ಭಾರತಕ್ಕೆ ಮತ್ತೊಂದು ಬೆಳ್ಳಿ, ಟ್ರ್ಯಪ್ ಶೂಟಿಂಗ್ನಲ್ಲಿ ಲಕ್ಷಯ್ಗೆ ರಜತ


ಜಕಾತರ್ಾ 20: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ  ಏಷ್ಯನ್ ಗೇಮ್ಸ್ ಹದಿನೆಂಟನೇ ಆವೃತ್ತಿಯಲ್ಲಿ ಎರಡನೇ ದಿನವಾದ ಇಂದು ಭಾರತಕ್ಕೆ ಎರಡನೇ ಬೆಳ್ಳಿ ಪದಕ ಲಭಿಸಿದೆ. 

ಪುರುಷರ ಟ್ರ್ಯಪ್ ಶೂಟಿಂಗ್ನಲ್ಲಿ ಭಾರತದ ಲಕ್ಷಯ್ ಶಿಯೊರಾನ್ ಬೆಳ್ಳಿ ಪದಕ ಗೆದ್ದಿದ್ದಾರೆ. 

ಲಕ್ಷಯ್ ಒಟ್ಟು 50 ಪಾಯಿಂಟ್ ಗಳಲ್ಲಿ 43 ಪಾಯಿಂಟ್  ಗಳಿಸುವುದರೊಡನೆ ರಜತ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.  

ಇದೇ ವಿಭಾಗದಲ್ಲಿ ಭಾರತದ ಮಾನವ್ಜಿತ್ ಸಿಂಗ್ ಸಿಧು ನಾಲ್ಕನೇ ಸ್ಥಾನ ಪಡೆದಿದ್ದಾರೆ. 

ಸ್ಪಧರ್ೆಯಲ್ಲಿ ಚೈನಾ ತೈಪೆಯ ಯಾಂಗ್ ಕುನ್ಪಿ  ಚಿನ್ನದ ಪದಕ ಗಳಿಸಿಕೊಂಡರು. 

ಇದಕ್ಕೂ ಮುನ್ನ ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ದೀಪಕ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. 

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನೊಡನೆ ನಾಲ್ಕು ಪದಕ ಗಳಿಸಿದೆ.