6ನೇ ತರಗತಿ ಕನ್ನಡ ಪುಸ್ತಕದ ವಿರುದ್ಧ ಎಲ್ಡಿಎಸ್‌ಒ ಆಕ್ಷೇಪ
LDSO objects to 6th-standard Kannada textbook
ವಿಜಯನಗರ 26: ಎನ್ಸಿಇಆರ್ಟಿಯು ಸಿಬಿಎಸ್‌ಇಯ 6ನೇ ತರಗತಿಯ ಕನ್ನಡ ಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಪುಸ್ತಕಕ್ಕೆ ಕೃಷ್ಣ’ ಎಂದು ಹೆಸರಿಟ್ಟಿದೆ. ಕನ್ನಡದ ವೈಚಾರಿಕ ಪರಂಪರೆ, ಸಂಸ್ಕೃತಿಯನ್ನು ಬದಿಗೆ ಸರಿಸಿ ಈ ಪುಸ್ತಕವನ್ನು ಪ್ರಕಟಿಸುವ ಮೂಲಕ ಎನ್ಸಿಇಆರ್ಟಿ ರಾಜಕೀಯ-ಸಾಂಸ್ಕೃತಿಕ ದಬ್ಬಾಳಿಕೆ ನಡೆಸಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ’ ಪ್ರಕಟಿಸಿದ ಪಠ್ಯಪುಸ್ತಕಗಳಿದ್ದರೂ ಅವುಗಳನ್ನು ಪರಿಗಣಿಸದೇ, ಕನ್ನಡದ ಅಸ್ಮಿತೆಗೆ ಅಪಚಾರವೆಸಗುವ ಈ ಪುಸ್ತಕವನ್ನು ಎನ್ಸಿಇಆರ್ಟಿಯು ನಾಡಿನ ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ. ಈ ದಾಳಿಯು ಎನ್‌ಈಪಿ-2020ರ ಹೇರಿಕೆಯ ಭಾಗವಾಗಿದೆ. ಈ ಪಠ್ಯ ಪುಸ್ತಕದ ತಯಾರಿಯಲ್ಲಿ ಕೂಡ ನಾಡಿನ ಯಾವುದೇ ಶಿಕ್ಷಣ ತಜ್ಞರು ಹಾಗೂ ಚಿಂತಕರೊಂದಿಗೆ ಸಮಾಲೋಚನೆ ನಡೆಸಿಲ್ಲ. ಎನ್ ಸಿ ಈ ಆರ್ ಟಿಯ ಈ ಅಪ್ರಜಾತಾಂತ್ರಿಕ ಮತ್ತು ಧಮನಕಾರಿ ನಡೆಯನ್ನು ಎಐಡಿಎಸ್‌ಓ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ.
ಅಲ್ಲದೆ, ಸಮತೋಲನ ಆಹಾರ’ ಪಾಠದಲ್ಲಿ ಉದ್ದೇಶಪೂರ್ವಕವಾಗಿ ಮೀನು, ಮಾಂಸದ ವಿಷಯಗಳನ್ನು ಕೈಬಿಟ್ಟು ಕೇವಲ ಸಸ್ಯಹಾರಗಳ್ನನಷ್ಟೇ ಉಲ್ಲೇಖಿಸಲಾಗಿದೆ. ಕೂಡಲೇ ಎನ್ಸಿಇಆರ್ಟಿ ಈ ಪುಸ್ತಕವನ್ನು ಹಿಂಪಡೆಯಬೇಕೆಂದು ಎಐಡಿಎಸ್‌ಓ ವಿಜಯನಗರ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ. ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯ ಚಹರೆ ಈ ಪಠ್ಯ ಪುಸ್ತಕದಲ್ಲಿ ಎಳ್ಳಷ್ಟೂ ಇಲ್ಲ ಎಂಬುದು ವಿಷಾದನೀಯ. ರಾಜ್ಯ ಸರ್ಕಾರ, ಆಚಾರ-ವಿಚಾರಗಳನ್ನು ಒಳಗೊಂಡ, ಸಾಹಿತ್ಯ-ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಕೊಡುವ ಪುಸ್ತಕವನ್ನು ಸಿದ್ಧಪಡಿಸಿ, ವಿದ್ಯಾರ್ಥಿಗಳಿಗೆ ಒದಗಿಸಬೇಕು. ಶಿಕ್ಷಣದ ವಿಷಯದಲ್ಲಿ ರಾಜ್ಯ ಸರ್ಕಾರವು ನಿರ್ಣಾಯಕ ಪಾತ್ರ ಹೊಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸ್ಪಷ್ಟ ನಿಲುವು ತೆಗೆದುಕೊಂಡು ಎನ್ ಸಿ ಇ ಆರ್ ಟಿ ಪುಸ್ತಕವನ್ನು ತಿರಸ್ಕರಿಸಬೇಕೆಂದು ಎಐಡಿಎಸ್‌ಓ ವಿಜಯನಗರ ಜಿಲ್ಲಾ ಸಮಿತಿಯು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 