದಲ್ಲಿ ಅರ್ಬನ ಬ್ಯಾಂಕ ಅಧ್ಯಕ್ಷ ರಾಹುಲ ಕಲೂತಿ, ಹುನ್ನೂರಿನ ವಿಶ್ವನಾಥ ಶಾಸ್ತ್ರಿ, ದುಂಡಯ್ಯ ಶಾಸ್ರಿ ಸೇರಿದಂತೆ ಭಕ್ತರು ಇದ್ದರು. 

ಪೋಟೋ : ಜಮಖಂಡಿ ನಗರದ ಮುತ್ತಿನಕಂತಿ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರುಗಳು ಮಾತನಾಡಿದರು.