ಘನಮಠೇಶ್ವರ ಶಿಕ್ಷಣಸಂಸ್ಥೆಯಲ್ಲಿ ನಡೆದ ಕುವೆಂಪು ಜನ್ಮದಿನಚಾರಣೆ

ಘನಮಠೇಶ್ವರ ಶಿಕ್ಷಣಸಂಸ್ಥೆಯಲ್ಲಿ ನಡೆದ ಕುವೆಂಪು ಜನ್ಮದಿನಚಾರಣೆ Kuvempu's birthday celebration held at Ghanamateshwara Educational Institute

                  ತಾಳಿಕೋಟೆ 30: ಪಟ್ಟದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ: 29/12/2025, ಸೋಮವಾರದಂದು ಕುವೆಂಪು ಜನ್ಮದಿನಚಾರಣೆ ಆಚರಿಸಲಾಯಿತು. ಹಾಗೂ ರಾಜ್ಯಮಟ್ಟದ ಒಲಿಂಪಿಯಾಡ್ಪರೀಕ್ಷೆ ನಡೆಸಲಾಯಿತು. ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಎಂ.ಸಜ್ಜನ ಅವರು ಮಾತನಾಡಿ ಕುವೆಂಪು ಅಂದರೆ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಜನ್ಮದಿನವನ್ನು ಪ್ರತಿವರ್ಷ ಡಿಸೆಂಬರ್ 29 ರಂದು ಅತ್ಯಂತ ಗೌರವ ಮತ್ತು ಹೆಮ್ಮೆಯಿಂದ ಆಚರಿಸಲಾಗುತ್ತದೆ. ಈ ದಿನವನ್ನು “ಕುವೆಂಪು ಜಯಂತಿ” ಎಂದು ಕರೆಯುತ್ತಾರೆ. ಕುವೆಂಪು ಕನ್ನಡ ಸಾಹಿತ್ಯದ ಮಹಾನ್ ಕವಿ, ಕಾದಂಬರಿಕಾರ, ನಾಟಕಕಾರ ಮತ್ತು ಚಿಂತಕ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

                ಅವರು ಪ್ರತಿಪಾದಿಸಿದ “ವಿಶ್ವಮಾನವ” ತತ್ತ್ವ ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ಸಂದೇಶವನ್ನು ನೀಡುತ್ತದೆ.ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ (1967) ಕೃತಿ: ಶ್ರೀರಾಮಾಯಣ ದರ್ಶನಂಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಕನ್ನಡ ಕುಲಪತಿ-ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಬೋಧನಾ ಭಾಷೆಯಾಗಿ ಪ್ರೋತ್ಸಾಹಿಸಿದರುವಿಶ್ವಮಾನವ ತತ್ತ್ವದ ಪ್ರತಿಪಾದನೆ, ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ಸಂದೇಶಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದ ನವೋದಯ ಚಳವಳಿಯ ಮುಂಚೂಣಿ ನಾಯಕಮಕ್ಕಳ ಸಾಹಿತ್ಯ, ಕವನ, ಕಾದಂಬರಿ, ನಾಟಕ, ವಿಮರ್ಶೆ ಎಲ್ಲ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ. ಇವರ ಸ್ಪೂರ್ತಿದಾಯಕ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.  

                ಈ ಸಂಸ್ಥೆಯಲ್ಲಿ ರಾಜ್ಯಮಟ್ಟದ ಒಲಿಂಪಿಯಾಡ್ ಪರೀಕ್ಷೆಯನ್ನು ನಡೆಸುವುದರ ಮೂಲಕ ಪ್ರತಿಭೆಗೆ ವೇದಿಕೆ ಮತ್ತು ಸಾಧನೆಗೆ ದಾರಿ ಮಾಡಿಕೊಡಲಾಯಿತು.  ಈ ಸ್ಪರ್ದೆಯಲ್ಲಿ ಭಾಗವಹಿಸಿದ ಒಟ್ಟು ವಿದ್ಯಾರ್ಥಿಗಳು  295.  ಈ ಪರೀಕ್ಷೆಯಲ್ಲಿ ಭಾಗವಹಿಸಿದಂತ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಕೌಶಲ್ಯ ಹೆಚ್ಚಿಸಲಾಯಿತು. ಅಷ್ಟೆಅಲ್ಲದೇ ಪಠ್ಯಪುಸ್ತಕಗಳನ್ನು ಮೀರಿದವಿಷಯದ ಜ್ಞಾನವನ್ನು ಬೆಳೆಸುವುದು ಹಾಗೂ ವಿದ್ಯಾರ್ಥಿಗಳಿಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ತುಂಬುವುದು.

                ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರಾಜ್ಯದ ಮನ್ನಣೆ (ಪದಕಗಳು,ಪ್ರಮಾಣಪತ್ರ) ಪಡೆಯುವುದರ ಮೂಲಕ ಅವರನ್ನು ಉನ್ನತ ಶಿಕ್ಷಣಕ್ಕೆ ಸಿದ್ದಪಡಿಸುವುದಾಗಿದೆ. ಈಸಮಯದಲ್ಲಿ ಸಂಸ್ಥೆಯಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್‌.ಎಸ್‌.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್‌.ಪಾಟೀಲ, ಸರ್ವಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.