ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಕುಸುಗಲ್ ಗ್ರಾಮ ಸೇರ್ಪಡೆ: ಶಾಸಕ ಎನ್‌.ಹೆಚ್‌. ಕೋನರಡ್ಡಿ

ಹು-ಧಾ  ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಕುಸುಗಲ್ ಗ್ರಾಮ ಸೇರ್ಪಡೆ:  ಶಾಸಕ ಎನ್‌.ಹೆಚ್‌. ಕೋನರಡ್ಡಿ  Kusugal village included in the jurisdiction of Hu-Dha Urban Development Authority: MLA N.H. Konared

ಹುಬ್ಬಳ್ಳಿ (ಕುಸುಗಲ್) : ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮವನ್ನು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರೆ​‍್ಡ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಮಾಡಿದೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು.  

ಅವರು ದಿನಾಂಕ: 22 ರಂದು ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರೂ. 10.00 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಪಂಗಡದ (ಖಖಿ) ಓಣಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, ರೂ. 17.00 ಲಕ್ಷ ವೆಚ್ಚದಲ್ಲಿ ಮಹಿಳೆಯರಿಗೆ ಸಮುದಾಯ ಆಧಾರಿತ ಸಂಜೀವಿನಿ ಶೆಡ್ (ಓಖಐಒ) ನಿರ್ಮಾಣ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿ ನಿರ್ಮಿಸಿರುವ ಪ್ಲಾಟ್ ನಂ:764 ರಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನದ ಸಮುದಾಯ ಭವನ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ರಂಗಮಂದಿರ ಹಾಗೂ ನೂತನ 2 ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಿ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕಿಲ್ಲೆ ರಸ್ತೆ ಸುಧಾರಣೆ ಹಾಗೂ ಸಿಡಿ ನಿರ್ಮಾಣ, ಕಿಲ್ಲೆಯ ಮುಸ್ಲಿಂ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು. ಕುಸುಗಲ್ ಗ್ರಾಮದ ಹುಬ್ಬಳ್ಳಿಗೆ ಸಮೀಪ ಇರುವುದರಿಂದ ಇದರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ ಎಂದು ಕೋನರಡ್ಡಿ ಹೇಳಿದರು.  

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಗರೀಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ತಿತಿಗತಿಗಳ ಬಗ್ಗೆ ರಾಜ್ಯಾದ್ಯಂದ ಸಮೀಕ್ಷೆ ಪ್ರಾರಂಭದ ದಿನದಂದು ಕುಸುಗಲ್ ಗ್ರಾಮದಲ್ಲಿ ಚಾಲನೆ ನೀಡಲಾಯಿತು.   

ಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ. ಮಜ್ಜಗಿ, ಬಿಇಓ ಉಮೇಶ ಭೂಮಕ್ಕನವರ, ಬಿಸಿಎಂ ಅಧಿಕಾರಿ ನಾಗರತ್ನಾ ಕ್ಯಾಸನೂರ, ಎಇಇ ಬಿ.ಎನ್‌. ಗೌಡರ, ಗ್ರಾಮದ ಹೀರೀಯರಾದ ಎಫ್‌.ಡಿ. ಪಾಟೀಲ, ಶಿವಣ್ಣ ಹೊಸಮನಿ, ವಿ.ಎಸ್‌. ಕೆಂಚನಗೌಡರ, ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ನೀಲಮ್ಮ ಮಠಪತಿ, ಉಪಾಧ್ಯಕ್ಷ ಶ್ರೀಮತಿ ಜೈತುನಬಿ ನದಾಫ, ಸದಸ್ಯರುಗಳಾದ ರಾಜು ಸಂಕರಡ್ಡಿ, ಮಂಜುನಾಥ ಪಟ್ಟಣಶೇಟ್ಟಿ, ಸೋಮನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಸಂತೋಷ ಗುಡಸಲಮನಿ, ಶಾಕೀರಾಬಾನು ಹುಬ್ಬಳ್ಳಿ, ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಕೆಂಚಪ್ಪ ಶಿವಳ್ಳಿ, ಸರ್ಕಾರಿ ಪ್ರೌಢಶಾಲೆಯ ಅಧ್ಯಕ್ಷ ಕಲ್ಲನಗೌಡ ಕೌಜಗೇರಿ, ಇಬ್ರಾಹಿಂ ಬೆಟಗೇರಿ, ಮುಖಂಡರುಗಳಾದ ರಮೇಶ ಚವ್ವಣ್ಣವರ, ಶಂಭು ಸಂಕರಡ್ಡಿ, ಶಂಕರಗೌಡ ಪಾಟೀಲ, ಮಲಂಗಶಾ ಗುದಗಿ, ವಿರೇಶ ಹಳಕಟ್ಟಿಮಠ, ಅಜಯ ಉಪ್ಪಾರ, ಹುಸೇನಬುಡ್ಡಾ ಮಿರ್ಜಣ್ಣವರ, ಅಶೋಕ ಸಂಕರಡ್ಡಿ, ಶಿವಪ್ಪ ಜಂತ್ಲಿ, ರೆಹಮಾನಸಾಬ ಗುದಗಿ, ಕರಿಯಪ್ಪ ಬಾರಕೇರ, ಮೌಲಾಲಿ ಮಿರ್ಜಣ್ಣವರ, ಗುರುಸಿದ್ದಪ್ಪ ಹುಬ್ಬಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.