ಪುರ್ನವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ

Lack of basic facilities in rehabilitation centers

ಜಮಖಂಡಿ 17: ಮುಳಗಡೆ ಹೊಂದಿರುವ ಗ್ರಾಮದ ಜನರು ಪುರ್ನವಸತಿ ಕೇಂದ್ರಗಳಲ್ಲಿ ವಾಸ ಮಾಡುತ್ತಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಯಾರು ಬರದ ಹಿನ್ನಲೆ ದೆವ್ವಗಳು ವಾಸ ಮಾಡುತ್ತಿದ್ದಾವೆಂದು ಶಾಸಕ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. 

ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮುಳಗಡೆ ಗ್ರಾಮಗಳ ಅಭಿವೃದ್ಧಿಗಾಗಿ ಸರಕಾರಕ್ಕೆ ಅನುದಾನ ಕೇಳಿದರೆ ಸಿಗುತ್ತಿಲ್ಲ. ಅವುಗಳು ಮುಳಗಡೆ ಪ್ರದೇಶವಾಗಿದ ಕಾರಣ ಅನುದಾನ ನೀಡುವುದಿಲ್ಲ ಎನ್ನುತ್ತಿದ್ದಾರೆ. ಪ್ರತಿಯೊಂದು ಕುಟುಂಬಗಳು ಪುರ್ನವಸತಿ ಕೇದ್ರಗಳಲ್ಲಿ ಬಂದು ವಾಸ ಮಾಡಿದರೆ ಮಾತ್ರ ಸರಕಾರದಿಂದ ಅನುದಾನ ತರಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಪುರ್ನವಸತಿ ಕೇಂದ್ರಗಳಲ್ಲಿ ದೆವ್ವಗಳು ವಾಸ ಮಾಡುತ್ತವೆ ಎಂದರು. 

ಶಾಸಕರ ಆಪ್ತಸಹಾಯಕರಿಂದ ಅಧಿಕಾರಿಗಳಿಗೆ ಪ್ರಶ್ನೆ! 

ಇಲ್ಲಿನ ತಾಲ್ಲೂಕು ಪಂಚಾಯಿತಿ ಪ್ರಗತಿ ಪರೀಶೀಲನಾ ಸಭೆಯಲ್ಲಿ ಶಾಸಕರ  ನಾಲ್ಕು ಜನ ಆಪ್ತಸಹಾಯಕರಾದ ತಾಲ್ಲೂಕು ಪಂಚಾಯಿತಿ ನಿವೃತ್ತ ನೌಕರ ಎಂ,ಎನ್, ಬಾಗಾದಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ನೌಕರ ಪಾಂಡುರಂಗ ಗಾಯಕವಾಡ, ನರೇಂದ್ರ ಮಾನೆ, ನವೀನ  ಚನಾಳ ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದರು. 

ಶಾಸಕರ ಆಪ್ತಸಹಾಯಕರು ಅಧಿಕಾರಿಗಳಿಗೆ ಪ್ರಶ್ನೆ ಮಾಡುವಂತಿಲ್ಲ, ಶಾಸಕರು ಯಾವುದಾದರು ವಿಷಯವನ್ನು ಮರೆತಿದ್ದರೆ ಚೀಟಿ ಮೂಲಕ ತಿಳಿಸಬಹುದು ಹಾಗೂ ಶಾಸಕರು ಹೇಳಿದ ವಿಷಯವನ್ನು ಬರೆದುಕೊಳ್ಳಬಹುದು. ನೇರವಾಗಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಲು ಅವಕಾಶವಿಲ್ಲ ಹಾಗೂ ಶಾಸಕರ ಖಾಸಗಿ ಆಪ್ತ ಸಹಾಯಕರಿಗೆ ಈ ಸಭೆಯಲ್ಲಿ ಅವಕಾಶವಿಲ್ಲ, ಸರ್ಕಾರಿ ಆಪ್ತ ಸಹಾಯಕರಿಗೆ ಸಭೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ತಾಲ್ಲೂಕು ಪಂಚಾಯಿತಿ ಪ್ರಗತಿ ಪರೀಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಪ್ರಗತಿ ಪರೀಶೀಲನಾ ಸಭೆ ಜರುಗಿತು. ಮಧ್ಯಾಹ್ನ ಸಮಯದಲ್ಲಿ ಶಾಸಕರ ಆಪ್ತಸಹಾಯಕರು ಹಾಗೂ ಬೆರಳಣೆಕೆಗಳಷ್ಟು ಅಧಿಕಾರಿಗಳು ಮಾತ್ರ ಇದ್ದರು. ವೇದಿಕೆಯಲ್ಲಿ ತಾಲೂಕ ಪಂಚಾಯತ ಇಒ ಸಂಜು ಜುನ್ನೂರ ಇದ್ದರು.