ನವದೆಹಲಿ, ಜುಲೈ 1: ದೇಶಾದ್ಯಂತ ಎರಡನೇ ಹಂತದ ಅನ್ ಲಾಕ್
ಕ್ರಮಗಳು ಜಾರಿಗೊಳ್ಳುತ್ತಿರುವ ಬೆನ್ನಲ್ಲೇ
ದೇಶೀಯ ಅಡುಗೆ ಅನಿಲ ಸಿಲಿಂಡರ್ ದರಗಳನ್ನು
ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ೧೪.೨ ಕೆ ಜಿ ಎಲ್ ಪಿ ಜಿ
ಸಿಲಿಂಡರ್ ಮಾರುಕಟ್ಟೆ ಬೆಲೆಯನ್ನು
ದೆಹಲಿಯಲ್ಲಿ ಜುಲೈ ೧ ರಿಂದ
೫೯೪ ರೂಗೆ ಹೆಚ್ಚಿಸಲಾಗಿದೆ ಎಂದು ಭಾರತೀಯ
ತೈಲ ನಿಗಮ ಹೇಳಿದೆ. ಇದಕ್ಕೂ,
ಮೊದಲು ಜೂನ್ ತಿಂಗಳಲ್ಲಿ ಸಿಲಿಂಡರ್
ಬೆಲೆಯನ್ನು ೫೯೩ ರೂಪಾಯಿಗಳಿಗೆ ಹೆಚ್ಚಿಸಿತ್ತು.
ಎಲ್ ಪಿ ಜಿ ದರಗಳನ್ನು ಸತತ ಎರಡನೇ ತಿಂಗಳು
ಹೆಚ್ಚಿಸಲಾಗಿದೆ. ಜೂನ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಬೆಲೆಯನ್ನು ೧೧.೫೦ ರೂಪಾಯಿಗೆ ಹೆಚ್ಚಿಸಲಾಗಿತ್ತು. ಎಲ್
ಪಿ ಜಿ ದರಗಳನ್ನು ಪ್ರತಿ ತಿಂಗಳ ಆದಾರದ ಮೇಲೆ ಪರಿಷ್ಕರಿಸಲಾಗುತ್ತಿದೆ. ಕೊಲ್ಕತ್ತಾ, ಮುಂಬೈ ಹಾಗೂ ಚೆನ್ನೈನಲ್ಲಿ
ಇಂದಿನಿಂದ ಎಲ್ ಪಿ ಜಿ ಸಿಲಿಂಡರ್
ಬೆಲೆಗಳು ದುಬಾರಿಯಾಗಲಿವೆ. ಕೊಲ್ಕತ್ತಾದಲ್ಲಿ
೪.೫ ರೂಪಾಯಿ ಹೆಚ್ಚಳದೊಂದಿಗೆ ೬೨೦.೫೦ ರೂ ತಲುಪಿದೆ,
ಮುಂಬೈನಲ್ಲಿ ೩.೫೦ ರೂಪಾಯಿ ಹೆಚ್ಚಳದೊಂದಿಗೆ ೫೯೪ರೂಗೆ
ಹೆಚ್ಚಳಗೊಂಡಿದೆ, ಚೆನ್ನೈನಲ್ಲಿ ೪ ರೂಪಾಯಿ ಏರಿಕೆಯೊಂದಿಗೆ ೬೧೦.೫೦ ರೂಪಾಯಿ ಆಗಲಿದೆ.
ಹೋಟೆಲ್, ರೆಸ್ಟೂರೆಂಟ್ ಗಳಲ್ಲಿ ಬಳಸುವ
೧೯ ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ ದೆಹಲಿಯಲ್ಲಿ
ನಾಲ್ಕು ರೂಪಾಯಿ ಅಗ್ಗವಾಗಲಿದ್ದು, ಆದರೆ ಕೊಲ್ಕತ್ತಾ, ಮುಂಬೈ ಹಾಗೂ ಚೆನ್ನೈಗಳಲ್ಲಿ ಬೆಲೆಗಳು ಹೆಚ್ಚಳವಾಗಲಿವೆ. ದೆಹಲಿಯಲ್ಲಿ
ಈ ಸಿಲಿಂಡರ್ ಬೆಲೆ ೧,೧೩೯.೫೦ ನಿಂದ ೧,೧೩೫.೫೦ರೂಗೆ
ಇಳಿಯಲಿದೆ. ಕೊಲ್ಕತ್ತಾದಲ್ಲಿ ೪ ರೂಪಾಯಿ ಏರಿಕೆಯೊಂದಿಗೆ ೧,೧೯೭.೫೦ ರೂ,
ಮುಂಬೈನಲ್ಲಿ ಮೂರು ರೂಪಾಯಿ ಏರಿಕೆಯೊಂದಿಗೆ ೧,೦೯೦, ಚೆನ್ನೈನಲ್ಲಿ ೧ ರೂಪಾಯಿ ಏರಿಕೆಯೊಂದಿಗೆ ೧೨೫೫ ರೂ ಗಳಾಗಲಿದೆ.