ಲಕ್ಕುಂಡಿ ಉತ್ಸವ: ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ

ಗದಗ 18: ಲಕ್ಕುಂಡಿ ಉತ್ಸವವನ್ನು ಮಾರ್ಚ್  14 ಮತ್ತು 15 ರಂದು ಎರಡು ದಿನ    ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಲಕ್ಕುಂಡಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಪ್ಲಾಸ್ಟಿಕ್ ಬ್ಯಾನರ್ ಮುಕ್ತ ಲಕ್ಕುಂಡಿ ಉತ್ಸವ ಆಚರಣೆಗೆ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬ ಅಧಿಕಾರಿಗಳು ಸಮಿತಿಗಳ ಮೂಲಕ ತಮಗೆ ನೀಡಿರುವ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಉತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಪ್ಲೆಕ್ಸ್ ಬಳಸದೇ ಬಟ್ಟೆಯ ಬ್ಯಾನರ್ ಬಳಸಬೇಕು. ಮುತುವರ್ಜಿ ಯಿಂದ ಜಿಲ್ಲೆಯ ಹಾಗೂ ಸುತ್ತ ಮುತ್ತಲಿನ  ಭಾಗಗಳಿಂದ ಜನರು ಲಕ್ಕುಂಡಿ ಉತ್ಸವ ವೀಕ್ಷಣೆಗೆ ಆಗಮಿಸುವುದರಿಂದ ಗ್ರಾಮದ ರಸ್ತೆ, ಚರಂಡಿ ಸ್ವಚ್ಚಗೊಳಿಸಿ ಬ್ಲೀಚ್ ಪೌಡರ್ ಹಾಕಿ ಸುಂದರಗೊಳಿಸಬೇಕಲ್ಲದೇ, ಧೂಳು ಏಳದಂತೆ ರಸ್ತೆಗಳಿಗೆ ನೀರು ಸಿಂಪಡಿಸಬೇಕು.           

    ಗ್ರಾಮದಲ್ಲಿರುವ ಪ್ರತಿಯೊಂದು ದೀಪದ ಕಂಬಗಳಿಗೂ ಬಲ್ಬ್ಗಳನ್ನು ಅಳವಡಿಸಬೇಕು ಮುಸುಕಿನ ಬಾವಿಯಲ್ಲಿರುವ ನೀರು ಸಂಪೂರ್ಣ ಹಸಿರಾಗಿದ್ದು, ನೀರು ಹೊರಹಾಕಿ ಹೊಸ ನೀರಿನಿಂದ ಬಾವಿ ತುಂಬಿಸಬೇಕು. ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಾರ್ವಜನಿಕರು ಸಹಕಾರ ನೀಡುತ್ತಿದ್ದು, ಉತ್ಸವದಲ್ಲಿ ಸುಂದರ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನೆರೆ ಹಾವಳಿ, ಇಲಾಖೆಯ ಸಾಧನೆಯ ಕುರಿತು ಚಿತ್ರ ಪ್ರದರ್ಶನ ಆಯೋಜಿಸುವ ಮೂಲಕ ಜನರಿಗೆ ಮಾಹಿತಿ ಒದಗಿಸಬೇಕು. ಉತ್ಸವದ ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಬೇಕು ಲಕ್ಕುಂಡಿಯ ಐತಿಹಾಸಿಕ ವೈಭವದ ಸ್ಮರಣೆ ವೀಕ್ಷಕರಿಗೆ ಮನದಟ್ಟಾಗುವ ಕಾರ್ಯಕ್ರಮಗಳು ಇರಬೇಕು ಎಂದು ಜಿಲ್ಲಾಧಿಕಾರಿಗಳು ನುಡಿದರು.

ರಾಜ್ಯಮಟ್ಟದ ಯುವಜನ ಮೇಳದಲ್ಲಿ ಅತ್ಯಾಕರ್ಷಣೀಯ ಕಲೆ ಪ್ರದಶರ್ಿಸಿದ ಕಲಾ ತಂಡಗಳನ್ನು ಉತ್ಸವಕ್ಕೆ ಆಹ್ವಾನಿಸಬೇಕು. ಉತ್ಸವಕ್ಕೆ ಸ್ಥಳೀಯ ಕಲಾವಿದರ ಜೊತೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸಲು, ಕಲಾವಿದರ ಆಯ್ಕೆಯಲ್ಲಿ ಪುನಾರವರ್ತನೆಗೊಳ್ಳದಂತೆ ನೋಡಿಕೊಳ್ಳಲು ಉತ್ಸವದ ಮುನ್ನಾ ದಿನ ಲಗೋರಿ, ಚಿನ್ನಿದಾಂಡು ಮುಂತಾದ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಉತ್ಸವದ ಅಂಗವಾಗಿ ವಿಶೇಷ ಸಿಡಿಮದ್ದು ಪ್ರದರ್ಶನ ಉತ್ಸವದ ಲಾಂಛನ, ಆಹ್ವಾನ ಪತ್ರಿಕೆ, ವಾಹನಗಳಿಗೆ ಪಾಕರ್ಿಂಗ್ ವ್ಯವಸ್ಥೆ, ವಿಚಾರಗೋಷ್ಠಿ, ಸಾರಿಗೆ, ವಸತಿ, ಪ್ರಚಾರ, ಫಲಪುಷ್ಟ ಪ್ರದರ್ಶನ, ವಸ್ತು ಪ್ರದರ್ಶನ, ಕಲಾವಿದರಿಗೆ ಅನುಕೂಲವಾಗುವಂತೆ ವೇದಿಕೆಯ ಪಕ್ಕ ಮೊಬೈಲ್ ಶೌಚಾಲಯ ನಿಮರ್ಾಣ, ಕೆರಗಳಲ್ಲಿ ದೋಣಿ ವಿಹಾರ, ತುರ್ತು ವೈದ್ಯಕೀಯ ತಂಡ ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹಾಗೂ ಸಂಬಂಧಿತ ವಿಷಯ ಸಮಿತಿಗಳ ರಚನೆ ಕುರಿತು ಸಭೆಯಲ್ಲಿ ಚಚರ್ಿಸಲಾಯಿತು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕೆ, ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎನ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.