ಬಾಲಕೀಯರ ವಸತಿ ನಿಲಯದಲ್ಲಿ ಮೂಲ ಸೌಲಭ್ಯ ಕೊರತೆ : ವಿದ್ಯಾರ್ಥಿಗಳ ಬಂಡಾಯ ಸೌಲಭ್ಯಕ್ಕೆ ಆಗ್ರಹ, ಮನವಿ

ಬಾಲಕೀಯರ ವಸತಿ ನಿಲಯದಲ್ಲಿ ಮೂಲ ಸೌಲಭ್ಯ ಕೊರತೆ : ವಿದ್ಯಾರ್ಥಿಗಳ ಬಂಡಾಯ ಸೌಲಭ್ಯಕ್ಕೆ ಆಗ್ರಹ, ಮನವಿ Lack of basic facilities in girls' hostel: Students demand and appeal for facilities

              ರಾಣೆಬೆನ್ನೂರು  21: ಇಲ್ಲಿನ ಪಂಪಾ ನಗರದ ಬಿಸಿಎಂ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ, ಅನೇಕ ರೀತಿಯ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಈ ಕೂಡಲೇ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ಬುಧವಾರ ಎಸ್‌ಎಫ್‌ಐ ಮುಖಂಡರು ಮತ್ತು  ಕಾರ್ಯಕರ್ತರು, ವಸತಿ ನಿಲಯದ ಮೇಲ್ವಿಚಾರಕರಿಗೆ ತಮ್ಮ ಮನವಿ ಒತ್ತಾಯಿಸಿದರು. ಇಲ್ಲಿನ ಬಾಲಕಿಯರ ವಸತಿ ನಿಲಯದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ, ಇದು ಅತ್ಯಂತ ಖಂಡನೀಯವಾಗಿದ್ದು ಕೂಡಲೇ ಸರಿಪಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.     ಈ ವಸತಿ ನಿಲಯದಲ್ಲಿ ತಾಲೂಕಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ ಆದರೆ ವಸತಿ ನಿಲಯದಲ್ಲಿ ಅಳವಡಿಸಿದೆ ಮೆನೋ ಪ್ರಕಾರ, ಸರ್ಕಾರ ನೀಡಿದ ಸೌಲಭ್ಯ ದಕ್ಕುತ್ತಿಲ್ಲ ಎಂದು ಬಲವಾಗಿ ಆರೋಪಿಸಿದ ವಿದ್ಯಾರ್ಥಿಗಳು, ಎಸ್‌. ಎಫ್‌. ಐ. ಗೆ ತಮ್ಮ ದೂರು ನೀಡಿದ್ದಾರೆ.

             ಉತ್ತಮ ಗುಣಮಟ್ಟದ ಆಹಾರ, ಸಾಂಬಾರ್ ಪದಾರ್ಥಗಳಲ್ಲಿ ಸಮರ​‍್ಕ ಅಡುಗೆ ಎಣ್ಣೆ ಬಳಕೆ ಇಲ್ಲ. ಆ ಸ್ವಚ್ಛತೆ, ರುಚಿ ಇಲ್ಲದ ಆಹಾರ ಸೇವಿಸಿ ವಿದ್ಯಾರ್ಥಿಗಳು ಮಾನಸಿಕವಾಗಿ ನೊಂದಿದ್ದಾರೆ ಅಲ್ಲದೆ ಹಾಜರಾತಿಗೆ ಅನುಗುಣವಾಗಿ ಆಹಾರ ನೀಡುವುದಿಲ್ಲ, ಮತ್ತು ಗ್ರಂಥಾಲಯಗಳಲ್ಲಿ ಸಿಲೇಬಸ್ ಸೇರಿ ವಿಷಯವಾರು ಅಗತ್ಯ ಪುಸ್ತಕಗಳು ದೊರೆಯುತ್ತಿಲ್ಲ ಮತ್ತು ಎರಡು ರೂಂಗಳಲ್ಲಿ ಫ್ಯಾನ್ ಹಾಗೂ ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಗುಣಮಟ್ಟದ ಆಹಾರ, ಕಡ್ಡಾಯವಾಗಿ ನಿಲಯ ಪಾಲಕರು ವಸತಿ ನಿಲಯದಲ್ಲಿ ಹಾಜರಿರಬೇಕು, ಮೇನೂ ಚಾರ್ಟ್‌ ಪ್ರಕಾರ ಊಟ ನೀಡಬೇಕು. ಬಿಸೀನೀರು, ಶುದ್ಧ ಕುಡಿಯುವ ನೀರು ಪರೀಶೀಲಿಸಿಕೊಡಬೇಕು. ಸಿಲೆಬಸ್ ಪ್ರಕಾರ ಪುಸ್ತಕಗಳು ಇಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮುಖಂಡರು ಆಗಮಿಸಿದ್ದಾರೆ. ಮನವಿಸಲಿಕೆ ಮುಂಚೂಣಿಯಲಿ, ತೇಜಸ್ವಿನಿ ಎನ್, ಗಿರಿಜಮ್ಮ ತಾವರಗುಂದಿ, ಪಲ್ಲವಿ ಬಿ.ಎಚ್, ಅನುಷಾ ಪಿ.ಎನ್, ಸಾಕ್ಷಿ ಡಿ.ಬಿ, ವೀಣಾ ಬಿ ಸವಿತಾ ಲಮಾಣಿ, ನಂದಾ ಸಿ.ಕೆ, ದೀಪಾ ಬೆನ್ನೂರ, ಮಧು ಗುಬ್ಬಿ ಐಶ್ವರ್ಯ ಸೇರಿದಂತೆ ವಸತಿ ನಿಲಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.